This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಚೂರ್ಣಿಕ-ಸರಳವಾದ ನಡೆಯಿರುವ ಒಂದು ಬಗೆಯ ಗದ್ಯ ರಚನೆ.
ಇದನ್ನು ದೇವಗಾಂಧಾರಿ ರಾಗದಲ್ಲಿ ಹಾಡುತ್ತಾರೆ. ತ್ಯಾಗರಾಜ ವಿರಚಿತ ಪ್ರಹ್ಲಾದ
ಭಕ್ತಿ ವಿಜಯವೆಂಬ ಗೇಯ ರೂಪಕದಲ್ಲಿ ಬರುವ "ಜಯತು ಜಯತು ಎಂಬ
ಚೂರ್ಣಿಕೆಯು ಪ್ರಸಿದ್ಧವಾಗಿದೆ.
 
೩೬೬
 
ಚೂರ್ಣಿಕ ವಿನೋದಿನಿ-ಈ ರಾಗವು ೬೬ನೆ ಮೇಳಕರ್ತ ಚಿತ್ರಾಂಬರಿಯ
ಒಂದು ಜನ್ಯರಾಗ.
 
ಸ ರಿ ಗ ಮ ಪ ದ ನಿ ಸ
ಸ ನಿ ದ ನಿ ಪ ಮ ಗ ರಿ ಸ
 
ಚೂಡಾಮಣ ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ.
 
ಸ ರಿ ಗ ಮ ಪ ದ ನಿ ಸ
 
ಸ ಸ ನಿ ದ ಮ ಗ ಸ
 
ಚೆನ್ನ ಕೇಶವಯ್ಯ, ಎ. (೧೮೯೫)-ಚೆನ್ನ ಕೇಶವಯ್ಯನವರು ಕರ್ಣಾಟಕದ
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ನಾಟನಹಳ್ಳಿಯ ಸಂಗೀತದ ಸಣ್ಣಪ್ಪ
ನವರ ಪುತ್ರರಾಗಿ ಜನಿಸಿದರು. ಬಾಲ್ಯದಲ್ಲಿ ಸಂಗೀತ ಶಿಕ್ಷಣವು ಆರಂಭವಾಯಿತು.
ನಂತರ ಮೈಸೂರಿಗೆ ಹೋಗಿ ವಿದ್ವಾನ್ ಶಿವರಾಮಯ್ಯನವರಲ್ಲ, ಮೈಸೂರು
ವಾಸುದೇವಾಚಾರ್ಯರಲ್ಲಿ ಪ್ರೌಢ ಶಿಕ್ಷಣ ಪಡೆದು ಆಚಾರ್ಯರ ಅಚ್ಚುಮೆಚ್ಚಿನ
ಶಿಷ್ಯರಾದರು ಕೃತಿಗಳಿಗೆ ಸ್ವರಸಂಯೋಜನೆ ಮಾಡುವ ಕಲೆಯಲ್ಲಿ ವರಿಣತರಾಗಿ
೧೯೨೮ರಲ್ಲಿ ವಾನುದೇವ ಕೀರ್ತನ ಮಂಜರಿ ಎಂಬ ಕೃತಿಗಳ ಗ್ರಂಥವನ್ನು ಪ್ರಕಟಿಸುವು
ದರಲ್ಲಿ ಗುರುವಿಗೆ ನೆರವಾದರು. ೧೯೪೪ರಲ್ಲಿ ಮೈಸೂರು ಆಸ್ಥಾನ ವಿದ್ವಾಂಸರಾಗಿ
ಮೈಸೂರಿನ ಸಂಗೀತ ಕಲಾಭಿವರ್ಧಿನಿ ಸಭೆಯು ಮೈಸೂರು
ಸದಾಶಿವರಾಯರ ಕೃತಿಗಳ ಗ್ರಂಥವನ್ನು ಪ್ರಕಟಿಸುವುದರಲ್ಲಿ ನೆರವಾದರು. ಮದ್ರಾಸ್
ಮ್ಯೂಸಿಕ್ ಅಕಾಡೆಮಿಯ ತಜ್ಞರ ಸಮಿತಿಯ ಸದಸ್ಯರಾಗಿದ್ದರು ರಾಜ್ಯದ ಸಂಗೀತ
ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ
ಸರ್ಕಾರದ ಪ್ರಶಸ್ತಿಯನ್ನು ಪಡೆದರು.
೧೯೬೩ರಲ್ಲಿ ಗಾನಕಲಾಸಿಂಧು, ೧೯೬೯ರಲ್ಲಿ ಸಂಗೀತ ವಿದ್ಯಾವಾರಿಧಿ, ಸಂಗೀತಕಲಾ
ರತ್ನ ಇತ್ಯಾದಿ ಬಿರುದುಗಳೆಲ್ಲಾ ಲಭಿಸಿವೆ. ಇವರು ಕೆಲವು ಕಾಲ ಮೈಸೂರಿನ
ಶಾರದಾ ವಿಲಾಸ ಹೈಸ್ಕೂಲಿನಲ್ಲಿ ಪಂಡಿತರಾಗಿದ್ದರು. ದಾಸಕೂಟದ ಹರಿದಾಸರ
ಕೃತಿಗಳನ್ನು ಸ್ವರಪಡಿಸಿ ಹರಿದಾಸಕೀರ್ತನ
 
ನೇಮಕವಾದರು.
 
ಸುಧಾಸಾಗರ ಎಂಬ ಮೂರು
 
ಸಂಪುಟಗಳ ಗ್ರಂಥ ಮಾಲೆಯನ್ನು, ಪಲ್ಲವಿಗಳನ್ನು ಕುರಿತು ಒಂದು ಗ್ರಂಥವನ್ನೂ
ಪ್ರಕಟಿಸಿದ್ದಾರೆ. ಮೈಸೂರು ಜಯಚಾಮರಾಜ
ಒಡೆಯರ ೯೪ ಕೃತಿಗಳನ್ನು
ಸ್ವರಪಡಿಸುವುದರಲ್ಲಿ ನೆರವಾಗಿದ್ದಾರೆ.
 
ಹಲವು ಸ್ವಂತ ಕನ್ನಡದ ರಚನೆಗಳನ್ನು
ಮಾಡಿದ್ದಾರೆ. ಗಾಯನದಲ್ಲಿ ಸಂಪ್ರದಾಯಬದ್ಧತೆ, ನಾದಪುಷ್ಟಿ ಮತ್ತು
ಗಾಂಭೀರ್ಯವಿರುವ ಹಿರಿಯ ಘನವಿದ್ವಾಂಸರು.
 
ಅ :