2023-07-04 09:31:03 by jayusudindra
This page has been fully proofread once and needs a second look.
೨೬೫
ಇದು ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು
ಬಗೆಯ ಸುಷಿರವಾದ್ಯ.
ಚುಕ್ಕಿತ
ಇದು ಭರತನಾಟ್ಯದ ಏಳು ಬಗೆಯ ಗಲ್ಲದ ಭೇದಗಳಲ್ಲಿ ಒಂದು
ತುಟಿಗಳನ್ನು ದೊಡ್ಡದಾಗಿ ಬಿಡಿಸಿ ಹಿಡಿದಾಗ ಉಂಟಾಗುವ ಚಿಬುಕರ್ಮ,
ಚುತುರಂಗಿಣಿ
(೧) ಈ ರಾಗವು ೬೬ನೆ ಮೇಳಕರ್ತ ಚಿತ್ರಾಂಬರಿಯ
ಒಂದು ಜನ್ಯರಾಗ.
ಸ ಮ ಗ ಮ ಪ ನಿ ಸ
ಆ
ನಿ ದ ನಿ ಪ ಗ ಮ ಗ ರಿ ಸ
ಕರ್ತವಾಗಿದೆ.
(೨) ಇದೇ ಹೆಸರಿನ ರಾಗವು ಅಸಂಪೂರ್ಣ ಮೇಳ ಪದ್ಧತಿಯ '೬೬ನೆ ಮೇಳ
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ಗ ರಿ ಸ
ಚ್ಯುತ-
ಚ್ಯುತ
ಚ್ಯುತವೆಂದರೆ ಜಾರಿದ ಎಂದರ್ಧ, ಸ್ವರ ಮೇಳದ ಒಂದು ಸ್ವರವು
ಅದರ ಸ್ಥಾನಕ್ಕಿಂತ ಸ್ವಲ್ಪ ತಗ್ಗಿನ ಶ್ರುತಿಯಲ್ಲಿ ಬಂದರೆ ಅದು ಚ್ಯುತ ಸ್ವರವಾಗುತ್ತದೆ.
ಶ್ರುತಿಗಳು ಶುದ್ಧ, ಚ್ಯುತ ಮತ್ತು ತೀವ್ರ ಎಂಬ ಮೂರು ವಿಧ. ಶುದ್ಧವೆಂದರೆ
ಮೇಳದಲ್ಲಿ ಮೂಲಸ್ಥಾನದಲ್ಲಿರುವುದು. ಚ್ಯುತವೆಂದರೆ ಸ್ವಲ್ಪ ತಗ್ಗಾಗಿರುವುದು.
ತೀವ್ರವೆಂದರೆ ಸ್ವಲ್ಪ ಮೇಲಿನ ಸ್ಥಾನದಲ್ಲಿರುವುದು.
ಚ್ಯುತ ಪಂಚಮ
ಚ್ಯುತ ಪಂಚಮ
ಪದ್ಧತಿಯಲ್ಲಿ ಪಂಚಮಕ್ಕಿಂತ ತಗ್ಗಿನಲ್ಲಿ ಬರುವ ಸ್ವರ. ಪಂಚಮವು ಅವಿಕೃತ ಸ್ವರ
ವೆಂದು ಪರಿಗಣಿಸಲ್ಪಟ್ಟ ನಂತರ ಚ್ಯುತ ಪಂಚಮವು ಪ್ರತಿ ಮಧ್ಯಮದ ತೀವ್ರ
ಸ್ವರೂಪವನ್ನು ಸೂಚಿಸುತ್ತದೆ ಎಂದು ಪರಿಗಣಿಸಲಾಗಿದೆ.
ಚ್ಯುತ ಮಧ್ಯಮ
೨೨ ಶ್ರುತಿಗಳಲ್ಲಿ
ಅಂತರ ಗಾಂಧಾರ ಮತ್ತು ಶುದ್ಧ ಮಧ್ಯಮ ಇವುಗಳ ಮಧ್ಯೆ ಇರುವ ಶ್ರುತಿ,
ಇದು ದೇವ ಗಾಂಧಾರಿ ರಾಗದ ಮಾ, ಗರೀ ಎಂಬ ಸ್ವರಗುಚ್ಛದಲ್ಲಿ ಬರುತ್ತದೆ.
ಚ್ಯುತಷಡ್
ಇದು ಕಾಕಲಿ ನಿಷಾದ ಮತ್ತು
ತಾರ ಷಡ್ಡದ ಮಧ್ಯೆ ಬರುವ ಸ್ವರ. ಇದು ಕುರಂಜಿ ರಾಗದಲ್ಲಿ ಬರುತ್ತದೆ.
ಚೂತಮಂಜರಿ
ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಒಂದು ರಾಗ.
ಚೂತಾವಳಿ
ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿಯದ ಒಂದು
ಸ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಸ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ