This page has been fully proofread once and needs a second look.

೩೬೪
 
ಸಂಗೀತ ಪಾರಿಭಾಷಿಕ ಕೋಶ
 
ಪಂಕ್ತಿಗೆ ಸೇರಿದವರು. ಅವರ ಶಾಸ್ತ್ರ ಸಂಸ್ಕಾರ ಬಹು ದೊಡ್ಡದು. ಅವರ

ಸಂಗೀತವು ಮನಃ ಪರಿಪಾಕದ್ದು. ಹೃದಯದಿಂದ ಬಂದದ್ದು. ಅವರ ಶಾರೀರದಲ್ಲಿ

ಅತಿಮನೋಹರವಾದ ಪಲುಕುಬಡಿಯಿತ್ತು. ಅವರ ಸಂಗೀತ ಸ್ವಾನುಭವದಿಂದ
 
ಸಂಗೀತ ಪರವಶತೆಯಾಗುವಂತಹುದು.
 

 
ಚಿಂತಾಮಣಿ-
ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿಯದ ಒಂದು
 
ಜನ್ಯರಾಗ,
ಸ ರಿ ಸ ಮ ಪ ದ ನಿ ಸ
ಸ ಸ ದ ಪ ಮ ಗ ರಿ ಸ
 
ಜನ್ಯರಾಗ,
 

ಸ ಸ ದ ಪ ಮ ಗ ರಿ ಸ
ಭಾಷಾಂಗರಾಗ, ರಿಷಭ, ಮಧ್ಯಮ, ಧೈವತ ಮತ್ತು ನಿಷಾದವು ರಾಗ ಛಾಯಾ

ಸ್ವರಗಳು, ಪರಿಗರಿ ಎಂಬುದು ವಿಶೇಷ ಪ್ರಯೋಗ, ಕರುಣರಸ ಪ್ರಧಾನ ರಾಗ ಹಾಗೂ

ಗಮಕವರಿಕರಕ್ತಿರಾಗ, ರಾತ್ರಿ ವೇಳೆಯು ಇದರ ಗಾನ ಕಾಲ. ಶ್ಯಾಮಾಶಾಸ್ತ್ರಿಗಳು

ರಚಿಸಿರುವ 'ದೇವಿ ಬೋವ ಸಮಯಮಿದೇ' ಎಂಬ ಕೃತಿಯು ಈ ರಾಗದ ಸುಪ್ರಸಿದ್ಧ

ಕೃತಿ.
 

 
ಚಿಂತಾರಮಣಿ-
ಈ ರಾಗವು ೫೨ನೆ ಮೇಳಕರ್ತ ರಾಮಕ್ರಿಯದ ಒಂದು
 

ಸ ಗ ಮ ಪ ದ ನಿ
 

ದ ಪ ಮ ಸ ಗ ರಿ ಸ ನಿ
 

 
ಚಿರಂಟ-
ಈ ರಾಗವು ೭ ಮೇಳಕರ್ತ ಸೇನಾವತಿಯ ಒಂದು ಜನ್ಯರಾಗ

ಸ ರಿ ಗ ಪ ದ ನಿ ಸ
 

ಸ ನಿ ದ ಪ ಗ ರಿ ಸ
 
ಜನ್ಯರಾಗ,
 

 

 
ಚಿಕ್ಕ ಹ್ನ
(೧) ಇದು ಭರತನಾಟ್ಯದ ಗಲ್ಲದ ಭೇದಗಳಲ್ಲಿ ಒಂದು ವಿಧ.

ವ್ಯಾಧಿ, ಭಯ, ರೋದನ, ಮರಣ, ವ್ಯಾಯಾಮ ಇತ್ಯಾದಿಗಳನ್ನು ಸೂಚಿಸಲು

ತುಟಿಗಳನ್ನು ಗಟ್ಟಿಯಾಗಿ ಒತ್ತಿ ಹಿಡಿಯುವುದು (೨) ಇದು ಭರತ ನಾಟ್ಯದಲ್ಲಿ

ಐದು ವಿಧವಾದ ಕಟೀ ಭೇದಗಳಲ್ಲಿ ಒಂದು ಬಗೆ. ಕಟೀಮಧ್ಯವು ವಲಿತವಾದಲ್ಲಿ

ಅದು ಚಿಹ್ನೆ .
 

 
ಚಿಹ್ನೆ-
ಭರತನಾಟ್ಯ ಹನ್ನೆರಡು ಹಸ್ತ ಪ್ರಾಣಗಳಲ್ಲಿ ಇದೊಂದು ಬಗೆ.

ನಾಟ್ಯ ಪ್ರದರ್ಶನದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ವಸ್ತುಗಳ ಸ್ಥಾವರ ಜಂಗಮತ್ವವನ್ನು

ತಿಳಿಸುವ ಚಿಹ್ನೆಗಳು ಎಂಟು. ವ್ಯಕ್ತಿಯ ಆಕಾರವನ್ನು ತೋರಿಸುವುದು,

ಮುಖವನ್ನು ತೋರಿಸುವುದು, ಅವುಗಳಿರುವ ಸ್ಥಳಗಳನ್ನು ತೋರಿಸುವುದು. ವ್ಯಕ್ತಿಯ

ಧ್ವಜ ಲಾಂಛನಗಳನ್ನು ಸೂಚಿಸುವುದು, ಅವನಿಂದ ಆಗುವ ಪ್ರಯೋಜನ, ಅವನ

ಪ್ರಭಾವ ವ್ಯಾಪ್ತಿಗಳನ್ನು ಪ್ರದರ್ಶಿಸುವುದು, ಅವನ ಚೇಷ್ಟೆಗಳನ್ನು ಸೂಚಿಸುವುದು

ಮುಂತಾದ ಎಂಟು ಲಕ್ಷಣಗಳ ಹಸ್ತಕ್ಕೆ ಚಿಹ್ನೆ ಎಂದು ಹೆಸರು.