2023-06-25 23:29:05 by ambuda-bot
This page has not been fully proofread.
ಸಂಗೀತದ ಪಾರಿಭಾಷಿಕ ಕೋಶ
ಅಭೀರ-ಸೋಮನಾಧನ ರಾಗವಿಬೋಧವೆಂಬ ಗ್ರಂಥದಲ್ಲಿ ಹೇಳಿರುವ
ಒಂದು ರಾಗ.
-
ಅಭುಗ್ನ - ಭರತನಾಟ್ಯದಲ್ಲಿ ಇದು ಒಂದು ಕ್ರಿಯೆ. ಸ್ವಲ್ಪ ಬಗ್ಗಿರುವ ಎದೆ,
ಉನ್ನತವಾದ ಬೆನ್ನು ಇದ್ದು ಅಂಸವು ಶಿಥಿಲತ್ವದಲ್ಲಿರುವುದು. ಸಂಭ್ರಮ,
ವಿಷಾದ, ಮೂರ್ಛ, ಉನ್ಮಾದ ಮೊದಲಾದವನ್ನು ಸೂಚಿಸಲು ಉಪಯೋಗಿಸುವ
ಕ್ರಿಯೆ.
ಅಭೋಗಚರಣ – ವಾಗ್ಗೇಯಕಾರನ ಮುದ್ರೆ ಅಥವಾ ಅಂಕಿತವಿರುವ
ಕೃತಿಯ ಕೊನೆಯ ಚರಣ. ಕೃತಿಯಲ್ಲಿ ಹಲವು ಚರಣಗಳಿದ್ದರೆ ಅಭೋಗ ಚರಣದ
ವಿಚಾರವುಂಟಾಗುತ್ತದೆ ಒಂದೇ ಚರಣವಿದ್ದರೆ ಅದೇ ಮುದ್ರಾಚರಣವಾಗುತ್ತದೆ.
ಅಭೋಗ ಚರಣದಲ್ಲಿ ಎರಡು ವಿಧಗಳುಂಟು.
(೧) ವಾಗ್ಗೇಯಕಾರನ ಮುದ್ರೆ ಇರುವ ಚರಣ
(೨) ಮುದ್ರೆಯು ಚರಣದಲ್ಲಿಲ್ಲದೆ ಪಲ್ಲವಿ ಅಥವಾ ಅನುಪಲ್ಲವಿಯಲ್ಲಿರುವುದು,
ಅಭೋಗಿ -ಇದು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು ಜನ್ಯ
ರಾಗ. ಇದೊಂದು ಉಪಾಂಗರಾಗ, ಆಭೋಗಿ ಎಂದು ಕರೆಯುವುದುಂಟು,
ಸ ರಿ ಗ ಮ ದ ಸ
ಸ ದ ಮ ಗ ರಿ ಸ
ಆರೋಹಣ ಅವರೋಹಣಗಳಲ್ಲಿ ಪಂಚಮನಿಷಾದಗಳಿಲ್ಲ. ಆದ್ದರಿಂದ ಔಡವ-ಔಡವ
ಭೇದ, ಮಧ್ಯಮ, ಋಷಭ ಮತ್ತು ದೈವತಗಳು ಜೀವಸ್ವರಗಳು, ನ್ಯಾಸ ಮತ್ತು
ಛಾಯಾಸ್ವರಗಳು. ಪಂಚಮಹೀನತ್ವದಿಂದ ಭಕ್ತಿಭಾವರಸಪುಷ್ಟಿ ಯಾಗುತ್ತದೆ.
ಸಾರ್ವಕಾಲಿಕರಾಗ, ರಾಗವಿಸ್ತರಣೆ ಮಾಡುವಾಗ ಶ್ರೀರಂಜಿನಿ ರಾಗಕ್ಕೆ ಜಾರದಂತೆ
ಗಮನವಿಟ್ಟು ಹಾಡಬೇಕು
ಭಕ್ತಿರಸ ಪ್ರಧಾನವಾದ ರಾಗ ತ್ಯಾಗರಾಜರ ( ಮನಸು
ನಿಲ್ಪ ಶಕ್ತಿಲೇಕಪೋತೇ " ಮತ್ತು : ನನ್ನು ಬೋವ ನೀಕಿಂತ ತಾಮನನಾ ? ಎಂಬ
ಕೃತಿಗಳೂ, ಪಟ್ಟಂ ಸುಬ್ರಹ್ಮಣ್ಯ ಅಯ್ಯರ್‌ರವರ - ಮನಸಾಮ್ರದ ಗರ್ವಮೇಟಿಕೇ ?
ಎಂಬ ಕೃತಿಯೂ, ಗೋಪಾಲಕೃಷ್ಣ ಭಾರತಿಯ - ಸಭಾಪತಿಕ್ಕು ವೇರುದೈವಂ' ಎಂಬ
ಕೃತಿಯು ಈ ರಾಗದಲ್ಲಿರುವ ಪ್ರಸಿದ್ಧ ಕೃತಿಗಳು,
6
ಅಭಂಗ (೧) ಒಂದು ಲಘು ಮತ್ತು ಪ್ಪತವಿರುವ ನಾಲ್ಕು ಮಾತ್ರಾ
ಕಾಲದ ಒಂದು ತಾಳವಿಶೇಷ.
(೨) ಮಧ್ಯಯುಗದಲ್ಲಿ ಮಹಾರಾಷ್ಟ್ರದ ಭಕ್ತಶ್ರೇಷ್ಠರು ತಮ್ಮ ಕಾವ್ಯ ಮತ್ತು
ಸಂಗೀತ ರಚನೆಯಲ್ಲಿ ಬಳಸಿರುವ ಛಂದಸ್ಸು, ಇದನ್ನು ಮೊದಲು ಚಕ್ರಧರನೆಂಬುವನು
ರೂಢಿಗೆ ತಂದನು. ನಂತರ ಮಹಾನುಭವ ಪಂಥದವರಿಂದ ಬೆಳೆಸಲ್ಪಟ್ಟು, ಮುಂದೆ
ಸಂತಜ್ಞಾನೇಶ್ವರ (೧೨೭೫-೧೨೯೬) ಮುಂತಾದ ಭಕ್ತಶ್ರೇಷ್ಠರಿಂದ ಬಲಗೊಂಡಿತು.
ನಂತರ ಸಂತ ತುಕಾರಾಮನ (೧೬೦೮-೧೬೫೦) ಕೈಯಲ್ಲಿ ಉನ್ನತಾವಸ್ಥೆಯನ್ನು