This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸಂಗೀತ ಶಿಕ್ಷಣ ಪಡೆದು ಹತ್ತನೆ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದು ಸೋದರಮಾವ
ರಾಮಚಂದ್ರರಾಯರಲ್ಲಿ ಶಿಕ್ಷಣವನ್ನು ಮುಂದುವರಿಸಿ ಪಾಂಡಿತ್ಯವನ್ನು ಪಡೆದರು.
ಸಂಗೀತ ಕ್ಷೇತ್ರದ ಹಿರಿಯ ವಿದ್ವಾಂಸರಾದ ಅರಿಯಾ ಕುಡಿ, ಮಧುರೆ ಮಣಿ,
ಆಲತ್ತೂರು ಸಹೋದರರು ಮುಂತಾದವರ ಗಾಯನದಿಂದ ಪ್ರಭಾವಿತರಾದರು.
ಗಂಭೀರವಾದ ಶಾರೀರ ಸಂಪತ್ತು ಇರುವ ಇತರ ಸಂಪ್ರದಾಯ ಬದ್ಧವಾದ ಲಯ
ಶುದ್ಧತೆಯಿಂದ ಕೂಡಿರುವ ಗಾಯನವು ಇವರದು.
 
೩೬೩
 
ಚಿಂತನಪಲ್ಲಿ ರಾಮಚಂದ್ರರಾಯರು-ಇವರು ಕರ್ಣಾಟಕದ ಸಂಗೀತ
ಗಾರರ ಮನೆತನಕ್ಕೆ ಸೇರಿದ ಪ್ರಸಿದ್ಧ ಸಂಗೀತ ವಿದ್ವಾಂಸರು. ರಾಮಚಂದ್ರರಾಯರ
ತಂದೆ ಸಂಗೀತರತ್ನ ಚಿಂತನಪಲ್ಲಿ ವೆಂಕಟರಾಯರು. ವಿದ್ವಾನ್ ವೆಂಕಟಾಚಲಯ್ಯ
ನವರು ರಾಯರ ಚಿಕ್ಕಪ್ಪ, ಏಳನೆ ವಯಸ್ಸಿನಲ್ಲಿ ಚಿಕ್ಕಪ್ಪನವರಲ್ಲಿ ಸಂಗೀತ ಶಿಕ್ಷಣ
ಆರಂಭವಾಯಿತು, ತರುವಾಯ ತಂದೆ ವೆಂಕಟರಾಯರು ಮತ್ತು ಸೋಮೇಶ್ವರ
ಭಾಗವತರಲ್ಲೂ ಶಿಕ್ಷಣ ಪಡೆದು ಅಣ್ಣಾಮಲೆ ಸಂಗೀತ ಕಾಲೇಜಿನಲ್ಲಿ ಪೊನ್ನಯ್ಯ
ಪಿಳ್ಳೆಯವರಲ್ಲಿ ಶಿಕ್ಷಣ ಪಡೆದು ವಿದ್ವಾಂಸರಾದರು. ೧೯೩೪ರಲ್ಲಿ ತಮ್ಮ ೧೮ನೆ
ವಯಸ್ಸಿನಲ್ಲಿ ಕಚೇರಿ ಗಾಯನ ಆರಂಭಿಸಿದರು ಭಾರತಾದ್ಯಂತ ಪ್ರವಾಸಮಾಡಿ
 
ಸಂಗೀತ ಕಚೇರಿ ಮಾಡಿ ಪ್ರಸಿದ್ಧರಾಗಿದ್ದಾರೆ ನಾಲ್ವಡಿ ಕೃಷ್ಣರಾಜ ಒಡೆಯರು
ಮತ್ತು ಹಲವು ಮಠಾಧಿಪತಿಗಳಿಂದ ಸನ್ಮಾನ ಪಡೆದಿದ್ದಾರೆ. ೧೯೬೯ರಲ್ಲಿ
ರಾಜ್ಯ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಲಭಿಸಿತು. ಉತ್ತಮ ಶಾರೀರ,
ಮನೋಧರ್ಮ, ಕಷ್ಟವಾದ ಪಲ್ಲವಿಗಳನ್ನು ಲೀಲಾಜಾಲವಾಗಿ ಹಾಡುವುದು, ಶುದ್ಧ
ಸಂಪ್ರದಾಯ, ಮೇಲ್ಮಟ್ಟದ ಕಲಾಭಿಜ್ಞತೆ ಇವರ ವೈಶಿಷ್ಟ್ಯ
 
ಚಿಂತನಪಲ್ಲಿ ವೆಂಕಟರಾಯರು
 
ಜಿಲ್ಲೆಯ
 
(೧೮೭೫-೧೯೬೯)-ವೆಂಕಟರಾಯರು
ಬಿಜಾಪುರದ ಸುಲ್ತಾನರ ಆಳ್ವಿಕೆಯ ಕಾಲದಲ್ಲಿ ಪ್ರಸಿದ್ಧಿ ಪಡೆದಿದ್ದ ಸಂಗೀತ ವಿದ್ವಾಂಸರ
ಮನೆತನಕ್ಕೆ ಸೇರಿದವರು. ೧೮೭೫ರಲ್ಲಿ ಕರ್ಣಾಟಕದ ಕೋಲಾರ
ಗೌರೀಬಿದನೂರು ತಾಲ್ಲೂಕಿನ ಹುಣಸನ ಹಳ್ಳಿಯಲ್ಲಿ ಜನ್ಮತಾಳಿದರು ತಮ್ಮ
ಆರನೆ ವಯಸ್ಸಿನಲ್ಲಿ ಸಂಗೀತ ಶಿಕ್ಷಣ ಪಡೆಯಲು ಆರಂಭಿಸಿ, ಚಿಕ್ಕಪ್ಪ ಭಾಸ್ಕರರಾವ್
ಮತ್ತು ವೆಂಕಟದಾಸಪ್ಪನವರ ಸಂಗೀತದಿಂದ ಪ್ರಭಾವಿತರಾದರು ನಂತರ ಕರೂರು
ರಾಮಸ್ವಾಮಿ, ಪಕ್ಕಹನುಮಂತಾಚಾರ್, ನೇಯ್ಕಾರ ಪಟ್ಟಿ ಪಲ್ಲವಿ ಶೇಷಯ್ಯರ್,
ಹಾನಗಲ್ ಚಿದಂಬರಯ್ಯ ಇವರುಗಳ ಶಿಷ್ಯರಾಗಿ ಪ್ರೌಢ ಶಿಕ್ಷಣ
ಚಿಕ್ಕಂದಿನಲ್ಲೇ ಸಂಗೀತ ಕಚೇರಿಗಳನ್ನು ಮಾಡಲು ಮೊದಲಿಟ್ಟರು. ಸಂಡೂರು,
ಗದ್ವಾಲ್, ವಿಶಾಖ ಪಟ್ಟಣ ಮುಂತಾದ ಕಡೆಗಳಲ್ಲಿ ಹಾಡಿ ಸನ್ಮಾನಿತರಾದರು.
ಮೈಸೂರು ಮತ್ತು ಬರೋಡಾ ರಾಜಾಸ್ಥಾನಗಳಲ್ಲಿ ಹಾಡಿ ಕೀರ್ತಿಶಾಲಿಗಳಾದರು.
ಮೈಸೂರು ದರ್ಬಾರಿನಲ್ಲಿ ಸಂಗೀತರತ್ನ ಎಂಬ ಬಿರುದು ದೊರಕಿತು. ಹೀಗೆಯೇ
ಇವರಿಗೆ ಬಂದ ಬಿರುದುಗಳು ಹಲವು. ರಾಯರು ಸಂಗೀತದಲ್ಲಿ ಮಹಾವಿದ್ವಾಂಸರ
 
ಪಡೆದರು