2023-07-04 09:25:08 by jayusudindra
This page has been fully proofread once and needs a second look.
ಇದು ಆಕಾರದಲ್ಲಿ ದೊಡ್ಡದಾಗಿರುವ ತಾಳ. ಇದನ್ನು ಮಧ್ಯ
ಪ್ರದೇಶದ ಬುಂದೇಲ್ ಖಂಡದಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ.
ಚಂದು-
ಚಿಂದು
ಇದು ತಮಿಳಿನ ಒಂದು ಜಾನಪದ ಸಂಗೀತ ರಚನಾ ವಿಶೇಷ.
ಇದರಲ್ಲಿ ಹಲವು ಪದ್ಯಗಳಿವೆ. ಇವಲ್ಲಿ ಕೆಲವು ಹಾಡುಗಳ ರಾಗಗಳು ಬಹಳ
ಇಂಪಾಗಿವೆ. ಕಾವಡಿ ಚಂದು ಅಧವಾ ಯಾತ್ರಿಕರ ಹಾಡುಗಳು, ನೊಂಡಿ ಚಿಂದು,
ಸುರುಲ್ ನೊಂಡಿ ಚೆಂದು, ವಂಡಿ ಚಂದು, ವಯನಡೆ ಚಿಂದು ಮುಂತಾದುವು
ಹಲವು ಬಗೆಯ ಚಿಂದುಗಳು.
೩೬೨
ಚಿಪ್
ಇದು ಹರಿದಾಸರು ಭಜನ ಗೋಷ್ಠಿಯಲ್ಲಿ
ಉಪಯೋಗಿಸುವ ತಾಳವಾದ್ಯ ಬಲಗೈಯಲ್ಲಿ ತಂಬೂರಿ ಮಾಟುತ್ತಾ ಎಡಗೈಯ
ಹೆಬ್ಬೆರಳು ಮತ್ತು ಮಧ್ಯದ ಬೆರಳುಗಳಿಗೆ ಈ ಚಿಟಿಕೆಗಳನ್ನು ಸಿಕ್ಕಿಸಿಕೊಂಡು ತಾಳಕ್ಕೆ
ಸರಿಯಾಗಿ ಈ ವಾದ್ಯವನ್ನು ತಟ್ಟುತ್ತಾರೆ. ಹರಿಕಥೆ ಮಾಡುವವರು ಈ ವಾದ್ಯವನ್ನು
ಹೆಚ್ಚಾಗಿ ಬಳಸುತ್ತಾರೆ. ಇದು ಸುಮಾರು ಆರು ಅಂಗುಲ ಉದ್ದ ಮತ್ತು ಒಂದೂವರೆ
ಅಂಗುಲ ಅಗಲವಿರುವ ಎರಡು ಮರದ ತುಂಡುಗಳನ್ನು ಒಳಗೊಂಡಿದೆ. ಈ ತುಂಡುಗಳ
ಒಂದು ಮುಖವು ಚಪ್ಪಟೆಯಾಗಿದ್ದು ಮತ್ತೊಂದು ಮುಖವು ಉಬ್ಬಾಗಿರುತ್ತದೆ. ಈ
ಉಬ್ಬಿದ ಮುಖಗಳಿಗೆ ಕೈ ಬೆರಳುಗಳಿಗೆ ಸಿಕ್ಕಿಸಿಕೊಳ್ಳಲು ಅನುಕೂಲವಾಗುವಂತೆ
ಎರಡು ಲೋಹದ ಪಟ್ಟ ಉಂಗುರಗಳಿವೆ ಈ ತುಂಡುಗಳ ತುದಿಯನ್ನು ಕೊರೆದು
ಲೋಹದ ಬಿಲ್ಲೆಗಳನ್ನೂ ಗೆಜ್ಜೆಗಳನ್ನೂ ಅಳವಡಿಸಲಾಗಿದೆ ಬೆರಳುಗಳಿಗೆ ಇವುಗಳನ್ನು
ಸಿಕ್ಕಿಸಿಕೊಂಡು ಚಪ್ಪಟೆಯಾಗಿರುವ ಮುಖಗಳನ್ನು ತಟ್ಟಿದಾಗ, ಲೋಹದ ಬಿಲ್ಲೆಗಳು
ಮತ್ತು ಗೆಜ್ಜೆಗಳು ಇಂಪಾದ ಕಿಣಿಕಿಣಿ ನಾದ ಉಂಟು ಮಾಡುತ್ತವೆ. ಈ ತಾಳವಾದ್ಯ
ವನ್ನು ತೇಗ ಅಥವಾ ಕರಿಮರದಿಂದ ಮಾಡಿರುತ್ತಾರೆ.
ಚಿಲಕಲಪುಡಿ
ಇವರು
ವಿಶ್ವವಿದ್ಯಾನಿಲಯದಲ್ಲಿ
ಸಂಸ್ಕೃತ ಮತ್ತು ತೆಲುಗು ಭಾಷೆಗಳ ಅಧ್ಯಯನ ಮಾಡಿ ಉಭಯ ಭಾಷಾ ಪ್ರವೀಣ
ಮೂವತ್ತು ವರ್ಷಗಳ ಕಾಲ ತೆಲುಗು ಪಂಡಿತರಾಗಿ ಸೇವೆಸಲ್ಲಿಸಿದರು.
ಪಾರುಪಲ್ಲಿ ರಾಮಕೃಷ್ಣಯ್ಯ ಪಂತುಲುರವರಲ್ಲಿ ಸಂಗೀತ ಶಿಕ್ಷಣ ಪಡೆದು ವಿದ್ವಾಂಸರಾಗಿ
೪೦ ವರ್ಷಗಳ ಕಚೇರಿ ಗಾಯನ ಮಾಡಿದರು. ಸಂಸ್ಕೃತದ ಸಂಗೀತ ಶಾಸ್ತ್ರಗ್ರಂಧ
ಗಳನ್ನು ತೆಲುಗಿಗೆ ಭಾಷಾಂತರಿಸಿದರು ಮುತ್ತು ಸ್ವಾಮಿ ದೀಕ್ಷಿತರ ಕೃತಿಗಳ ಸಂಕಲನ
ಮಾಡಿದ್ದಾರೆ ಆಂಧ್ರ ಪ್ರದೇಶದ ಸಂಗೀತ ನಾಟಕ ಅಕಾಡಮಿಯ ವಿಜಯವಾಡ
ಕೇಂದ್ರದ ಗುರುಕುಲದ ಮುಖ್ಯಸ್ಥರ
ರಾಗಿ ಸೇವೆ ಸಲ್ಲಿಸಿದರು.
ದಿ
ಚಿಂತನಪಲ್ಲಿ ಕೃಷ್ಣಮೂರ್ತಿ (೧೯೨೯)
ಕರ್ಣಾಟಕ ಸಂಗೀತ ಕ್ಷೇತ್ರ
ದಲ್ಲಿ ಪ್ರಸಿದ್ಧರಾಗಿದ್ದ ವೆಂಕಟರಾಯರ ದೌಹಿತ್ರರಾಗಿ ಕೃಷ್ಣಮೂರ್ತಿ ೧೯೨೯ರಲ್ಲಿ
ಕೋಲಾರ ಜಿಲ್ಲೆಯ ಗುಡಿಬಂಡೆಯಲ್ಲಿ ಜನಿಸಿದರು. ತಾತನ ಬಳಿಯಲ್ಲಿ ಬೆಳೆದು