This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ದೀಕ್ಷಿತರು ಕೇಳಿಕೊಂಡರು. ಹಾವು ತನ್ನ ಉದ್ದದಷ್ಟು ಎತ್ತರ ನಿಂತು ಜೋರಾಗಿ

ಆಡಿ ಸುಸ್ತಾಗಿ ನೆಲದ ಮೇಲೆ ಬಿದ್ದಿತು. ಸಂಗೀತವು ಮುಗಿದ ನಂತರ ಅದು ಸದ್ದಿಲ್ಲದೆ

ಹೊರಟುಹೋಯಿತು. ಈ ಘಟನೆಯನ್ನು ಕಣ್ಣಾರೆ ಕಂಡ ದೀಕ್ಷಿತರ ಶಿಷ್ಯರಿಂದ

ತಿಳಿದು ಸುಬ್ಬರಾಮ ದೀಕ್ಷಿತರು ತಮ್ಮ ಗ್ರಂಥದಲ್ಲಿ ಬರೆದಿದ್ದಾರೆ. ಚಿನ್ನಸ್ವಾಮಿ

ಯವರು ಮಧುರೆಗೆ ಕಚೇರಿಗಾಗಿ ಹೋಗಿದ್ದಾಗ ತಮ್ಮ ೪೫ನೆ ವಯಸ್ಸಿನಲ್ಲಿ
 
ಕಾಲವಾದರು.
 
೩೬೦
 
ಇದರ
 

 
ಚೆನ್ನಸ್ವಾಮಿ ಮುದಲಿಯಾರ್, ಎ. ಎಂ.-
ಇವರು ೧೮೯೨ರಲ್ಲಿ ಪ್ರಕಟ

ವಾದ ಓರಿಯಂಟಲ್ ಮ್ಯೂಸಿಕ್ ಇನ್ ಯೂರೋಪಿಯನ್ ನೊಟೇಷನ್ ಎಂಬ

ಗ್ರಂಥಕರ್ತರು. ಈ ಬೃಹದ್ಗಂಧದಲ್ಲಿ ಕರ್ಣಾಟಕ ಸಂಗೀತದ ಕೃತಿಗಳು, ಶಾಸ್ತ್ರದ

ವಿಚಾರವಾಗಿ ಪ್ರೌಢವಾದ ಪೀಠಿಕಾ ಪ್ರಕರಣ ಮತ್ತು ಜಾನಪದ ರಾಗಗಳಿವೆ.

ಪ್ರಕಟಣೆಯಿಂದ ಭಾರತೀಯ ಸಂಗೀತದ ವಿಚಾರವಾಗಿ ಪಾಶ್ಚಾತ್ಯ ವಿದ್ವಾಂಸರು

ಕಣ್ಣೆರೆದರು

ಮುದಲಿಯಾರರು ರೋಮನ್ ಕ್ಯಾಥೊಲಿಕ್ ಮತಕ್ಕೆ ಸೇರಿದವರು.

ತ್ಯಾಗರಾಜರ ಶಿಷ್ಯರಾದ ಉಮೆ ಯಾಳ್ಳುರ ಕೃಷ್ಣಭಾಗವತರು ಮತ್ತು ಸುಂದರ

ಭಾಗವತರಿಂದ ಕೃತಿಗಳನ್ನು ಕಲಿತರು. ಸುಬ್ಬರಾಮ ದೀಕ್ಷಿತರು " ಸಂಗೀತ ಸಂಪ್ರ

ದಾಯ ಪ್ರದರ್ಶಿನಿ " ಎಂಬ ಉದ್ಧಂಧವನ್ನು ಬರೆಯಲು ಪ್ರೇರೇಪಿಸಿದರು. ಇವರು

ಮದ್ರಾಸ್ ವಿಶ್ವವಿದ್ಯಾನಿಲಯದ ಎಂ. ಎ. ಪದವೀಧರರಾಗಿ ಸೆಕ್ರೆಟೇರಿಯಟ್‌ನಲ್ಲಿ

ಸೂಪರಿಂಟೆಂಡೆಂಟ್ ಹುದ್ದೆಯಲ್ಲಿದ್ದರು. ತಮ್ಮ ವಿರಾಮ ಕಾಲ ಸಂಗೀತಾಭ್ಯಾಸ
 
ಮಾಡಿ, ತಮ್ಮ ಹಣವನ್ನೆಲ್ಲಾ ಈ ಗ್ರಂಧದ ಪ್ರಕಟನೆಗಾಗಿ ವಿನಿಯೋಗಿಸಿದರು.

 
ಚಿನ್ನಶಿಂಗರಾಚಾರ್ಯಲು (೨೦ನೆ ಶ)-
ಇವರು ಶಿಂಗರಾಚಾರು ಸಹೋ

ದರರೆಂದು ಪ್ರಸಿದ್ಧರಾಗಿದ್ದವರಲ್ಲಿ ಕಿರಿಯರು. ತೆಲುಗು ಶ್ರೀವೈಷ್ಣವ ಬ್ರಾಹ್ಮಣ ಪಂಗಡ

ದವರಾಗಿದ್ದರು. ಪ್ರಸಿದ್ಧ ಗಾಯಕರಾಗಿದ್ದರು. ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬ

ರಾದ ಶ್ಯಾಮಾಶಾಸ್ತ್ರಿಗಳ ಮೊಮ್ಮಗ ಅಣ್ಣಾಸ್ವಾಮಿ ಶಾಸ್ತ್ರಿಗಳಲ್ಲಿ ಸಂಗೀತ ಶಿಕ್ಷಣ

ಪಡೆದರು. ತಮ್ಮ ಹಿರಿಯ ಸಹೋದರರೊಡನೆ ದಕ್ಷಿಣ ಭಾರತದಲ್ಲೆಲ್ಲಾ ಸಂಚರಿಸಿ

ಸ್ವರಲಿಪಿ ಸಹಿತ ಅನೇಕ ಕೃತಿಗಳನ್ನೂ, ಸಂಗೀತಶಾಸ್ತ್ರ ಮತ್ತು ಚರಿತ್ರೆಗೆ ಸಂಬಂಧಿಸಿದ

ಹಲವು ಮೂಲ ಆಕರಗಳನ್ನೂ ಸಂಗ್ರಹಿಸಿದರು. ಈ ಸಹೋದರರಿಬ್ಬರೂ ಸಂಗೀತ

ಶಾಸ್ತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಗಾಯಕ ಪಾರಿಜಾತಂ, ಸಂಗೀತ ಕಲಾನಿಧಿ,

ಸ್ವರಮಂಜರಿ, ಗಾಯಕ ಲೋಚನಂ, ಗಾಯಕಸಿದ್ಧಾಂಜನಂ, ಗಾನೇಂದು ಶೇಖರಂ,

ಭಾಗವತಸಾರಾಮೃತಂ ಮತ್ತು ಸ್ವರಮಂಜರಿ ಎಂಬ ತೆಲುಗು ಗ್ರಂಧಗಳನ್ನು ಪ್ರಕಟ

ಸಿದ್ದಾರೆ.
 
ನಾಗ

 
ಚಿನ್
 
ಚಿನ್ನ-
ನಂ
ಇದು ಕಹಳೆಯಂತಹ ಒಂದು ಸುಷಿರವಾದ್ಯ. ತಿರುಚಿನ್ನ೦ ಮತ್ತು

(ನಾಗಸ್ವರ) ಎಂಬುದು ಈ ವಾದ್ಯದ ಎರಡು ವೈವಿಧ್ಯಗಳು.

 
ಚಿನ್ಮಯಿ-
ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು ಜನ್ಯರಾಗ,