2023-07-04 09:19:03 by jayusudindra
This page has been fully proofread once and needs a second look.
ಸುಮಾರು ಹತ್ತು ವರ್ಷಗಳ ಕಾಲ ಮೈಸೂರಿನಲ್ಲಿದ್ದರು ಇವರ ಕೃತಿಗಳಲ್ಲಿ ಆರಭಿ
ರಾಗದ ಆಂಬಾ ಸೌರಂಬಾ ಎಂಬ ರಚನೆಯು ಬಹಳ ಶ್ರೇಷ್ಠವಾದುದು
ಚಿನ್ನ ವೈ
ಇವರು ತಮಿಳುನಾಡಿನ ಒಬ್ಬ ಪ್ರಸಿದ್ಧ ಗಾಯಕ. ೧೯ನೆ
ಶತಮಾನದಲ್ಲಿದ್ದರು ತಮ್ಮ ಹಿರಿಯ ಸಹೋದರ ಪೆರಿಯತ್ತಿಯೊಡನೆ ಕಚೇರಿ
ಮಾಡುತ್ತಿದ್ದರು ಮೈಸೂರು ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡು ಪ್ರತಿ
ತಿಂಗಳೂ ಗೌರವಧನ ಪಡೆಯುತ್ತಿದ್ದರು. ಪಲ್ಲವಿ ಹಾಡುವುದರಲ್ಲಿ ನಿಷ್ಣಾತರಾಗಿದ್ದರು
ವೈಕ್ತಿ ಎನ್ನುವುದು ವೈದ್ಯನಾಧ ಎಂಬ ಹೆಸರಿನ ಅಪಭ್ರಂಶ.
ಇವರು
ಚಿನ್ನ ಸ್ವಾಮಿದಾಸರು (೧೮೨೮-೧೮೮೧)
ಇವರು ತಮಿಳುನಾಡಿನ
ಕಾಂಚೀಪುರದಲ್ಲಿ ಶೇಷಯ್ಯರ್ ಮತ್ತು ಗಂಗಾಭವಾನಿ ಎಂಬ ದಂಪತಿಗಳ ಮಗನಾಗಿ
ಜನಿಸಿದರು. ಸಂಸ್ಕೃತ, ತಮಿಳು ಮತ್ತು ಸಂಗೀತದಲ್ಲಿ ವಿದ್ವಾಂಸರಾಗಿದ್ದರು.
ಸಂಸ್ಕೃತ ಮತ್ತು ತಮಿಳಿನಲ್ಲಿ ಅನೇಕ ಭಕ್ತಿಗೀತಗಳನ್ನು ರಚಿಸಿದ್ದಾರೆ
ಸ್ವನಾಮ ಮುದ್ರಕಾರರು. ಕೀರ್ತನೆ ರೂವದಲ್ಲಿ ರುಕ್ಕಾಂಗದ, ಅಂಬರೀಷ ಮತ್ತು
ಕುಚೇಲೋಪಾಖ್ಯಾನವನ್ನೂ ರಚಿಸಿದ್ದಾರೆ. ಭದ್ರಾಚಲರಾಮದಾಸರ ಕೀರ್ತನೆ
ಗಳು, ಭಾಷ್ಯಕಾರ ಚರಿತ್ರ ಕೀರ್ತನೆಗಳು, ಸುಭದ್ರಾ ಕಲ್ಯಾಣ ಕೀರ್ತನೆಗಳು ಮತ್ತು
ಪಾಂಡವ ಚರಿತ್ರ ಕೀರ್ತನೆಗಳು ಎಂಬ ಗ್ರಂಧಗಳನ್ನು ರಚಿಸಿದ್ದಾರೆ
ಚಿನ್ನ ಸ್ವಾಮಿ ದೀಕ್ಷಿತರು (೧೭೭೮-೧೮೨೩)
ಇವರು ಪ್ರಸಿದ್ಧ ವಾಗ್ಗೇಯ
ಕಾರರಾದ ಮುತ್ತು ಸ್ವಾಮಿ ದೀಕ್ಷಿತರ ಕಿರಿಯ ಸಹೋದರ ಸಂಸ್ಕೃತ, ತೆಲುಗು,
ತಮಿಳು ಭಾಷೆಗಳಲ್ಲಿ ಉದ್ದಾಮ ಪಂಡಿತರೂ, ಶ್ರೇಷ್ಠಗಾಯಕ ಮತ್ತು ವೈಣಿಕರಾಗಿ
ದ್ದರು. ಮಣಲಿ ಚಿನ್ನಯ್ಯ ಮುದಲಿಯಾರ್ ಮತ್ತು ಇತರ ಹಲವು ಜಮೀನ್ದಾರರ
ಮತ್ತು ರಾಜರ ಗೌರವ, ಸನ್ಮಾನಕ್ಕೆ ಪಾತ್ರರಾಗಿದ್ದರು. ನಾರದ ಸ್ತುತಿಯಾದ
ಗಾನಲೋಲ ಕರುಣಾಲವಾಲ ಎಂಬ ಇವರ ತೋಡಿರಾಗದ ಕೃತಿಯು ಬಹು ಪ್ರಸಿದ್ಧ
ನಾಗಿದೆ. ಇವರ ಮುದ್ರೆ ನಾರಾಯಣದಾಸ,
ಸ್ವಾಮಿ ದೀಕ್ಷಿತರು ಹಲವು ಕಡೆ ದ್ವಂದ್ವ ಗಾಯನ ಮಾಡಿ ಅದರ ಸೊಗಸನ್ನು ಪ್ರಕಾಶಕ್ಕೆ
ತಂದರು ಮತ್ತು ಮುತ್ತು ಸ್ವಾಮಿ ದೀಕ್ಷಿತರ ಕೃತಿಗಳನ್ನು ಹೆಚ್ಚಾಗಿ ಪ್ರಚಾರ
ಮಾಡಿದರು.
ಕರ್ಷ
ಇವರಿಗೆ ಸಂಬಂಧಿಸಿದ ಒಂದು ಘಟನೆಯ ಉಲ್ಲೇಖವಿದೆ. ಒಂದು ರಾತ್ರಿ ಇವರು
ತಿರುವಾರೂರಿನಲ್ಲಿ ನಾಗಸ್ವರಾವಳಿ ರಾಗಾಲಾಪನೆ ಮಾಡುತ್ತಿದ್ದರು ಅಂದಿನ ಸಭೆ
ಯಲ್ಲಿ ಅನೇಕ ವಿದ್ವಾಂಸರು ಮತ್ತು ಸುಸಂಸ್ಕೃತರಿದ್ದರು. ಆಗ ಒಂದು ನಾಗರಹಾವು
ಅವರ ಮುಂದೆ ಕಾಣಿಸಿಕೊಂಡು ಹೆಡೆಯನ್ನು ಬಿಚ್ಚಿ ಆಡಲು ತೊಡಗಿತು. ಸಭಿಕರಿಗೆ
ಹಾವನ್ನು ನೋಡಿ ವಿಪರೀತ ಭಯವಾಯಿತು. ಸಭೆಯು ಶಾಂತವಾಗಿರಬೇಕೆಂದು