2023-06-25 23:30:15 by ambuda-bot
This page has not been fully proofread.
೩೫೮
ಸ ರಿ ಗ ಮ ಪ ದನಿ ಸ
ಸ ನಿ ದ ನಿ ಪ ಮ ಗ ಮ ರಿ ಸ
ಸಂಗೀತ ಪಾರಿಭಾಷಿಕ ಕೋಶ
ತಿರು
ಚಿನ್ನ ಪಕ್ಕಿರಿ ಇವರು ೨೦ನೆ ಶತಮಾನದ ಒಬ್ಬ ಪ್ರಸಿದ್ಧ ನಾಗಸ್ವರ
ವಿದ್ವಾಂಸರು. ಇವರು ತಮಿಳುನಾಡಿನ ತಂಜಾವೂರು ಜಿಲ್ಲೆಯ ಮನ್ನಾರ್ ಗುಡಿ
ಎಂಬ ಊರಿನವರು. ನೀಡಮಂಗಲಂ ಶಿಂಗಾರಂ ಎಂಬುವರು ಇವರ ಗುರು.
ಮರುಗಲ್ ನಟೇಶನ್ ನಂತರ ಚಿನ್ನ ಪಕ್ಕಿರಿ ಅತ್ಯಂತ ಶ್ರೇಷ್ಠ ನಾಗಸ್ವರ ವಿದ್ವಾಂಸರೆಂದು
ಪರಿಗಣಿಸಲ್ಪಟ್ಟಿದ್ದರು ಯಾವ ದುರ್ವಸನಗಳೂ ಇಲ್ಲದ ಅತ್ಯಂತ ಸರಳಜೀವಿಯಾಗಿ
ತಿರುನೆಲ್ಲಿಕಾವಲ್ ಎಂಬ ಗ್ರಾಮದಲ್ಲಿದ್ದು ಹಲವು ಕಾಲ ಸತತವಾದ ಸಾಧಕ ಮಾಡಿ
ಪ್ರಸಿದ್ಧ ವಿದ್ವಾಂಸರಾದರು. ಇವರು ಕೃತಿಗಳನ್ನು ಹೆಚ್ಚಾಗಿ ನುಡಿಸುತ್ತಿರಲಿಲ್ಲ.
ಯಾವಾಗಲೂ ರಾಗ ಮತ್ತು ಪಲ್ಲವಿ ನುಡಿಸುವುದೇ ಇವರ ವೈಶಿಷ್ಟ್ಯವಾಗಿತ್ತು.
ಇವರ ಮನೋಧರ್ಮ ಬಹಳ ಉನ್ನತಮಟ್ಟದ್ದಾಗಿತ್ತು. ನುಡಿಕಾರದಲ್ಲಿ ವರ್ಣಿಸಲಸ
ದಳವಾದ ಇಂಪು, ತಂಪು, ಸೊಂಪುಗಳಿದ್ದು ವು. ಉಸಿರಿನ ಮೇಲೆ ಹತೋಟಿ ಇವರಿಗೆ
ಬಹುವಾಗಿತ್ತು. ಖರಹರಪ್ರಿಯ, ಹೇಮವತಿ, ಹಂಸಭ್ರಮರಿ, ಕೀರವಾಣಿ,
ಸಿಂಹೇದ್ರ ಮಧ್ಯಮ, ಷಣ್ಮುಖಪ್ರಿಯ, ವಾಚಸ್ಪತಿ ಮುಂತಾದ ರಾಗಗಳನ್ನು ಅತ್ಯಂತ
ಜನಪ್ರಿಯವಾಗಿಸಿದರು. ದ್ರುತಗತಿಯಲ್ಲಿ ನುಡಿಸುವುದರಲ್ಲಿ ನಿಷ್ಣಾತರಾಗಿದ್ದರು.
ರಾಜರತ್ನಂ ಪಿಳ್ಳೆಯವರು ಇವರ ವಾದನದ ಕೆಲವು ಅಂಶಗಳನ್ನು ಪಡೆದಿದ್ದರು.
ಚಿನ್ನ ಯ, ಮುದಲಿಯಾರ್ ಮಣಲಿ -ಇವರು ಕವಿಗಳ ಮತ್ತು ಸಂಗೀತ
ವಿದ್ವಾಂಸರ ಉದಾರ ಪೋಷಕರಾಗಿದ್ದರು. ಇವರ ಹೆಸರು ವೆಂಕಟಕೃಷ್ಣ ಮುದಲಿ
ಯಾರ್. ಸಂಗೀತದ ಇತಿಹಾಸದಲ್ಲಿ ಅತ್ಯಂತ ದೀರ್ಘ ರಚನೆಯಾದ ೧೦೮ ರಾಗ
ತಾಳ ಮಾಲಿಕೆಯನ್ನು ರಾಮಸ್ವಾಮಿ ದೀಕ್ಷಿತರು ಸಂಪೂರ್ಣಗೊಳಿಸಿದಾಗ ಮಣಲಿ
ಚಿನ್ನಯ್ಯ ಮುದಲಿಯಾರರು ಅವರಿಗೆ ಕನಕಾಭಿಷೇಕ ಮಾಡಿದರು ಬಾಲುಸ್ವಾಮಿ
ದೀಕ್ಷಿತರಿಗೆ ಪಾಶ್ಚಾತ್ಯ ಸಂಗೀತ ಮತ್ತು ಪಿಟೀಲುವಾದನದಲ್ಲಿ ಒಬ್ಬ ಪಾಶ್ಚಾತ್ಯ
ಪಿಟೀಲು ವಿದ್ವಾಂಸರಿಂದ ಶಿಕ್ಷಣ ಕೊಡಿಸಿದರು. ಪಿಟೀಲು ಒಂದು ಉತ್ತಮ ಪಕ್ಕ
ವಾದ್ಯವಾಗಲು ಯುಕ್ತವಾದುದೆಂದು ಪರಿಗಣಿಸಿ ಪ್ರದರ್ಶಿಸಿದವರು ಬಾಲುಸ್ವಾಮಿ
ದೀಕ್ಷಿತರು. ಈ ವಾದ್ಯವು ಈಗ ಕರ್ಣಾಟಕ ಸಂಗೀತ ಕಚೇರಿಗಳ ಒಂದು ಮುಖ್ಯ
ಪಕ್ಕವಾದ್ಯವಾಗಿದೆ.
ಚಿನ್ನಯ್ಯ (೧೮೦೬-೧೮೫೬) ತಂಜಾವೂರಿನ ಸಹೋದರರೆಂದು ಪ್ರಸಿದ್ಧ
ರಾಗಿರುವ ಚಿನ್ನಯ್ಯ, ಶಿವಾನಂದ, ವಡಿವೇಲು, ಪೊನ್ನಯ್ಯ ಎಂಬ ನಾಲ್ಕು
ಸಹೋದರರು ಮುತ್ತು ಸ್ವಾಮಿ ದೀಕ್ಷಿತರ ಶಿಷ್ಯರಾಗಿದ್ದರು ಇವರೆಲ್ಲರೂ ತಂಜಾವೂರಿ
ನಲ್ಲಿ ವಾಸಿಸುತ್ತಿದ್ದು ಭರತನಾಟ್ಯದಲ್ಲಿ ಪಾಂಡಿತ್ಯ ಮತ್ತು ಸಂಪ್ರದಾಯಗಳನ್ನು
ಕಾಪಾಡಿಕೊಂಡು ಬಂದ ಕುಟುಂಬಕ್ಕೆ ಸೇರಿದ ನಟುವನಾರ್ ಆಗಿದ್ದರು. ಇವರ ತಂದೆ
ಸುಬ್ಬಯ್ಯ ನಟುವನಾರ್, ಚಿನ್ನಯ್ಯನವರು ಕೆಲವು ವರ್ಣಗಳು, ಕೃತಿಗಳು ಮತ್ತು