This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಭಾಷೆಗಳಲ್ಲಿ ಪಾಂಡಿತ್ಯಗಳಿಸಿ ತಮ್ಮ ಸಹೋದರರ ಜೊತೆಯಲ್ಲಿ ಕಥಾಕಾಲಕ್ಷೇಪದ
ಭಾಗವತರಾಗಿ ಪ್ರಸಿದ್ಧರಾದರು. ಇವರ ಸಹೋದರ ಮಹಾಲಿಂಗ ಸಹ ಗಾಯನ
 
ಮಾಡುತ್ತಿದ್ದರು.
 
ಇನ್ನೊಬ್ಬ ಸಹೋದರ ಶೇಷನ್ ಮೃದಂಗ ನುಡಿಸುತ್ತಿದ್ದರು.
ಇವರಿಗೆ ಸಂಗೀತ, ಭರತನಾಟ್ಯ, ವಾಲ್ಮೀಕಿರಾಮಾಯಣ, ತಮಿಳು ಪುರಾಣಗಳಲ್ಲಿ
ಪ್ರೌಢಿಮೆ, ಪ್ರತಿಭಾ ಪೂರ್ಣವಾದ ನಿರೂಪಣೆ, ಹಾಸ್ಯಪ್ರಿಯತೆ, ಒಳ್ಳೆಯ ಕಂಠ,
ಕಥನಕೌಶಲ್ಯ ಮುಂತಾದ ಗುಣಗಳಿದ್ದು ಇವರ ಕಾಲಕ್ಷೇಪಗಳು ಬಹು ಆಕರ್ಷಕ
ವಾಗಿರುತ್ತಿದ್ದುವು. ಇವರಿಗೆ ಮಹಾಕಥಕ ಕಂಠೀರವ ಎಂಬ ಬಿರುದಿತ್ತು. ಇವರು
ಹಲವು ಕೃತಿಗಳನ್ನು ರಚಿಸಿದ್ದಾರೆ.
 
೩೫೭
 
ಚಿದಂಬರಂ-ಇದು ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯಲ್ಲಿರುವ
ಪ್ರಸಿದ್ಧ ಕ್ಷೇತ್ರ. ಇಲ್ಲಿ ವಿಖ್ಯಾತವಾದ ನಟರಾಜಸ್ವಾಮಿ ದೇವಾಲಯವಿದೆ. ಅನೇಕ
ವಾಗ್ಗೇಯಕಾರರು ಈ ದೇವಾಲಯವನ್ನೂ, ನಟರಾಜಸ್ವಾಮಿಯನ್ನೂ ಕುರಿತು ಕೃತಿ
ಗಳನ್ನು ರಚಿಸಿ ಹಾಡಿದ್ದಾರೆ. ಸಂಗೀತ ಮತ್ತು ನೃತ್ಯ ಶಿಲ್ಪದ ಸಂಬಂಧವಾದ ಅನೇಕ
ಶಿಲ್ಪಾ ಕೃತಿಗಳು ಈ ದೇವಾಲಯದಲ್ಲಿದೆ. ಪೂರ್ವದ ಗೋಪುರದಲ್ಲಿ ಹಲವು ನಾಟ್ಯ
ಭಂಗಿಗಳಲ್ಲಿರುವ ವಿಗ್ರಹಗಳು ತತ್ಸಂಬಧವಾದ ಶ್ಲೋಕಗಳೊಡನೆ ಇವೆ. ಗರ್ಭಗುಡಿಯ
ಎದುರಿನಲ್ಲಿರುವ ಕಲ್ಲಿನ ರಥದಲ್ಲಿ ಪಂಚಮುಖವಾದ್ಯವನ್ನು ನುಡಿಸುತ್ತಿರುವ ಒಂದು
ಶಿಲ್ಪಾ ಕೃತಿ ಇದೆ.
 
ಚಿದಂಬರನಾಥಯೋಗಿ (೧೮ನೆ ಶ )-ಇವರು ಸಂಗೀತದ ತ್ರಿಮೂರ್ತಿಗಳಲ್ಲಿ
ಒಬ್ಬರಾದ ಮುತ್ತು ಸ್ವಾಮಿ ದೀಕ್ಷಿತರು ಮತ್ತು ಅವರ ತಂದೆ ರಾಮಸ್ವಾಮಿ ದೀಕ್ಷಿತರ
ಗುರು. ಒಂದು ಸಲ ರಾಮಸ್ವಾಮಿ ದೀಕ್ಷಿತರ ವೀಣಾವಾದನವನ್ನು ಚಿದಂಬರದ ನಟ
ರಾಜಸ್ವಾಮಿ ದೇವಾಲಯದಲ್ಲಿ ಕೇಳಿದ ಯೋಗಿಗಳು ಅದರಿಂದ ಮುಗ್ಧರಾದರು.
ಅವರನ್ನು ತಮ್ಮಲ್ಲಿಗೆ ಬರಮಾಡಿಕೊಂಡು ಶ್ರೀ ವಿದ್ಯೆಯನ್ನು ಉಪದೇಶಿಸಿದರು. ಮತ್ತು
ತಿರುವಾರೂರಿಗೆ ಹೋಗುವಂತೆ ಹೇಳಿದರು. ಹಲವು ವರ್ಷಗಳ ತರುವಾಯ ಮಣಾಳಿ
ಸಕುಟುಂಬರಾಗಿ
ತರುಣ
 
ವೆಂಕಟಕೃಷ್ಣ ಮುದಲಿಯಾರರ ಕೋರಿಕೆಯಂತೆ ದೀಕ್ಷಿತರು
ಮಣಾಳಿಗೆ ಹೋದಾಗ ಅಲ್ಲಿ ಪುನಃ ಯೋಗಿಗಳ ಸಂದರ್ಶನ ಲಭಿಸಿತು.
ಮುತ್ತು ಸ್ವಾಮಿ ದೀಕ್ಷಿತರನ್ನು ತನ್ನ ಸಂಗಡ ಯೋಗಿ ವಾರಣಾಸಿಗೆ ಕರೆದುಕೊಂಡು
ಹೋದರು. ಅಲ್ಲಿ ಮುತ್ತು ಸ್ವಾಮಿ ದೀಕ್ಷಿತರು ಐದು ವರ್ಷಗಳ ಕಾಲವಿದ್ದರು. ತಮ್ಮ
ಗುರುಸಿದ್ಧಿ ಪಡೆದ ನಂತರ ದಕ್ಷಿಣ ಭಾರತಕ್ಕೆ ಹಿಂತಿರುಗಿದರು ಚಿದಂಬರನಾಥ
ಯೋಗಿಯ ಸಮಾಧಿಯು ವಾರಣಾಸಿಯ ಹನುಮಾನ್ ಘಾಟ್‌ನಲ್ಲಿದೆ.
 
ಚಿದಂಬರ ವಿಲಾಸ-ಇದು ಗೋಪಾಲಕೃಷ್ಣಭಾರತಿ ವಿರಚಿತ ತಮಿಳು
ಗೇಯರೂಪಕವಾದ ನಂದನಾರ್ ಚರಿತ್ರಂ ಎಂಬುದರ ಮೂರನೆಯ ಭಾಗ. ಈ
ಭಾಗವು ಪವಾಡದ ನಂತರ ಆರಂಭವಾಗುತ್ತದೆ.
 
ಚಿದಾನಂದಿ-ಈ ರಾಗವು ೩೬ನೆ ಮೇಳಕರ್ತ ಛಲನಾಟದ ಒಂದು ಜನ್ಯರಾಗ,