This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಈ ರಾಗದಲ್ಲಿ ಸಾಮವೇದದ ಸ್ವರಗಳು ಬಂದಿವೆ. ಚತುಶ್ರುತಿ ಧೈವತ, ಶ್ರುತಿ

ಗಾಂಧಾರ ನಿಷಾದಗಳು ಸ್ವರಸ್ಥಾನಗಳು, ರಿಷಭ ದೈವತಗಳು ಪರಸ್ಪರವಾದಿ ಸಂವಾದಿ

ಗಳು. ಶಾಂತರಸ ಪ್ರಧಾನವಾದ ಸಾರ್ವಕಾಲಿಕ ರಾಗ, ನಿಷಾದಾಂತ್ಯ ರಾಗ,

ಇದರಲ್ಲಿ ಸಾಮವೇದದ ಸ್ವರಗಳು ಬರಬೇಕೆಂಬ ಇಚ್ಛೆಯಿಂದ ತ್ಯಾಗರಾಜರು 'ನಾದ

ತನುಮನಿಶಂ' ಎಂಬ ಕೃತಿಯನ್ನು ರಚಿಸಿದ್ದಾರೆ. ಈ ರಾಗದ ಸ್ವರೂಪವನ್ನು

ತಿಳಿಯಲು ಈ ಕೃತಿಯು ಪ್ರಮಾಣವಾಗಿದೆ.
 

 
ಚಿತ್ರ ಕರ್ಷಣಿ-
ಈ ರಾಗವು ೭ನೆ ಮೇಳಕರ್ತ ಸೇನಾವತಿಯ ಒಂದು

ಜನ್ಯರಾಗ,
 
೩೪
 

ಸ ರಿ ಗ ಮ ಮ ದ ಸ
 

ಸ ದ ಮ ಗ ರಿ ಸ
 

 
ಚಿತ್ತೂರು ಸುಬ್ರಹ್ಮಣ್ಯಪಿಳ್ಳೆ (೧೮೯೮ ೧೯೭೫)-
ಆಂಧ್ರಪ್ರದೇಶದ

ಚಿತ್ತೂರು ಜಿಲ್ಲೆಯ ಪುಂಗನೂರು ಎಂಬಲ್ಲಿ ಗಾಯನ, ಪಿಟೀಲುವಾದನ ಮತ್ತು

ಹರಿಕಥೆ ಮಾಡುವುದರಲ್ಲಿ ನಿಷ್ಣಾತರೂ, ಸಂಸ್ಕೃತ ವಿದ್ವಾಂಸರೂ ಆಗಿದ್ದ ಪೋನಾರ್ಯ

ಎಂಬುವರ ಮೂರನೆ ಪುತ್ರನೇ ಸುಬ್ರಹ್ಮಣ್ಯ ಪಿಳ್ಳೆ, ಇವರ ಸಂಗೀತದ ಪ್ರಥಮ ಗುರು

ವೋನಾರ್ಯ. ನಂತರ ೧೬ನೇ ವಯಸ್ಸಿನಲ್ಲಿ ಕಾಂಚೀಪುರಂ ನಾಯನಾಪಿಳ್ಳೆಯವರಲ್ಲಿ

ಗುರುಕುಲ ವಾಸಮಾಡಿ ನಾಲ್ಕು ವರ್ಷಗಳ ಕಾಲ ಪ್ರೌಢಶಿಕ್ಷಣ ಪಡೆದು ಎಟ್ಟಿಯಾ

ಪುರಂ ರಾಮಚಂದ್ರಭಾಗವತರ ಮನೆಯಲ್ಲಿ ಪ್ರಥಮ ಕಚೇರಿ ಗಾಯನ ಮಾಡಿದರು.

೧೯೨೫ರಲ್ಲಿ ಮದ್ರಾಸಿನಲ್ಲಿ ನೆಲೆಸಿದರು.

ಇವರು ಶಾರೀರಬಲ ಮತ್ತು ಪಾಂಡಿತ್ಯ

ಬಲವಿದ್ದ ಲಯಪಂಡಿತರು. ಷಟ್ಕಾಲ ಪಲ್ಲವಿಯನ್ನು ನಿರಾಂತಕವಾಗಿ ಹಾಡುತ್ತಿದ್ದರು,

ಇವರ ಶಾರೀರವು ಮಧ್ಯಮಕಾಲದ ಶಾರೀರವಾಗಿದ್ದುದರಿಂದ ಮಧ್ಯಮ ಕಾಲದ ಕೃತಿ

ಗಳನ್ನು ಹೆಚ್ಚಾಗಿ ಹಾಡುತ್ತಿದ್ದರು. ಪಿಟೀಲು, ಮೃದಂಗವಲ್ಲದೆ, ಘಟ, ಖಂಜಿರ,

ಮೋರ್ಚಿಂಗ್, ಕೊನಲು ಮುಂತಾದ ಹೆಚ್ಚಿನ ಸಂಖ್ಯೆಯ ಪಕ್ಕವಾದ್ಯಗಳೊಡನೆ

ಕಚೇರಿ ಮಾಡುತ್ತಿದ್ದರು ೧೯೪೧ರಲ್ಲಿ ತಿರುನೆಲ್ವೇಲಿಯಲ್ಲಿ ಇಶೈಮನ್ನರ್, ೧೯೫೬ರಲ್ಲಿ

ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಅಧ್ಯಕ್ಷರಾಗಿ ಸಂಗೀತಕಲಾನಿಧಿ ಎಂಬ ಬಿರುದು

ಗಳನ್ನು ಪಡೆದರು.

ಇವರ ಶಿಷ್ಯರಲ್ಲಿ ಮಧುರೆ ಸೋಮಸುಂದರಂ ಪ್ರಖ್ಯಾತರು

 
ಚಿತ್ರ
(೧) ಇದು ತಾಳದಶಪ್ರಾಣಗಳಿಗೆ ಸಂಬಂಧಿಸಿದ ಷಣ್ಮಾರ್ಗಗಳಲ್ಲಿ

ಮೂರನೆಯದು ಇದರಲ್ಲಿ ತಾಳದ ಪ್ರತಿ ಎಣಿಕೆಗೆ ೨ ಮಾತ್ರೆಗಳು ಅಧವಾ ೮ ಅಕ್ಷರ

ಕಾಲವಿರುತ್ತದೆ. ಈ ಬಗೆಯ ವಿಳಂಬ ನಡೆಯನ್ನು ಕೆಲವು ಪಲ್ಲವಿಗಳಲ್ಲಿ ಕಾಣಬಹುದು.

(೨) ಇದು ಏಳು ತಂತಿಗಳಿರುವ ಒಂದು ವಿಧವಾದ ವೀಣೆ.
 

(೩) ಮಧ್ಯಮದಿಂದ ಆರಂಭವಾಗುವ ಗಾಂಧಾರ ಗ್ರಾಮದ ಒಂದು ಮೂರ್ಛನ.

 
ಚಿತ್ರಚಂದ್ರಿಕ-
ಈ ರಾಗವು ೬೩ನೆ ಮೇಳಕರ್ತ ಲತಾಂಗಿಯ ಒಂದು
 

ಜನ್ಯರಾಗ,