This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಬಹುದು.
 
ನೀಲಾಂಬರಿ ರಾಗದ ಶೃಂಗಾರಲಹರಿ ಎಂಬ ಕೃತಿಯ ಚಿಟ್ಟೆ ಸ್ವರಗಳಲ್ಲಿ ಇದನ್ನು ಕಾಣ
ಕೆಲವು ಕೃತಿಗಳ ಚಿಟ್ಟೆಸ್ವರಗಳು ಒಂದೇ ವಿಧವಾದ ಸ್ವರಸಮೂಹದಿಂದ
ಆರಂಭವಾಗುತ್ತವೆ. ಉದಾ : ಬೇಗಡೆ ರಾಗದ ಇಂತ ಪರಾಕೇಲನಮ್ಮ ಎಂಬ ಕೃತಿ.
ಕೆಲವು ಚಿಟ್ಟೆ ಸ್ವರಗಳ ಕೊನೆಯ ಆವರ್ತದಲ್ಲಿ ಆಕರ್ಷಕವಾದ ಮುಕುಟಸ್ವರ ಅಥವಾ
ಮುಕ್ತಾಯಸ್ವರವಿರುತ್ತದೆ ಉದಾ : ಖಮಾಚ್ ರಾಗದ ಚೇವಾರೆವರುರ
ಎಂಬ ಕೃತಿಯ ಚಿಟ್ಟೆಸ್ವರ. ಕೆಲವು ಕೃತಿಗಳಲ್ಲಿ ವಿಲೋಮ ಮತ್ತು ಅನುಲೋಮ
ಕ್ರಮಗಳ ಚಿಟ್ಟೆ ಸ್ವರಗಳಿರುವುದುಂಟು ಇವುಗಳನ್ನು ಪ್ರಾರಂಭದಿಂದ ಕೊನೆಯ
ವರೆಗೂ ಅಂದರೆ ಅನುಲೋಮ ಕ್ರಮದಲ್ಲಿ ಮತ್ತು ಕೊನೆಯಿಂದ ಮೊದಲಿನವರೆಗೆ
ಅಂದರೆ ವಿಲೋಮ ಕ್ರಮದಲ್ಲಿ ಹಾಡಬಹುದು. ಉದಾ : ಕಲ್ಯಾಣಿರಾಗದ
ಕಮಲಾಂಬಾಂ ಭಜರೇ ಎಂಬ ಕೃತಿಯಲ್ಲಿ ಒಂದು ವಿಲೋಮ ಚಿಟ್ಟೆಸ್ವರವಿದೆ
 
" ದರು.
 
ವಾಗ್ಗೇಯಕಾರರು ತಮ್ಮ ಕೃತಿಗಳಿಗೆ ಚಿಟ್ಟೆಸ್ವರಗಳನ್ನು ರಚಿಸಿ ಸೇರಿಸುವುದು
ಪದ್ಧತಿ. ಆದರೆ ಕೆಲವು ಕೃತಿಗಳಿಗೆ ಇತರ ವಾಗ್ಗೇಯಕಾರರು ಚಿಟ್ಟೆ ಸ್ವರಗಳನ್ನು
ಸೇರಿಸಿರುವ ನಿದರ್ಶನಗಳಿವೆ. ಜಗನೊಹಿಸಿ ರಾಗದ ಮಾಮವ ಸತತಂ ಎಂಬ
ಕೃತಿಯ ಚಿಟ್ಟೆ ಸ್ವರವು ಇದಕ್ಕೆ ನಿದರ್ಶನ. ತ್ಯಾಗರಾಜರ ರಚನೆಯಾದ ಈ ಕೃತಿಗೆ
ಅವರ ಶಿಷ್ಯ ವಾಲಾಜಪೇಟೆ ಕೃಷ್ಣಸ್ವಾಮಿ ಭಾಗವತರು ಚಿಟ್ಟೆ ಸ್ವರವನು
ಕೆಲವು ರಾಗಮಾಲಿಕಾ ಕೀರ್ತನೆಗಳಲ್ಲಿ ಚಿಟ್ಟೆಸ್ವರಗಳು ಮೊದಲು ಒಂದನೆ ಕಾಲದಲ್ಲ,
ನಂತರ ಮಧ್ಯಮ ಕಾಲದಲ್ಲ, ಕೊನೆಯಲ್ಲಿ ಒಂದು ಅಥವಾ ಎರಡು ಮಧ್ಯಮ
ಕಾಲದ ಚಿಟ್ಟೆ ಸ್ವರಗಳು ಪ್ರಾರಂಭವಾದ ರಾಗದಿಂದ ಕ್ರಮವಾಗಿ ಇತರ ರಾಗಗಳಲ್ಲಿದ್ದ,
ಪುನಃ ಅದೇ ರಾಗಗಳ ಅವರೋಹಣ ಕ್ರಮದಲ್ಲಿದ್ದ ಪ್ರಾರಂಭದ ರಾಗಕ್ಕೆ ಸೇರುತ್ತವೆ.
ಉದಾ : ಸ್ವಾತಿ ತಿರುನಾಳ್ ಮಹಾರಾಜರ 'ಭಾವಯಾಮಿ' ಎಂಬ ರಾಮಾಯಣದ
ಕೀರ್ತನೆ ಮತ್ತು ಕಮಲಜಾಸ್ಯ ಎಂಬ ದಶಾವತಾರದ ಕೀರ್ತನೆ.
 
೩೫೨
 
ಚಿಟ್ಟಿಬಾಬು (೧೯೩೬)-ಇವರು ಈಗಿನ ಆಂಧ್ರದ ಒಬ್ಬ ಖ್ಯಾತ ವೈಣಿಕರು.
ಚಲ್ಲಪಲ್ಲಿ ರಂಗರಾವ್ ಮತ್ತು ಸುಂದರಮ್ಮ ಎಂಬುವರ ಪುತ್ರನಾಗಿ ಕಾಕಿನಾಡದಲ್ಲಿ
ಜನಿಸಿದರು. ಇವರ ಹೆಸರು ಚಲ್ಲಪಲ್ಲಿ ಹನುಮಾನುಲು. ತಮ್ಮ ಐದನೆ ವಯಸ್ಸಿ
ನಲ್ಲಿ ವೀಣಾವಾದನದಲ್ಲಿ ಶಿಕ್ಷಣವನ್ನು ಪಾಂಡವದವು ಶಿಂಗರಾಜು ಎಂಬುವರಲ್ಲ,
ನಂತರ ಎರಡು ವರ್ಷಗಳ ಕಾಲ ಇಯ್ಯುಣ್ಣಿ ಅಪ್ಪಳಾಚಾರ್ಯುಲು ಎಂಬುವರಲ್ಲಿ
ಪಡೆದು ತಂದೆಯೊಡನೆ ಮದ್ರಾಸಿಗೆ ಹೋಗಿ ನೆಲೆಸಿದರು. ಅಲ್ಲಿ ಪ್ರಸಿದ್ಧ ವೈಣಿಕರಾದ
ಏಮನಿ ಶಂಕರಶಾಸ್ತ್ರಿಯವರಲ್ಲಿ ಪ್ರೌಢಶಿಕ್ಷಣ ಪಡೆದರು. ಇವರ ಪ್ರತಿಭೆಯು ಬೆಳಕಿಗೆ
ಬರಲು ಕಾರಣ ಖ್ಯಾತ ಚಲನಚಿತ್ರ ನಿರ್ದೇಶಕ ಶ್ರೀಧರ್. ಇವರು ನಿರ್ದೆಶಿಸಿದ
ಕಲೈಕೋವಿಲ್ ಎಂಬ ಚಲನಚಿತ್ರಕ್ಕೆ ಚಿಟ್ಟ ಬಾಬು ಉತ್ತಮವಾದ ಹಿನ್ನೆಲೆ ಸಂಗೀತ
ವನ್ನು ಒದಗಿಸಿದರು.
ಅಲ್ಲಿಂದ ಇವರ ಅದೃಷ್ಟದ ಬಾಗಿಲು ತೆರೆಯಿತು. ಎಲ್ಲೆಲ್ಲ
ಇವರ ಕಚೇರಿಗಳಾಗಲು ಮೊದಲಾಯಿತು. ೧೯೬೭ರಲ್ಲಿ ಮೈಸೂರು ದರ್ಬಾರಿನಲ್ಲಿ