2023-07-04 09:07:01 by jayusudindra
This page has been fully proofread once and needs a second look.
೩೫೧
ಭೇದಗಳನ್ನು ಹೇಳಲಾಗಿದೆ.
ಚಿಕ್ಕು
ಚಿಕ್ಕು ಪಾಧ್ಯಾಯನು ಮೈಸೂರಿನ ದೊರೆ ಚಿಕ್ಕ ದೇವ
ರಾಜ ಒಡೆಯರ ಕಾಲದಲ್ಲಿದ್ದ ಕವಿ. ಈತನು ಶ್ರೀರಂಗಪಟ್ಟಣದ ರಂಗನಾಥಸ್ವಾಮಿಯ
ಮಧುರ ಪ್ರೇಮವನ್ನು ಕುರಿತು ಹಾಡುಗಳನ್ನು ರಚಿಸಿ ತನ್ಮೂಲಕ ಶೃಂಗಾರರಸ ಪ್ರತಿ
ಪಾದನೆ ಮಾಡಿದ್ದಾನೆ. ಇವು ಲೌಕಿಕ ಮತ್ತು ಅಲೌಕಿಕ ವಿಷಯಗಳುಳ್ಳ ಪ್ರೇಮ
ಗೀತೆಗಳಾಗಿವೆ.
ಚಿಕ್ಕವರ್ಣ
ಆದಿತಾಳದ ವರ್ಣವನ್ನು ಸಾಮಾನ್ಯವಾಗಿ ಚಿಕ್ಕ ವರ್ಣವೆಂದು
ಹೇಳುವುದು ರೂಢಿ ಅಟತಾಳ ವರ್ಣವನ್ನು ಪೆರಿಯವರ್ಣಂ ಅಥವಾ ದೊಡ್ಡ ವರ್ಣ
ಎಂದು ಹೇಳುವುದು ರೂಢಿ, ಸಂಗೀತಾಭ್ಯಾಸಿಗಳು ಮೊದಲು ಆದಿತಾಳ ವರ್ಣಗಳನ್ನು
ಕಲಿತು ನಂತರ ಅಟತಾಳ ವರ್ಣಗಳನ್ನು ಕಲಿಯುತ್ತಾರೆ.
ಚಿಕಾರಿ
ಇದು ಉತ್ತರಭಾರತದ ಒಂದು ತಂತೀವಾದ್ಯ. ಸಂಗೀತವನ್ನು
ನುಡಿಸಲು ಮೂರು ನರದ ತಂತಿಗಳೂ, ಲೋಹದ ಐದು ಅನುರಣನ ತಂತಿಗಳೂ
ಇವೆ. ಇದನ್ನು ಕಮಾನಿನಿಂದ ನುಡಿಸುತ್ತಾರೆ
ಚಿಟ್ಟೆ-
ಚಿಟ್ಟೆ
ಇದು ಗಾಯನದ ಒಂದು ಶೈಲಿ
ಬದ್ಧವಾಗಿ ರಚಿಸಿರುವ ಸ್ವರಗಳು ಚಿಟ್ಟೆ ಸ್ವರಗಳು.
ಚಿಟ್ಟೆ ಪಲ್ಲವಿ ಎಂದು ಹೆಸರು. ಇಂತಹ ಪಲ್ಲವಿಯಲ್ಲಿ ನೆರವಲ್‌ಗೆ ಅವಕಾಶವಿಲ್ಲ.
ಮನೋಧರ್ಮ ಸಂಗೀತದ ಪಲ್ಲವಿಯಲ್ಲಿ ನೆರವಲ್‌ಗೆ ಅವಕಾಶವಿರುತ್ತದೆ. ಗಾಯಕನ
ಆಲಾಪನೆಯು ಒಂದೇ ತರಹ ಇದ್ದರೆ ಅದನ್ನು ಚಿಟ್ಟೆ ಆಲಾಪನೆ ಎನ್ನಬಹುದು.
ಎ
ವರ್ಣದ ಎತ್ತುಗಡೆ ಪಲ್ಲವಿಗೆ
ಚಿಟ್ಟೆತಾನಗಳು
ಗೀತಗಳನ್ನು ಅಭ್ಯಾಸ ಮಾಡಿದ ನಂತರ ವರ್ಣಗಳನ್ನು
ನುಡಿಸುವುದನ್ನು ಕಲಿಯುವ ಮುನ್ನ ವೀಣಾವಾದನವನ್ನು ಕಲಿಯುವವರಿಗಾಗಿ ವಿಶೇಷ
ತಾನಗಳನ್ನು ರಚಿಸಿದ್ದಾರೆ. ಇವು ಅಭ್ಯಾಸತಾನಗಳು. ಈ ಚಿಟ್ಟೆ ತಾನಗಳನ್ನು
ನಾಟ, ಗೌಳ, ಆರಭಿ, ಶ್ರೀರಾಗ, ವರಾಳಿ ಮುಂತಾದ ಘನರಾಗಗಳಲ್ಲಿ ರಚಿಸಲಾಗಿದೆ.
ಚಿಟ್ಟೆಸ್ವರ
ಕೃತಿಯ ಅಂದವನ್ನು ಹೆಚ್ಚಿಸಲು ಸ್ವರಾಲಂಕಾರಗಳನ್ನು ಸೇರಿ
ಸಿರುತ್ತಾರೆ. ಇವೇ ಚಿಟ್ಟೆಸ್ವರಗಳು ಇವನ್ನು ಅನುಪಲ್ಲವಿ ಮತ್ತು ಚರಣಗಳ
ಕೊನೆಯಲ್ಲಿ ಹಾಡಲಾಗುವುದು. ಇವನ್ನು ೨, ೪, ೬ ಆವರ್ತಗಳಾಗಿ ಮಧ್ಯಮ
ಕಾಲದಲ್ಲಿ ರಚಿಸಿರುತ್ತಾರೆ. ತೃತೀಯ ಕಾಲದಲ್ಲಿ ಚಿಟ್ಟೆ ಸ್ವರಗಳನ್ನು ರಚಿಸಿರುವು
ದುಂಟು. ಸಮಕಾಲದ ಚಿಟ್ಟೆಸ್ವರಗಳನ್ನು ಅನುಪಲ್ಲವಿಯ ನಂತರವೂ, ಮಧ್ಯಮ
ಕಾಲದಲ್ಲಿರುವುದನ್ನು ಚರಣದ ನಂತರವೂ ಹಾಡಲಾಗುವುದು
ಜನರಂಜನಿ ರಾಗದ
ಆನಂದಭೈರವಿರಾಗದ ನೀಮದಿಚಲ್ಲಗ ಎಂಬ ಕೃತಿಯ ಚಿಟ್ಟೆಸ್ವರವು ಮಧ್ಯಮ ಕಾಲ
ದಲ್ಲಿದೆ. ಕೆಲವು ಕೃತಿಗಳ ಚಿಟ್ಟೆ ಸ್ವರವು ಪುರಾತನ ಅಲಂಕಾರಗಳಿಂದ ಕೂಡಿವೆ.