2023-07-04 09:05:31 by jayusudindra
This page has been fully proofread once and needs a second look.
ಸ ನಿ ದ ಪ ಮ ಗ ರಿ ಸ
ಚತುಶ್ರುತಿ
ರಿಷಭ, ಅಂತರ ಗಾಂಧಾರ, ಶುದ್ಧ ಮಧ್ಯಮ, ಶುದ್ಧಧೈವತ ಮತ್ತು
ಕೈಶಿಕಿನಿಷಾದ ಈ ರಾಗದ ಸ್ವರಸ್ಥಾನಗಳು. ಷಡ್ಗವು ಗ್ರಹ, ಅಂಶ ಮತ್ತು ನ್ಯಾಸ
ಸ್ವರ. ಮಧ್ಯಮ, ನಿಷಾದಗಳು ಪರಸ್ಪರವಾದಿ ಸಂವಾದಿಗಳು
ರಾಗದ
ಸಂಗೀತ ಪಾರಿಭಾಷಿಕ ಕೋಶ
ಸರ್ವಸ್ವರ ಗಮಕವರಿಕರಾಗ,
ಆಡಮೋಡಿಗಲದೆ, ಸ್ವಾತಿ ತಿರುನಾಳ್ ಮಹಾರಾಜರ ಕೃಪಯಾಪಾಲಯ ಶೌರೇ
ಮತ್ತು ಜಯ ಜಯ ಪದ್ಮನಾಭ ಮುರಾರೇ ಎಂಬ ರಚನೆಗಳು ಈ ರಾಗದ ಪ್ರಸಿದ್ಧ
ಕೃತಿಗಳು.
ಚಾರುರೂಪಿಣಿ
ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ
ಮಲ್ಲಾರ ರಾಗದ ಒಂದು ರಾಗಿಣಿಯ ಹೆಸರು.
ಆ
ಚಾರುಲೀಲಾವಿಲಾಸ
ಮಾರ್ಪೆದ್ದಿ ಚೆಂಗರಾಯಶಾಸ್ತ್ರಿ (೧೮೧೦-
೧೯೦೦) ವಿರಚಿತ ತೆಲುಗಿನ ಒಂದು ಪದ್ಯರೂಪದಲ್ಲಿರುವ ಪ್ರಬಂಧ.
ಚಾರುವರ್ಧಿನಿ
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ.
ಸ ರಿ ಮ ಪ ದ ನಿ ಸ
ಸ ದ ಪ ಮ ಗ ರಿ ಸ
-
ಚಾಲನಿಕ
ಸಂಗೀತದಾಮೋದರವೆಂಬ ಗ್ರಂಥದಲ್ಲಿ ಉಕ್ತವಾಗಿರುವಂತೆ ಇದು
ಋಷಭದ ಮೂರನೆ ಶ್ರುತಿಯ ಹೆಸರು.
ಚಿಕ್ಕದೇವರಾಜ ಸಪ್ತಪದಿ
ಸಪ್ತಪದಿ ಎಂಬುದು ಏಳು ಹಾಡುಗಳ ಒಂದು
ಅಂತಹ ಏಳು ಗೀತಗಳು ಚಿಕ್ಕದೇವರಾಜ ಸಪ್ತಪದಿಯಲ್ಲಿವೆ. ಒಂದರಲ್ಲಿ
ಮಾತ್ರ ೧೦ ಹಾಡುಗಳಿವೆ.
ಮಂಗಳದ ಹಾಡೂ ಸೇರಿ ಒಟ್ಟು ೫೩ ಹಾಡುಗಳಿವೆ.
ಹಾಡುಗಳಿಗೆ ರಾಗ-ತಾಳಗಳ ನಿರ್ದೇಶನವಿದೆ. ಪಲ್ಲವಿಗಳೂ ಇವೆ.
ಶೃಂಗಾರರನವನ್ನು ನಿರೂಪಿಸಲು ಉತ್ತಮ ಸಾಹಿತ್ಯವುಳ್ಳ ಗೀತೆಗಳನ್ನು ಬಳಸಲಾಗಿದೆ.
ಇವು ಚಿಕ್ಕದೇವರಾಜ ಒಡೆಯರ ಅಂತಃಪುರದ ಪ್ರೇಮ ಜೀವನವನ್ನು ಬಿಡಿಸಿ ಬಣ್ಣಿಸು
ಇವೆ. ಶೃಂಗಾರರಸ ನಿರೂಪಣೆಗೆ ಈ ರೀತಿ ಗೀತೆಗಳನ್ನು ಉದಾಹರಣೆಯಾಗಿ
ಕನ್ನಡದಲ್ಲಿ ಬಳಸಿರುವ ಪ್ರಯತ್ನದಲ್ಲಿ ಇದು ಮೊಟ್ಟ ಮೊದಲನೆಯದು. ಚಿಕ್ಕದೇವ
ರಾಜ ಒಡೆಯರನ್ನು ನಾಯಕನಾಗಿಟ್ಟುಕೊಂಡು ಅವನನ್ನು ಪ್ರೀತಿಸಿದ ಸ್ತ್ರೀಯರ
ನೋವು ನಲಿವುಗಳನ್ನೂ, ಅವನ ಸಹೃದಯ ಪ್ರತಿಕ್ರಿಯೆಗಳನ್ನೂ ಚಮತ್ಕಾರದಿಂದ
ನುಡಿಗಳಲ್ಲಿ, ಪಲ್ಲವಿಗಳಲ್ಲಿ ಚಿತ್ರಿಸಲಾಗಿದೆ. ವಿಪ್ರಲಂಭಸಂಭೋಗ, ವಿರಹಿಣಿಯಲ್ಲಿ