This page has not been fully proofread.

೩೪೮
 
ಸಂಗೀತ ಪಾರಿಭಾಷಿಕ ಕೋಶ
 
ಚರವಿಭಾಸಿನಿ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
 
ಜನ್ಯರಾಗ,
 
ಸ ರಿ ಮ ಪ ಮ ದ ನಿ ಸ
ಸ ನಿ ಪ ಮ ಗ ರಿ ಸ
 
ಚರವಿಭಾಸಿತ ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ ಒಂದು
 
ಜನ್ಯರಾಗ,
 

 
ಸ ಗ ಮ ಪ ದ ನಿ ಸ
ಸ ದ ಪ ಮ ಗ ರಿ ಸ
 
ಚರವೀಣಾ-ಸ್ಥಳದಿಂದ ಸ್ಥಳಕ್ಕೆ ಕಚೇರಿಯಲ್ಲಿ ನುಡಿಸಲು ತೆಗೆದುಕೊಂಡು
ಹೋಗಬಹುದಾದ ವೀಣೆ.
 
ಚಾಕಾರಿ-ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
 
ಜನ್ಯರಾಗ,
 
ಸ ರಿ ಗ ಪ ನಿ ದ ಸ
ಸ ನಿ ದ ಪ ಮ ಗ ರಿ ಸ
 
ಚಾಕ್ಕಿಯಾರ್-ಕ್ರಿ. ಶ. ೨ನೆ ಶತಮಾನದ ತಮಿಳು ಗ್ರಂಥವಾದ
ಶಿಲಪ್ಪದಿಕಾರಂ ಎಂಬುದರಲ್ಲಿ ಉಕ್ತವಾಗಿರುವ ನಾಟ್ಯವಾಡುವವರ ವರ್ಗ
 
ಚಾಚತುಟ-ಇದು ಅಷ್ಟೋತರ ಶತತಾಳಗಳಲ್ಲಿ (೧೦೮) ಎರಡನೆಯದು
ಮತ್ತು ಪಂಚಮಾರ್ಗಿ ತಾಳಗಳಲ್ಲಿ ಒಂದು ತಾಳ ಇದರ ಅಂಗಗಳು ಗುರು, ಲಘು,
ಲಘು ಮತ್ತು ಗುರು. ಇದರ ಒಂದಾವರ್ತಕ್ಕೆ ೬ ಮಾತ್ರೆಗಳು ಅಥವಾ ೨೪ ಅಕ್ಷರ
 
ಕಾಲ.
 
ಚಾತ -ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು ಜನ್ಯರಾಗ,
ಸ ಗ ಮ ಪ ದ ಸ
 

 
ಅ: ಸ ನಿ ದ ಪ ಮ ಗ ಮ ರಿ ಸ
 
ಚಾರ್ತಾಳ-ಹಿಂದೂಸ್ಥಾನಿ ಸಂಗೀತ ಪದ್ಧತಿಯ ಒಂದು ತಾಳ,
ಚಾಪಘಂಟಾರವ-ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
ಜನ್ಯರಾಗ ಇದು ನಿಷಾದಾಂತ್ಯ ರಾಗ
 
ಸ ಗ ಮ ಪ ನಿ
 
ದ ಮ ಗ ರಿ ಸ ನಿ
 
ಚಾಪರಾ-ಇದು ಭಾವಭಟ್ಟನ ಅನೂಪಸಂಗೀತವಿಲಾಸವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ೨೨ ಶ್ರುತಿಪದ್ಧತಿಯಂತೆ ಮಧ್ಯಮದ ಎರಡನೆ ಶ್ರುತಿಯ ಹೆಸರು
 
ಚಾಮರ- (೧) ಈ ರಾಗವು ೫೬ನೆ ಮೇಳಕರ್ತ ಷಣ್ಮುಖಪ್ರಿ ಯದ ಒಂದು
ಜನ್ಯರಾಗ, ಪ ದ ನಿ ಸ ಎಂಬುದು ಒಂದು ವಿಶೇಷ ಪ್ರಯೋಗ.