This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಮತ್ತು
 
ಕಾಕಲಿನಿಷಾದವು
ನ್ಯಾಸಸ್ವರ.
 
ಇದು ಆರನೆ ಚಕ್ರವಾದ ಋತುಚಕ್ರದ ಆರನೆಯ ರಾಗ, ಷಟ್ಟುತಿಧೈವತ,
ಷಟ್ಟುತಿರಿಷಭ, ಅಂತರಗಾಂಧಾರ, ಶುದ್ಧ ಮಧ್ಯಮ
ಈ ರಾಗದ ಸ್ವರಸ್ಥಾನಗಳು, ಷಷ್ಟವು ಗ್ರಹ, ಅಂಶ ಮತ್ತು
ಷಟ್ಟುತಿಋಷಭ ಮತ್ತು ಧೈವತ, ಅಂತರಗಾಂಧಾರ ಮತ್ತು ಕಾಕಲಿ ನಿಷಾದಗಳು
ಪರಸ್ಪರವಾದಿ ಸಂವಾದಿಗಳು ಋಷಭ, ಮಧ್ಯಮ ಮತ್ತು ನಿಷಾದಗಳು ರಾಗ
ಛಾಯಾ ಸ್ವರಗಳು, ಜೀವ ಮತ್ತು ನ್ಯಾಸಸ್ವರಗಳು, ಅತ್ಯಂತ ಪ್ರಾಚೀನವಾದ
ರಾಗಾಂಗರಾಗ ಮತ್ತು ಮಂಗಳಕರರಾಗ ಮಹಾವೈದ್ಯನಾಥ ಅಯ್ಯರ್‌ರವರ
ಮೇಳರಾಗಮಾಲಿಕೆಯಲ್ಲಿ ಈ ರಾಗವು ಬರುತ್ತದೆ. ಕೋಟೀಶ್ವರ ಅಯ್ಯರ್ ಮತ್ತು
ಬಾಲಮುರಳಿಕೃಷ್ಣ ಈ ರಾಗದಲ್ಲಿ ಕೃತಿರಚನೆ ಮಾಡಿದ್ದಾರೆ.
 
ಚಲನವರಾಳಿ ಈ ರಾಗವು ೨೦ನೆ ಮೇಳಕರ್ತ ನಾಭೈರವಿಯ ಒಂದು
 
ಜನ್ಯರಾಗ,
 
ಆ ಸ ರಿ ಗ ಮ ದ ನಿ ದ ಸ
 
ಅ .
 
ಸ ದ ಮ ಗ ರಿ ಸ
 
೩೪೭
 
ಚಲವೀಣಾ-ಇದು ಪ್ರಯೋಗಕ್ಕಾಗಿ ಬಳಸುವ ವೀಣೆ. ಇದರಲ್ಲಿ ಏಳು
ತಂತಿಗಳ ಶ್ರುತಿಗಳನ್ನು ಕ್ರಮವಾಗಿ ಕಡಿಮೆ ಮಾಡಲಾಗುತ್ತದೆ. ಧ್ರುವವೀಣೆಯಲ್ಲಿ
ಏಳು ತಂತಿಗಳ ಶ್ರುತಿಯು ಒಂದೇ ಸಮನಾಗಿರುತ್ತದೆ.
 
ಚಲನಸ್ಕರ-ಇದು ಕಂಪಿತ ಸ್ವರವಾಗಿ ಬರುವ ಸ್ವರ. ಶುದ್ಧ ರಿಷಭ
ಮತ್ತು ಸಾಧಾರಣ ಗಾಂಧಾರ ಇವು ಚಲನಸ್ವರಗಳಿಗೆ ಉದಾಹರಣೆ. ಇದಕ್ಕೆ
ವಿರುದ್ಧವಾದುದು ನಿಶ್ಚಲ ಸ್ವರ.
 
ಚಲನಿ-ಈ ರಾಗವು ೩೫ನೆ ಮೇಳಕರ್ತ ಶೂಲಿನಿಯ ಒಂದು ಜನ್ಯರಾಗ,
 
ಸ ರಿ ಗ ಮ ಪ ದ ನಿ ದ ಸ
ಸ ನಿ ದ ಮ ಗ ರಿ ಸ
 
ಇದು
 
ಚರಣ-ಕರ್ಣಾಟಕ ಸಂಗೀತದ ರಚನೆಗಳಾದ ವರ್ಣ, ಕೃತಿ, ಪದ,
ಜಾವಳಿ ಮುಂತಾದುವುಗಳ ಮೂರನೆಯ ಅಂಗಕ್ಕೆ ಚರಣವೆಂದು ಹೆಸರು.
ಪಲ್ಲವಿ ಮತ್ತು ಅನುಪಲ್ಲವಿಯ
ಅನುಪಲ್ಲವಿಯ ಮೊತ್ತದಷ್ಟು ದೊಡ್ಡದಾಗಿರುತ್ತದೆ ಅಥವಾ
ಅನುಪಲ್ಲವಿಯಷ್ಟು ಅಥವಾ ಅದರ ನಾಲ್ಕರಷ್ಟು ದೊಡ್ಡದಾಗಿರುವುದುಂಟು. ಅನೇಕ
ಕೃತಿಗಳಲ್ಲಿ ಚರಣದ ಉತ್ತರ ಭಾಗದ ಸಂಗೀತವು ಅನುಪಲ್ಲವಿಯ ಸಂಗೀತದಂತೆ
ಇರುತ್ತದೆ.
 
ಚರಾವಳಿ-ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
 
ಜನ್ಯರಾಗ,
 
ಸ ರಿ ಗ ಪ ದ ಸ
 
ಸ ನಿ ದ ಪ ಗ ರಿ ಸ