This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಚಣ-ಇದು ಖಂಡಜಾತಿ ಝಂಪತಾಳದ ಹೆಸರು.
೮ ಅಕ್ಷರ ಕಾಲ.
 
ಇದರ ಒಂದಾವರ್ತಕ್ಕೆ
 
ಚಣನಾರಿಕ-ಈ ರಾಗವನ್ನು ಮಂಡಲ ಪಂಡಿತ ವಿರಚಿತ ಮಾತೃಕಾ
ವಿಲಾಸ 'ವೆಂಬ ಗ್ರಂಥದಲ್ಲಿ ಹಿಂದೋಳ ರಾಗದ ಒಂದು ರಾಗವೆಂದು ಹೇಳಿದೆ.
ಚಪಲಾ-ನಾರದ ವಿರಚಿತ ಸಂಗೀತ ಮಕರಂದವೆಂಬ ಗ್ರಂಥದಲ್ಲಿ ಹೇಳಿರುವ
೨೨ ಶ್ರುತಿ ಪದ್ಧತಿಯಂತೆ ಇದು ಪಂಚಮದ ಎರಡನೆ ಶ್ರುತಿಯ ಹೆಸರು.
ಚಂಚಲಿನಿ-ಈ ರಾಗವು ೬೧ನೆ ಮೇಳಕರ್ತ ಕಾಂತಾಮಣಿಯ ಒಂದು
 
ಜನ್ಯರಾಗ,
 
ಆ .
 
ಸ ರಿ ಮ ಗ ಮ ದ ನಿ ಸ ಸ
ಸ ನಿ ದ ಗ ರಿ ಸ
 
ಅ :
 
C
 
ಚರ್ಮಜ-ಚರ್ಮಾವನದ್ದ ವಾದ್ಯಗಳಿಂದ ಹೊರಡುವ ಶಬ್ದ ವು ಚರ್ಮಜ,
ಸಂಗೀತ ಧ್ವನಿ ಉಂಟಾಗುವ ಮೂಲವನ್ನು ಅನುಸರಿಸಿ ಶಾರೀರಜ, ನಖಜ,
ವಾಯುಜ, ಚರ್ಮಜ, ಲೋಹಜ ಎಂಬ ವರ್ಗಿಕರಣವು ನಾರದ ವಿರಚಿತ ಸಂಗೀತ
ಮಕರಂದವೆಂಬ ಗ್ರಂಧದಲ್ಲಿ ಉಕ್ತವಾಗಿದೆ.
 
ಚಮ್ಮರಪ್ರಿಯ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ.
 
ಸ ರಿ ಗ ದ ನಿ ಸ
 
ಸ ನಿ ದ ಸ ರಿ ಸ
 
ಚರ್ಮವಾದ ಚರ್ಮಾವನದ್ಧ ವಾದ್ಯಗಳಿಗೆ ಚರ್ಮವಾದ್ಯಗಳೆಂದು ಹೆಸರು.
ಇವು ತಾಳವಾದ್ಯಗಳು, ತಮಟೆ, ಮೃದಂಗ, ಡೋಲಕ್, ತವಿಲ್,
ಮುಂತಾದುವು ಈ ವರ್ಗಕ್ಕೆ ಸೇರಿವೆ.
ಇದು
 
ಚತುಷ್ಕಾಲ
 
ತಾಳದಶಪ್ರಾಣಗಳಿಗೆ ಸಂಬಂಧಿಸಿದ ವಿಷಯ.
ಇದರಲ್ಲಿ ತಾಳದ ಪ್ರತಿಕ್ರಿಯೆಗೆ ನಾಲ್ಕು ಕಾಲ ಪ್ರಮಾಣಗಳು ಮತ್ತು ನಾಲ್ಕು ಸ್ವರ
ಗಳಿರುತ್ತವೆ,
 
ಚತುಷ್ಪದಿ-ಇದು ನಾಲ್ಕು ಪಾದಗಳಿರುವ ಒಂದು ಸಂಗೀತ ರಚನಾ ವಿಶೇಷ,
ಚತುಃಷ ಕಲೆಗಳು-ಕಲೆ ಎಂದರೆ ಅಂಶ ಅಥವಾ ಕತೃತ್ವ,
ಕಾರವು ಬ್ರಹ್ಮವಾಚಕವಾದುದರಿಂದ ಸೃಷ್ಟಿಯನ್ನೂ, ಲ ಕಾರವು ಲಯವನ್ನೂ
ಸೂಚಿಸುವುದರಿಂದ ಕಲೆಯು ಸೃಷ್ಟಿ ಸ್ಥಿತಿ ಸಂಹಾರ ರೂಪವಾದುದು. ೬೪ ಕಲೆಗಳು
ಯಾವುವೆಂದರೆ ಗೀತ, ವಾದ್ಯ, ನೃತ್ಯ, ಅಲೇಖ್ಯ, ವಿಶೇಷಕ ಭೇದ್ಯ, ತಂಡುಲ ಬಲಿ,
ಕುಸುಮ ವಿಕಾರ, ಪುಷ್ಪಾ ಸ್ತರಣ, ದಶನ-ವಸನಾಂಗರಾಗ, ಮಣಿಭೂಮಿಕಾಕರ್ಮ,
ಶಯನರಚನ, ಉದಕವಾದ್ಯ, ಚಿತ್ರಾಶ್ಚಯೋಗ, ಮೂಲ್ಯಗ್ರಥನವಿಕಲ್ಪ, ಶೇಖರಾ
ಪೀಡಯೋಜನ, ನೇಪಥ್ಯ ಸಂಯೋಗ, ಕರ್ಣಪತ್ರಭಂಗ, ಗಂಧಯುಕ್ತ ಭೂಷಣ