2023-07-04 07:04:56 by jayusudindra
This page has been fully proofread once and needs a second look.
ಚತುರಶ್ರಗತಿ-
ತಾಳದ ಪ್ರತಿ ಎಣಿಕೆಯು ನಾಲ್ಕು ವಿಭಾಗಗಳನ್ನು ಒಳ
ಗೊಂಡಿರುವ ತಾಳದ ನಡೆ.
ಚತುರಶ್ರ ಲಘು
ಇದು ಒಂದು ಘಾತ ಮತ್ತು ಮೂರು ಬೆರಳುಗಳ ಎಣಿಕೆ
ಯುಳ್ಳ ಒಂದು ಬಗೆಯ ಲಘು. ಇದು ನಾಲ್ಕು ಅಕ್ಷರಕಾಲವುಳ್ಳದ್ದು ಇದಕ್ಕೆ
ಚತುರಶ್ರಜಾತಿ ಲಘು ಎಂದು ಹೆಸರು.
ತಾಳ.
ಚತುರಶ್ರ ವರ್ಣ
ಇದು ಪುರಾತನ ೧೦೮ ತಾಳಗಳಲ್ಲಿ ಒಂದು ಬಗೆಯ
ಇದರ ಅಂಗಗಳು ಎರಡು ಗುರು, ಒಂದು ಲಘು, ಎರಡು ದ್ರುತಗಳು ಮತ್ತು
ಒಂದು ಗುರು. ಇದರ ಒಂದಾವರ್ತಕ್ಕೆ ೮ ಮಾತ್ರೆಗಳು.
ಚತುರಶ್ರವರ್ಣರಾಜತಾಳ
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತ
ವಾಗಿರುವ ೧೨೦ ದೇಶೀತಾಳಗಳಲ್ಲಿ ಇದೊಂದು ಬಗೆಯ ತಾಳ,
ಚತುಶ್ರುತಿ ಅಂತರ
ಈ ಅಂತರವು ೯/೮ ಇರುತ್ತದೆ. ಶುದ್ಧ ಮಧ್ಯಮಕ್ಕೂ
ಪಂಚಮಕ್ಕೂ ಚತುಶ್ರುತಿ ಅಂತರವಿರುತ್ತದೆ.
ಚತುಶ್ರುತಿವತ
ಚತುಶ್ರುತಿಧೈವತ
ಇದು ಧೈವತ ಸ್ವರದ ಒಂದು ತೀವ್ರ ಸ್ವರೂಪ
ಇದರ ಕಂಪನ ಪ್ರಮಾಣವು ೨೭/೧೬ ಇರುತ್ತದೆ.
ಚತುಶ್ರುತಿರಿಷಭ
ಇದು ರಿಷಭ ಸ್ವರದ ತೀವ್ರ ಸ್ವರೂಪ. ಇದರ ಕಂಪನ
ಪ್ರಮಾಣವು ೯/೮ ಇರುತ್ತದೆ.
ಚತುರಂಗ
ಇದು ಹಿಂದೂಸ್ಥಾನಿ ಸಂಗೀತದ ಒಂದು ಬಗೆಯ ರಚನೆ.
ಇದರಲ್ಲಿ ಖ್ಯಾಲ್, ತರಾನ, ಸರ್‌ಗಮ್, ಶ್ರೀವತ ಎಂಬ ನಾಲ್ಕು ಅಂಗಗಳಿವೆ.
ಚತುರಂಗ ಪ್ರ
ಲಘು, ಗುರು, ಪ್ಲುತ ಮತ್ತು ಕಾಕಪಾದ ಎಂಬ
ನಾಲ್ಕು ತಾಳಾಂಗಗಳನ್ನು ನಾನಾ ವಿಧದಲ್ಲಿ ಬಳಸಿ ಮಾಡುವ ಒಂದು ತಾಳಪ್ರಸ್ತಾರ
ಚತುರಂಭಾ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ ಒಂದು
ಜನ್ಯರಾಗ,
ಆ
ಸ ರಿ ಗ ಮ ದ ಪ ದ ನಿ ಸ
ಸ ನಿ ದ ಪ ಮ ಗ ರಿ ಗ ಸ
ಚತುರ್ವಿಂಶತಿಶ್ರುತಿಗಳು
೨೪ ಶ್ರುತಿಗಳ ಪದ್ಧತಿಯನ್ನು ಮೇಳಾಧಿಕಾರ
ಲಕ್ಷಣವೆಂಬ ಗ್ರಂಥದಲ್ಲಿ ಹೇಳಿದೆ. ೨೨ ಶ್ರುತಿಗಳಲ್ಲದೆ ಗಾಂಧಾರ ಮತ್ತು ನಿಷಾದ
ಶ್ರುತಿಗಳೆಂಬ ಎರಡು ಶ್ರುತಿಗಳೂ ಸೇರಿ ೨೪ ಶ್ರುತಿಗಳು. ಇವುಗಳಲ್ಲಿ ಸಾಧಾರಣ
ಗಾಂಧಾರ ಮತ್ತು ಅಂತರಗಾಂಧಾರದ ಮಧ್ಯೆ ಒಂದು ಶ್ರುತಿಯ, ಮತ್ತೊಂದು
ಶ್ರುತಿಯು ಕೈಶಿಕಿನಿಷಾದ ಮತ್ತು ಕಾಕಲಿ ನಿಷಾದದ ಮಧ್ಯೆ ಬರುತ್ತದೆ. ಇವಕ್ಕೆ
ಪ್ರತಿ ಅಂತರ ಗಾಂಧಾರ ಮತ್ತು ಪ್ರತಿಕಾಕಲಿ ನಿಷಾದವೆಂದು ಹೆಸರು. ಇವು ಸಾವೇರಿ
ರಾಗದ ಸ ರಿ ಗ ರಿ ಸ ಮತ್ತು ಪ ದ ನಿ ದ ಪ ಮ ಗ ರಿ ಸ ಎಂಬ ಸ್ವರ ಸಮೂಹಗಳಲ್ಲಿ