This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಎಂಬ ವ್ಯಾಖ್ಯಾನವನ್ನು ರಚಿಸಿದ್ದಾನೆ (೧೪೫೦ ಕ್ರಿ. ಶ.). ಶ್ರುತಿ, ಸ್ಮೃತಿ, ಉಪ

ನಿಷತ್ತು, ಭಗವದ್ಗೀತೆ, ಷಡ್ಡ ರ್ಶನಗಳು, ವ್ಯಾಕರಣ, ತರ್ಕ, ಅಲಂಕಾರ ಇತ್ಯಾದಿ

ಹಲವು ಶಾಸ್ತ್ರಗಳಲ್ಲಿ ವಿದ್ವಾಂಸ, ಸ್ಪಷ್ಟವೂ, ವಿದ್ವತ್ತೂರ್ಣವೂ, ತರ್ಕಬದ್ಧವೂ,

ಪ್ರಾಮಾಣಿಕವೂ ಆದ ವ್ಯಾಖ್ಯಾನವನ್ನು ಬರೆದು ಮಹದುಪಕಾರ ಮಾಡಿದ್ದಾನೆ.

ಇವನಿಗೆ ರಾಯಬಯಕಾರ ಎಂಬ ಬಿರುದು ಇದ್ದಿತು.
 

 
ಚತುರಪ್ಪಾಲೆ ಲೈ
ಇದು ಪುರಾತನ ತಮಿಳು ಸಂಗೀತದ ನಾಲ್ಕು ಮುಖ್ಯ

ಮೂರ್ಛನೆಗಳಲ್ಲಿ ಒಂದು ಬಗೆಯ ಮೂರ್ಛನೆ.
 

 
ಚತುರ್ಭಾಗ-
ಅರ್ಧ ಅನುದ್ರುತಕ್ಕೆ ಸಮನಾದ ಒಂದು ಪ್ರಮಾಣ.

 
ಚತುರ್ಮುಖಿ
(೧) ಊದುವ ರಂಧ್ರಕ್ಕೂ ನುಡಿಸುವ ಮೊದಲ ರಂಧ್ರಕ್ಕೂ

ನುಡಿಸುವ ೧-೭ ರಂಧ್ರಗಳನ್ನು ಮುಚ್ಚಿ
 

ನಾಲ್ಕು, ಅಂಗುಲ ದೂರವಿರುವ ಕೊಳಲು,
 

ಊದಿದಾಗ ಮಧ್ಯ ಸ್ಥಾಯ ಯಿ ಪಂಚಮವು ಕೇಳಿಬರುತ್ತದೆ.
 

(೨) ಪುರಾತನ ೧೦೮ ತಾಳಗಳಲ್ಲಿ ಇದೊಂದು ತಾಳದ ಹೆಸರು ಇದರ

ಒಂದಾವರ್ತಕ್ಕೆ ೭ ಮಾತ್ರೆಗಳು, ಲಘು, ಗುರು, ಲಘು, ಪ್ಲುತ ಈ ತಾಳದ ಅಂಗಗಳು.

 
ಚತುರ್ಮುದ್ರ ಪ್ರಬಂಧ-
ದ್ವಾದಶ ಮುದ್ರೆಗಳಲ್ಲಿ ಯಾವುದಾದರೂ

ನಾಲ್ಕು ಮುದ್ರೆಗಳನ್ನು ಸಾಹಿತ್ಯದಲ್ಲಿ ಒಳಗೊಂಡಿರುವ ಒಂದು ಸಂಗೀತ ರಚನೆ

 
ಚತುರ್ಮುಖವಾದ-ದ್ಯ
ಇದು ನಾಲ್ಕು ಮುಖಗಳಿರುವ ಒಂದು ಬಗೆಯ

 
ಚತುರಾನನಪ್ರಿಯ-
ಈ ರಾಗವು ೧೧ನೆ ಮೇಳಕರ್ತ ಕೋಕಿಲಪ್ರಿಯದ

ಒಂದು ಜನ್ಯರಾಗ.
 
ನಗಾರಿ
 

ಸ ರಿ ಗ ಪ
 

ಸ ನಿ ದ ಪ ಗ ರಿ ಸ
 

 
ಚತುರಶ್ರ-
ಇದು ಭರತನಾಟ್ಯದ ಒಂದು ವಿಶೇಷ ಹಸ್ತ ಮುದ್ರೆ, ಕೂರ್ಪರ

ಅಂಸಗಳು ಸಮಾನವಾಗಿರುವಂತೆ ಎದೆಗೆ ಎದುರಾಗಿ, ಎಂಟು ಅಂಗುಲ ದೂರದಲ್ಲಿ

ಪ್ರೇಕ್ಷಕರಿಗೆ ಎದುರಾಗಿರುವಂತೆ, ಕಟಕಾಮುಖ ಹಸ್ತಗಳನ್ನು ಹಿಡಿದರೆ ಅದು ಚತುರಶ್ರ

ಮುದ್ರೆ
 

 
ಚತುಸ್ವರಶ್ರುತಿವಾದ್ಯ-
ನಾಲ್ಕು ಶ್ರುತಿಸ್ವರಗಳನ್ನು ಕೊಡುವ ಶ್ರುತಿವಾದ್ಯ

ಸ ಸ ಸ ಸ ಎಂಬ ಶ್ರುತಿಸ್ವರಗಳನ್ನು ಕೊಡುವ ತಂಬೂರಿಯು ಇದಕ್ಕೆ ನಿದರ್ಶನ.

ಮಂದ್ರ ಸ್ಥಾಯಿಷಡ್ಡ, ಮಧ್ಯ ಸ್ಥಾಯಿಷಡ್ಡ, ಮಧ್ಯಸ್ಥಾಯಿ ಪಂಚಮ ಮತ್ತು ತಾರ

ಸ್ಥಾಯಿ ಷಡ್ಡ ಸ್ವರಗಳನ್ನು ಕೊಡುವ ಶ್ರುತಿಪೆಟ್ಟಿಗೆಯು ಮತ್ತೊಂದು ನಿದರ್ಶನ.

 
ಚತುಸ್ತಾಳ -
ಪುರಾತನ ೧೦೮ ತಾಳಗಳಲ್ಲಿ ಇದೊಂದು ಬಗೆಯ

ಇದರ ಅಂಗಗಳು ಒಂದು ಗುರು ಮತ್ತು ಮೂರು ದ್ರುತಗಳು

ಮೂರುವರೆ ಮಾತ್ರೆ ಅಥವಾ ೧೪ ಅಕ್ಷರಕಾಲ.
 

ತಾಳ,
ಇದರ ಒಂದಾವರ್ತಕ್ಕೆ