This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಇವರ ಕಾಲದಲ್ಲಿ ಪ್ರಸಿದ್ಧವಾಗಿದ್ದ

ಮಿಕ್ಕ ೫೩ ಮೇಳಗಳನ್ನು ಸಾಧ್ಯ

ಕಲ್ಪಯಿಷ್ಯ ಮಾನ ಮೇಳಗಳೆಂದೂ

ಪದ್ಧತಿಯನ್ನು ಮಾತ್ರ ವಿವರಿಸಿದೆ.

ಆಗಿನ ಪ್ರಸಿದ್ಧ ಮೇಳಗಳು ತಮ್ಮ
 
ಉದಾ :
 

ಸಂಗೀತದ ಇತಿಹಾಸದಲ್ಲಿ ಒಂದು ಮೈಲಿಗಲ್ಲು.

೧೯ ಮೇಳಗಳಿಗೆ ಕಲ್ಪಿತಮೇಳಕರ್ತಗಳೆಂದೂ,

ವಾಗುವ (ಕಲ್ಪಮಾನ) ಮೇಳಗಳು ಮತ್ತು

ಹೇಳಿದ್ದಾರೆ. ಈ ಗ್ರಂಥದಲ್ಲಿ ೭೨ ವೆಳಕರ್ತ

ಆದರೆ ಅವುಗಳ ಹೆಸರಿನ ಪಟ್ಟಿಯನ್ನು ಕೊಟ್ಟಿಲ್ಲ

ಪದ್ಧತಿಯಲ್ಲಿ ಯಾವ ಸ್ಥಾನ

ನವನ್ನು ಪಡೆದಿವೆ ಎಂಬುದನ್ನು ಸಮಿಾಕರಿಸಿದ್ದಾರೆ.

ಗೌಳ (೧೫), ಮುಖಾರಿ (೧), ಭೈರವೀ (೨೦), ಆಹರೀ (೨೧) ಇತ್ಯಾದಿ.

ಇವರ ನಂತರ ಒಬ್ಬ ವಿದ್ವಾಂಸರು ಒಂದು ಸ್ವರಗ್ರಾಮಕ್ಕೆ ಅದರಿಂದಾಗುವ ರಾಗಗಳಲ್ಲಿ

ಒಂದು ಮುಖ್ಯರಾಗದ ಹೆಸರಿರಬೇಕೆಂದು ಯೋಚಿಸಿ ಕನಕಾಂಬರಿ-ಘನದ್ಯುತಿ ಎಂಬ

ಹೆಸರಿನ ಪಟ್ಟಿಯನ್ನು ರೂಪಿಸಿದರು. ಇದು ವೆಂಕಟಮಖಿಯ ಕಾಲದಲ್ಲಿ ಪ್ರಸಿದ್ಧ

ವಾಗಿಲ್ಲದಿದ್ದ ಅನೇಕ ಜನ್ಯರಾಗಗಳನ್ನು ಒಳಗೊಂಡಿದೆ. ನಂತರ ಸಂಗ್ರಹ ಚೂಡಾ

ಮಣಿ ' ಎಂಬ ಗ್ರಂಥದಲ್ಲಿ ಕನಕಾಂಗಿ-ರತ್ನಾಂಗಿ ಎಂಬ ಹೆಸರಿನ ಪಟ್ಟಿ ಯು ಬೆಳಕಿಗೆ

ಬಂದಿತು. ಇದು ಮೇಳ ಮತ್ತು ಅದರಿಂದ ಉಂಟಾಗುವ ರಾಗಕ್ಕೆ ಇರುವ ವ್ಯತ್ಯಾಸ

ವನ್ನೂ, ಮೇಳದ ಕ್ರಮ ಸಂಪೂರ್ಣ ಲಕ್ಷಣವನ್ನೂ ಸೂಚಿಸುವುದರಿಂದ ಅತ್ಯಂತ

ಸಮರ್ಪಕವಾದ ಪದ್ಧತಿಯಾಗಿದೆ. ನಂತರ ಕಟಪಯಾದಿ ಪದ್ಧತಿಗೆ ಅನುಗುಣವಾಗಿ

ಪಟ್ಟಿಯಲ್ಲಿರುವ ಹೆಸರುಗಳಿಗೆ ಕೆಲವು ಪದಗಳನ್ನು ಸೇರಿಸಲಾಯಿತು. ಈ ಪಟ್ಟಿಯು

೧೭೩೫ರ ನಂತರ ರೂಢಿಗೆ ಬಂದಿರಬೇಕು.
 

ವೆಂಕಟಮಖಿಯು ಸರ್ವರಾಗಮೇಳವೀಣಾ, ಏಕರಾಗಮೇಳವೀಣಾ, ಶುದ್ಧ

ಮೇಳವೀಣಾ, ಮಧ್ಯ ಮೇಳವೀಣಾ ಇತ್ಯಾದಿ ವೀಣೆಗಳನ್ನು ವರ್ಣಿಸಿದ್ದಾರೆ. ಇವು

ಗಳಲ್ಲಿ ಯಾವ ತಂತಿಯಲ್ಲಿ ಯಾವ ಸ್ವರವನ್ನು ನಿಯೋಜಿಸಬೇಕು, ಎಷ್ಟು ಮೆಟ್ಟು

ಗಳನ್ನಿಡಬೇಕು, ಅವುಗಳಲ್ಲಿ ಯಾವ ಸ್ವರಗಳನ್ನಿಟ್ಟುಕೊಂಡು ಯಾವ ಸ್ವರಗಳನ್ನು

ಬಿಡಬೇಕು, ಮಂದ್ರಸ್ಥಾಯಿ ಸ್ವರಗಳು ವಿಫಲವಾಗದೆ ಇರಬೇಕಾದರೆ ಪಕ್ಕಸಾರಣಿ

ಮಾರ್ಗವನ್ನು ಹೇಗೆ ಬಳಸಬೇಕು ಎಂಬ ವಿಷಯಗಳನ್ನು ವೀಣಾಪ್ರಕರಣವು ವಿವರಿಸು

ತದೆ. ಒಟ್ಟಿನಲ್ಲಿ ಸಂಗೀತ ಪ್ರಪಂಚದಲ್ಲಿ ವೆಂಕಟಮಖಿಯವರ ಪಾತ್ರ ಅನಾದೃಶ್ಯ

ವಾದುದು. ಇವರ ಮೇಳಕರ್ತವು ಯುಕ್ತಿಯುತವಾಗಿದೆ. ಇವರ ಅಮೋಘವಾದ

ಚಾತುರ್ಯವನ್ನು ಅಂಗೀಕರಿಸಿ ಮೇಳ ಮತ್ತು ಜನ್ಯಗಳನ್ನು ಮುಂದಿನ ಪೀಳಿಗೆಯ

ವಿದ್ವಾಂಸರು ಸ್ಥಿಮಿತಗೊಳಿಸಿದರು.
 

 
ಚತುರ್ಧಾತು
ಪ್ರಬಂಧ ಉತ್ಸಾಹ, ಮೇಳಾಸಕ, ಧ್ರುವ ಮತ್ತು

ಆಭೋಗವೆಂಬ ನಾಲ್ಕು ಧಾತುಗಳನ್ನು ಒಳಗೊಂಡಿರುವ ಪ್ರಬಂಧ.
 

 
ಚತುರಕಲ್ಲಿನಾಥ
ವಿಜಯನಗರ ದೊರೆ ಇಮ್ಮಡಿ ದೇವರಾಯನ ಕಾಲ

ದಲ್ಲಿದ್ದ ಸಂಗೀತ ವಿದ್ವಾಂಸ, ಲಕ್ಷ್ಮೀಧರ ಮತ್ತು ನಾರಾಯಣಿ ದೇವಿಯರ ಮಗ.

ಶಾರ್ಙ್ಗದೇವನ ಸಂಗೀತರತ್ನಾಕರವೆಂಬ ಗ್ರಂಥಕ್ಕೆ ಅದ್ಭುತವಾದ ಸಂಗೀತ ಕಲಾನಿಧಿ