This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಕಲೋಪನಾಥ
 
ಶುದ್ಧ ಮಧ್ಯ
 
ಮಾರ್ಗಿ
 
ಪೌರವಿ
 

ಕೃಷ್ಯಕ
 
ಗೀತ,
 

 
ಚತುರ್ದಂಡಿ-
ತಂಜಾವೂರಿನ ದೊರೆ ತುಳಜಾಜಿ ವಿರಚಿತ ಸಂಗೀತ

ಸಾರಾಮೃತವೆಂಬ ಗ್ರಂಥದಲ್ಲಿ ಉಕ್ತವಾಗಿರುವಂತೆ ಚತುರ್ದಂಡಿ ಎಂದರೆ

ಆಲಾಪ, ಠಾಯ ಮತ್ತು ಪ್ರಬಂಧ, ಈ ನಾಲ್ಕರ ಮೂಲಕ ಒಂದು ರಾಗದ

ಸ್ವರೂಪವು ವ್ಯಕ್ತವಾಗುತ್ತದೆ
 
ಹಿಂದಿನ ಗ್ರಂಥಗಳಲ್ಲಿ ಸ್ಥಾಯಿ, ಆರೋಹಿ, ಅವರೋಹಿ ಮತ್ತು ಸಂಚಾರಿ ಎಂಬ

ನಾಲ್ಕು ಗಾನಕ್ರಿಯೆಗಳನ್ನು ಚತುರ್ದಂಡಿ ಎಂದು ಹೇಳಿದೆ

ವಿಜಯನಗರದ ಕೃಷ್ಣ

ದೇವರಾಯನ ಆಸ್ಥಾನ ವಿದ್ವಾಂಸನಾಗಿದ್ದ ಲಕ್ಷ್ಮೀನಾರಾಯಣ ವಿರಚಿತ (೧೬ನೆ ಶ)

ಸಂಗೀತ ಸೂರ್ಯೋದಯ ಎಂಬ ಗ್ರಂಥದಲ್ಲಿ ಸ್ಥಾಯಿ, ಆರೋಹಿ ಅವರೋಹಿ,

ಸಂಚಾರಿ ಎಂಬ ನಾಲ್ಕು ವರ್ಣಗಳಿಗೆ ಚತುರ್ದಂಡಿ ಎಂದು ಹೇಳಿದೆ.
 
ಹದಿನೇಳನೆ
ಈ ಕಾಲದಲ್ಲಿ
 

 
ಚತುರ್ದಂಡಿ ಪ್ರಕಾಶಿಕಾ
ತಂಜಾವೂರು ಸಂಸ್ಥಾನವು

ಶತಮಾನದಲ್ಲಿ ತನ್ನ ಗರಿಷ್ಠ ಉತ್ಕರ್ಷಾವಸ್ಥೆಯನ್ನು ಮುಟ್ಟಿತ್ತು.

ಸಂಗೀತವು ತನ್ನ ಅತ್ಯುನ್ನತ ಸ್ಥಿತಿಯನ್ನು ಮುಟ್ಟಿತು. ವೆಂಕಟೇಶ್ವರ ದೀಕ್ಷಿತ ಅಥವಾ

ವೆಂಕಟಮಖಿಯು ಸಂಗೀತಶಾಸ್ತ್ರ ಪ್ರವರ್ತಕ, ಮಹಾವಾಗ್ಗೇಯಕಾರ

ಗಾಯಕ ಹಾಗೂ ವೈಣಿಕರಾಗಿದ್ದು ಚತುರ್ದಂಡಿ ಪ್ರಕಾಶಿಕಾ ಎಂಬ ಪ್ರಸಿದ್ಧ ಸಂಗೀತ

ಶಾಸ್ತ್ರ ಗ್ರಂಥವನ್ನು ರಚಿಸಿದರು. ಇದು ಆಧುನಿಕ ಕರ್ಣಾಟಕ ಸಂಗೀತ ನಾಂದಿ
 
ಮತ್ತು
 
ದಮತ್ತು
ಋಷಭದಿಂದ ಋಷಭದವರೆಗೆ

ಷಡ್ಡದಿಂದ ಷಡ್ಡದವರೆಗೆ

ನಿಷಾದದಿಂದ ನಿಷಾದದವರೆಗೆ

ಧೈವತದಿಂದ ಧೈವತದವರೆಗೆ
 
ಪಂಚಮದಿಂದ ಪಂಚಮದವರೆಗೆ
 
೩೪೧
 

ರೂಪವಾದ ಆಧಾರಭೂತ ಸಂಸ್ಕೃತದಲ್ಲಿರುವ ಪ್ರಾಮಾಣಿಕ ಗ್ರಂಥ. ಇದು ಹತ್ತು

ಪ್ರಕರಣಗಳ ಗ್ರಂಧ, ವೀಣಾ, ಶ್ರುತಿ, ಸ್ವರ ಮೇಳ, ರಾಗ, ಆಲಾಪ, ಠಾಯ, ಗೀತ,

ಪ್ರಬಂಧ ಮತ್ತು ತಾಳ ಪ್ರಕರಣಗಳಿಂದ ಕೂಡಿದೆ. ಈ ಗ್ರಂಥದಲ್ಲಿ ರಾಗಾಂಗ,

ಉಪಾಂಗ, ಭಾಷಾಂಗ ರಾಗಗಳ ಲಕ್ಷಣಗಳನ್ನೂ, ಗೀತ ಮತ್ತು ಸಂಚಾರೀ ರೂಪದ

ಲಕ್ಷಗಳನ್ನೂ, ಅವುಗಳಲ್ಲಿರುವ ಧಾತುವಿನ ಚಮತ್ಕಾರಗಳು, ಶುದ್ಧವಿಕೃತ ಸ್ವರ

ಗಳನ್ನು ಸೂಚಿಸುವ ಸಂಕೇತಾಕ್ಷರಗಳು, ಚಕ್ರ ಮೇಳಗಳನ್ನು ಸೂಚಿಸುವ ಸಂಕೇತ

ಗಳನ್ನೂ ಕೊಟ್ಟಿದೆ.
 

೭೨ ಮೇಳಕರ್ತ ಪದ್ಧತಿಯನ್ನು ತಿಳಿಸುವ ಮೇಳಪ್ರಕರಣವು ಈ ಗ್ರಂಥದ

ಮುಖ್ಯಭಾಗ, ಮೇಳದ ಕಲ್ಪನೆಯು ವಿದ್ಯಾರಣ್ಯರ ಕಾಲದಿಂದ ಮೊದಲ್ಗೊಂಡು,

ಕಲ್ಲಿನಾಥ, ರಾಮಾಮಾತ್ಯ, ಪೋಲೂರಿ ಗೋವಿಂದ, ಪುಂಡರೀಕವಿಠಲ, ಸೋಮನಾಥ

ಮೊದಲಾದವರಿಂದ ಬೆಳೆಸಲ್ಪಟ್ಟು ವೆಂಕಟಮಖಿಯಲ್ಲಿ ಸಂಪೂರ್ಣ ವಿಕಾಸಗೊಂಡಿತು

ಎನ್ನ ಬಹುದು. ಈ ಪದ್ಧತಿಯು ಭಾರತೀಯ ಸಂಗೀತದಲ್ಲಿ ಹಾಗೂ ಕರ್ಣಾಟಕ