2023-07-04 06:52:54 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಒಂದು ಬಗೆಯ
ಚತುರ್ಥ-
ಚತುರ್ಥ
ಸಾಮಸ್ವರ ಮೇಳದ ಅವರೋಹಣ ಕ್ರಮದಲ್ಲಿ ಇದು ನಾಲ್ಕನೆಯ
ಸ್ವರ, ನಿಷಾದಕ್ಕೆ ಸಮನಾದುದು. ಸ್ವರಾಂತರಕ್ಕೆ ಚತುರ್ಥ ಎಂದು ಹೆಸರು.
ಚತುರ್ಥ
ಚತುರ್ಥಕಾಲ
ನಾಲ್ಕನೆಯ ಕಾಲ-
ಚತುರ್ಥರಾಗವರ್ಧಿನಿ
ಇದು ರಾಗಾಲಾಪನೆಯ ನಾಲ್ಕನೆಯ ಹಂತ.
ಮೂರ್ಛನ ಪ್ರಸ್ತಾರ ಅಥವಾ ಸಂಚಾರವನ್ನು ದ್ರುತಗತಿಯಲ್ಲಿ ಮಾಡುವುದು
ಆಲಾಪನೆಯ ನಾಲ್ಕನೆ ಹಂತದ ಮುಖ್ಯ ಲಕ್ಷಣ.
ಚತುರಹಸ್ತ
ಇದು ಭರತನಾಟ್ಯದ ಅಸಂಯುತ ಹಸ್ತಗಳಲ್ಲಿ ಒಂದು
ಬಗೆ, ಕಿರುಬೆರಳನ್ನು ನೇರವಾಗಿ ಚಾಚಿ, ಉಳಿದ ಮೂರನ್ನು ಸೇರಿಸಿ ಅದರಿಂದ
ಪ್ರತ್ಯೇಕಿಸಿ, ಹೆಬ್ಬೆರಳನ್ನು ಅನಾಮಿಕೆಯ ಮೂಲದಲ್ಲಿ ಇಡುವುದು ಚತುರಹಸ್ತ.
ಕಸ್ತೂರಿ, ಸ್ವಲ್ಪ ಎಂಬ ಅರ್ಥದಲ್ಲಿ, ಚಿನ್ನ, ತಾಮ್ರಾದಿ ಲೋಹಗಳು, ಒದ್ದೆ, ಖೇದ,
ರಸಾಸ್ವಾದನೆ, ವರ್ಣಭೇದ, ಪ್ರಮಾಣ, ಸರಸ, ಮಂದಗಮನ,
ತುಂಡರಿಸುವುದು, ಆಸನ, ತುಪ್ಪ, ಎಣ್ಣೆ ಮೊದಲಾದ ದ್ರವ ವಸ್ತುಗಳ ಸೂಚನೆಗೆ
ಈ ಹಸ್ತವಿನಿಯೋಗವಾಗುವುದು
ಚತುರ್ಥವಿದಾರಿ
ಇದು ರಾಗಾಲಾಪನೆಯ ನಾಲ್ಕನೆಯ ಹಂತವಾದ
ಮುಕ್ತಾಯಭಾಗ.
ಚತುರ್ಥಸೈಂಧವಿ
ಇದು ಸಂಗೀತರತ್ನಾ ಕರವೆಂಬ ಗ್ರಂಥದಲ್ಲಿ ಉಕ್ತವಾಗಿ
ರುವ ಒಂದು ಸೈಂಧವಿರಾಗ,
ಚತುರ್ದಶಮೂರ್ಛನಗಳು
ಷಡ್ಡ ಗ್ರಾಮ ಮತ್ತು ಮಧ್ಯಮಗ್ರಾಮದ
ಗ್ರಹ ಭೇದದಿಂದ ೧೪ ಸ್ವರಮೇಳಗಳನ್ನು ಪಡೆಯಲು ಸಾಧ್ಯವಿದೆ.
ಪಡಗ್ರಾಮಮೂರ್ಛನದಿಂದ ಉಂಟಾಗುವ ಏಳು ಸ್ವರಮೇಳಗಳು
ಉತ್ತರ ಮಂದ್ರ
ರಜನಿ
ಉತ್ತರಾಯತ
ನಿಷಾದದಿಂದ ನಿಷಾದ
ಧೈವತದಿಂದ ಧೈವತದವರೆಗೆ
ಪಂಚಮದಿಂದ ಪಂಚಮದವರೆಗೆ
ಶುದ್ಧ ಷಡ್ಡ
ಮತ್ಸರಿಕೃತ
ಅಶ್ವಕ್ರಾಂತ
ಮಧ್ಯಮದಿಂದ ಮಧ್ಯಮದವರೆಗೆ
ಋಷಭದಿಂದ ಋಷಭದವರೆಗೆ
ಅಭಿರುದ್ಧ ತ
-
ಮಧ್ಯಮದಿಂದ ಮಧ್ಯಮದವರೆಗೆ
ಗಾಂಧಾರದಿಂದ ಗಾಂಧಾರದವರೆಗೆ