This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಆ.
 
ಜನ್ಯರಾಗ,
 
ಸ ರಿ ಗ ಮ ವ ನಿ ಸ
ಸ ನಿ ದ ಪ ಮ ಗ ಸ
 
ಘನವಾದ - ಗಟ್ಟಿ ವಸ್ತುಗಳನ್ನು ಪರಸ್ಪರ ಹೊಡೆಯುವುದರಿಂದ ನಾದ
ವನ್ನುಂಟುಮಾಡುವ ತಾಳವಾದ್ಯಗಳಿಗೆ ಘನವಾದ್ಯಗಳೆಂದು ಹೆಸರು. ಶಾಸ್ತ್ರಗ್ರಂಧಗಳು
ತಾಳ, ಕಾಂಸ್ಯತಾಳ, ಘಂಟೆ, ಜಯಘಂಟೆ (ಜಾಗಟೆ), ಕುದ್ರಘಂಟೆ, ಕಮ್ಮಾ,
ಶುಕ್ತಿ, ಪಟ್ಟ, ಬ್ರಹ್ಮತಾಳ ಮುಂತಾದುವನ್ನು ವರ್ಣಿಸಿವೆ ಕ್ಷುದ್ರ ಘಂಟೆಗೆ ಗೆಜ್ಜೆ,
ಶುಕ್ತಿವಾದಕ್ಕೆ ಕಿರಿಕಿಟ್ಟ, ಕಾಂಸ್ಯತಾಳಕ್ಕೆ ಕಂಸಾಳ ಮುಂತಾದುವು ಕನ್ನಡದ
ಹೆಸರುಗಳು. ತಿರುಜ್ಞಾನ ಸಂಬಂಧರ್‌ಗೆ (೭ನೆ ಶ) ದೊರಕಿದ ಚಿನ್ನದ ತಾಳವು
(ಪೋಟ್ರಾಲಂ) ಬೆಲೆಬಾಳುವ ಲೋಹದ ತಾಳಗಳಿಗೆ ನಿದರ್ಶನ.
 
ಘನಸಿಂಧು-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ
ಒಂದು ಜನ್ಯರಾಗ
 
ಸ ಮ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ರಿ ಸ
 
ಘನಸುಪ್ರಭಾತ-ಈ ರಾಗವು ೬೫ನೆ ಮೇಳಕರ್ತ ಮೇಚ ಕಲ್ಯಾಣಿಯ
ಒಂದು ಜನ್ಮರಾಗ,
 
ಸ ರಿ ಮ ಪ ದ ಸ
 
ಸ ದ ಪ ದ ನಿ ದ ಪ ಮ ಗ ರಿ ಸ
 
ಘನಶ್ಯಾನಳ-ಈ ರಾಗವು ೫ನೆ ಮೇಳಕರ್ತ ಮಾನವತಿಯ ಒಂದು
 
448
 
ಜನ್ಯರಾಗ,
 

 
ಸ ರಿ ಮ ಪ ದ ಸ
 
ಸ ನಿ ದ ಪ ಮ ಗ ರಿ ಸ
 
ಘನಶೋಭಿತ-ಈ ರಾಗವು ೧೪ನೆ ಮೇಳಕರ್ತ ವಕುಳಾಭರಣದ ಒಂದು
 
ಸ ರಿ ಗ ಮ ದ ನಿ ದ ಸ
ಸ ದ ನಿ ಪ ಮ ಗ ರಿ ಸ
 
ಘನಾ-ಸಂಗೀತದಾಮೋದರವೆಂಬ ಗ್ರಂಥದಲ್ಲಿ ಉಕ್ತವಾಗಿರುವ ಋಷಭದ
ಒಂದು ಶ್ರುತಿಯ ಹೆಸರು.
 
ಘನಾಂದಳಿಕ ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
 
ಸ ಗ ಮ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
ಘಾತ-ಇದು ತಾಳವನ್ನು ತೋರಿಸುವ ಸಶಬ್ದ ಕ್ರಿಯೆ.