2023-06-25 23:29:04 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ತನ್ನ
ವಾಗಿರಬಾರದು. ಅದು ಜೀವನದ ಕನ್ನಡಿಯಂತೆ ಇರಬೇಕೆಂದೂ
ಸೂಚನೆಗಳನ್ನೂ, ಬದುಕಿನ ಅನುಭವಗಳನ್ನೂ ಸಮನ್ವಯಗೊಳಿಸಿಕೊಂಡರೆ ಆಗ
ಅಭಿನಯ ಚೆನ್ನಾಗಿರುತ್ತದೆ ಎಂದೂ ಭರತನು ಹೇಳಿದ್ದಾನೆ.
ಅಭಿನವ ಜಯದೇವ-ಪದಗಳಿಗೆ ಪ್ರಸಿದ್ಧನಾಗಿರುವ ಕ್ಷೇತ್ರಜ್ಞನನ್ನು ಈ
ರೀತಿ ಹೇಳುವುದು ರೂಢಿಯಲ್ಲಿದೆ.
೨೮
ಅಭಿನವ ಭಾರತೀ-ಅಭಿನವ ಗುಪ್ತ ವಿರಚಿತವಾದ ಭರತಮುನಿಯ ನಾಟ್ಯ
ಶಾಸ್ತ್ರ ಗ್ರಂಧದ ಅದ್ಭುತ ವ್ಯಾಖ್ಯಾನ ಗ್ರಂಧ, ಪ್ರಾಚೀನ ಸಂಗೀತಕ್ಕೆ ಈತನ
ಉಲ್ಲೇಖನಗಳು ಪ್ರಮಾಣವಾಗಿವೆ. ಇದರಲ್ಲಿ ವಿಷಯ ಸಂಗ್ರಹವು ಮುಖ್ಯ ಆಧಾರ
ವಾಗಿದೆ.
ಅಭಿನವ ಭೋಜ -ಮೈಸೂರಿನ ಮುಮ್ಮಡಿ ಕೃಷ್ಣರ ರಾಜ ಒಡೆಯರು ಮತ್ತು
ತಮಿಳುನಾಡಿನ ಉಡೈಯಾರ ಪಾಳ್ಯದ ಯುವರಂಗ ಭೂಪತಿಗೆ (೧೯ ನೇ ಶ.) ಇದ್ದ
ಬಿರುದು. ಇವರಿಬ್ಬರೂ ಕಲಾಪೋಷಕರೂ, ಸಾಹಿತಿಗಳೂ ಆಗಿದ್ದರು.
ಅಭಿನಯ ದರ್ಪಣ ನಂದಿಕೇಶ್ವರ ಅಥವಾ ನಂದಿನ್ ಎಂಬುವನು ರಚಿ
ಸಿರುವ ಪ್ರಸಿದ್ಧ ಸಂಸ್ಕೃತ ಗ್ರಂಧ. ಈ ಗ್ರಂಧವು ಭರತಾರ್ಣವವೆಂಬ ದೊಡ್ಡ ಗ್ರಂಧದ
ಸಂಗ್ರಹ ಸ್ವರೂಪವೆಂದು ಹೇಳಲಾಗಿದೆ. ಇದು ಸುಮಾರು ೩ನೆಯ ಶತಮಾನಕ್ಕೂ
ಹಿಂದಿನ ಪುರಾತನ ಗ್ರಂಥ. ಈ ಗ್ರಂಥದಲ್ಲಿ ಸಭಾ, ರಂಗ ಮಂಟಪ, ನಾಟ್ಯ, ನೃತ್ಯ
ಮೊದಲಾದ ಪಾರಿಭಾಷಿಕ ಶಬ್ದಗಳಿಗೆ ಸಂಕ್ಷೇಪವಾಗಿ ಅರ್ಧವನ್ನು ವಿವರಿಸಲಾಗಿದೆ.
ಹಾಗೆಯೇ ಅಂಗೋಪಾಂಗ ಭೇದಗಳು, ಅವುಗಳ ಸ್ವರೂಪ ವಿನಿಯೋಗಗಳು,
ಸಂಯುತ, ಅಸಂಯುತ ಹಸ್ತಗಳು, ನವಗ್ರಹ ಹಸ್ತಗಳು, ಬಂಧು ಹಸ್ತಗಳು, ದಶಾವ
ತಾರ ಹಸ್ತಗಳು ಮುಂತಾದುವುಗಳ ವಿವರಣೆಯಿದೆ.
ಅಭಿನಯಗಾನ-ಅಭಿನಯದೊಡನೆ ಹಾಡುವುದು.
ಅಭಿನಯಹಸ್ತ-ಅಭಿನಯ ಮಾಡುವಾಗ ಬಳಸುವ ಹಸ್ತಮುದ್ರೆಗಳು,
ಅಭಿನವಗುಪ್ತ-ಸಂಸ್ಕೃತ ಸಾಹಿತ್ಯದಲ್ಲಿ ಇವನಿಗೆ ಆಚಾರ್ಯ ಅಭಿನವ
ಗುಪ್ತನೆಂದು ಹೆಸರಿದೆ. ಇವನು ಕಾಶ್ಮೀರದ ಶೈವಸಂಪ್ರದಾಯದ ಬ್ರಾಹ್ಮಣ, ವರಾಹ
ಗುಪ್ತನ ಮಗನಾದ ನೃಸಿಂಹಗುಪ್ತನ ಮಗ ಉತ್ಪಲರಾಜ, ಭಟೋಂದುರಾಜ,
ಲಕ್ಷ್ಮಣಗುಪ್ತ ಮತ್ತು ಭಟ್ಟತಾತ ಇವನ ಗುರುಗಳು. ಕ್ಷೇಮೇಂದ್ರನು ಇವನ ಶಿಷ್ಯ,
ಇವನನ್ನು ಆಚಾರ್ಯಪಾದ ; ಆಚಾರ್ಯಾಭಿನವಗುಪ್ತಪಾದ , ಎಂದು ಗೌರವ
ದಿಂದ ಕರೆಯುತ್ತಿದ್ದರು. ನಾರದನು ತನ್ನ ಸಂಗೀತಮಕರಂದವೆಂಬ ಗ್ರಂಥದಲ್ಲಿ
ಇವನನ್ನು ಮಹಾಮಹೇಶ್ವರಾಚಾರ್ಯನೆಂದು ಕರೆದಿದ್ದಾನೆ. ಅಭಿನವಗುಪ್ತನು ಭರತ
ಮುನಿಯ ನಾಟ್ಯಶಾಸ್ತ್ರಕ್ಕೆ ಅದ್ವಿತೀಯವಾದ ವ್ಯಾಖ್ಯಾನವನ್ನು ಬರೆದಿದ್ದಾನೆ.
ಮತ್ತೊಬ್ಬ ವ್ಯಾಖ್ಯಾನಕಾರ ಕೀರ್ತಿಧರನನ್ನು ಉಲ್ಲೇಖಿಸಿದ್ದಾನೆ. ಅಭಿನವ
ಭಾರತೀಯವೆಂಬ ಉದ್ಧಂಧವನ್ನು ಬರೆದು ಇತರರಿಗೆ ಆಚಾರ್ಯ ಸ್ಥಾನದಲ್ಲಿದ್ದಾನೆ.