2023-07-04 06:34:40 by jayusudindra
This page has been fully proofread once and needs a second look.
444
ಕಲ್ಯಾಣರಂಗ ಮುಂತಾದವರು ಇವರ ಪೋಷಕರಾಗಿದ್ದರು.
ವಾದ ಮಾದರಿ ಪದಗಳು.
ಕೃಷ್ಣಯ್ಯರ್ ರಚಿಸಿರುವ ತಮಿಳು ಪದಗಳು ಕರ್ಣಾಟಕ ಸಂಗೀತದ ರಚನೆಗಳ
ಒಂದು ಮುಖ್ಯಭಾಗವಾಗಿವೆ. ಇವು ಭಾವ, ರಸ, ಸಾಹಿತ್ಯ ಮತ್ತು ಸಂಗೀತದ
ಸಾಮರಸ್ಯ ಮತ್ತು ಲಾಲಿತ್ಯಗಳಿಗೆ ಪ್ರಸಿದ್ಧವಾಗಿವೆ. ಇವು ಅಭಿನಯಕ್ಕೆ ಬಹುಯುಕ್ತ
ಇವುಗಳಲ್ಲಿ ಮುತ್ತು ಕುಮಾರ, ವೇಲವ, ಸುಬ್ರಹ್ಮಣ್ಯ
ಮತ್ತು ಇವಕ್ಕೆ ಸರಿಸಮಾನವಾದ ಅಂಕಿತಗಳನ್ನು ಬಳಸಿದ್ದಾರೆ. ಇವರು ಹಲವು
ಕ್ಷೇತ್ರಗಳನ್ನು ಸಂದರ್ಶಿಸಿ ಅಲ್ಲಿಯ ದೇವರುಗಳನ್ನು ಕುರಿತು ಪದಗಳನ್ನೂ, ಭಕ್ತಿಗೀತೆ
ಗಳನ್ನೂ ಹಾಡಿದ್ದಾರೆ. ಇವರಿಗೆ ಸಂಗೀತದ ದಿಗ್ಗಜಗಳಾಗಿದ್ದ ತ್ಯಾಗರಾಜರು,
ಗೋಪಾಲಕೃಷ್ಣ ಭಾರತಿ, ಶಂಕರಾಭರಣಂ ನರಸಯ್ಯ ಮುಂತಾದವರ
ಭೈರವಿರಾಗದ ವೇಲವರೇ, ಕಲ್ಯಾಣಿರಾಗದ ಪಾರೆಂಗುಂ ಪಾರ್ತಾಲುಂ ಎಂಬ ಪದಗಳು
ಪೂರ್ಣ ವರಿಕ ಶೈಲಿಗೆ ಪ್ರಸಿದ್ಧವಾದ ಪದಗಳು
ಕೃಷ್ಣಯ್ಯರ್‌ಗೆ ದೊರೆತ ಸನ್ಮಾನಗಳು ಅಪಾರ. ಅನೇಕ ರಾಜರು ಮತ್ತು
ಜಮಾನ್ದಾರರು ಇವರನ್ನು ಸನ್ಮಾನಿಸಿದರು. ಇವರಿಗೆ ಪ್ರಯಾಣ ಮಾಡಲು ಒಂದು
ಕುದುರೆಯನ್ನೂ, ಅದನ್ನು ನೋಡಿಕೊಳ್ಳಲು ಒಬ್ಬ ಸೇವಕನನ್ನೂ ಕೊಟ್ಟಿದ್ದರು.
ಇವರ ಶಿಷ್ಯರಲ್ಲಿ ಆದಿಮೂರ್ತಿ ಅಯ್ಯರ್ ಎಂಬುವರು ಪ್ರಮುಖರು.
ಪದಗಳಿಗೆ ಕ್ಷೇತ್ರಯ್ಯನವರ ಸ್ಥಾನವು ಎಷ್ಟು ಹಿರಿದಾದುದೋ ಅಷ್ಟೇ ಕೃಷ್ಣ ಯರ್‌ರವರ
ಸ್ಥಾನವು ತಮಿಳು ಪದಗಳಿಗೆ ಹಿರಿದಾದುದು. ನಾಟ್ಯ ಪ್ರದರ್ಶನಗಳಲ್ಲಿ ಇವರ
ಪದಗಳು ಇದ್ದೇ ಇರುತ್ತವೆ
ತೆಲುಗು
ವ
ಘನತರಂಗಿಣಿ
ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ.
ಸ ರಿ ಮ ಪ ದ ನಿ ಸ ಸ
ಸ ಸ ನಿ ದ ಮ ಗ ಸ
ಘನತಾನ
ಇದು ಘನರಾಗಗಳ ತಾನ.
ಘನನಾಯಕಿ
ಈ ರಾಗವು ೬೫ನೆ ಮೇಳಕರ್ತ ಮೇಚಕಲ್ಯಾಣಿಯ
ಒಂದು ಜನ್ಯರಾಗ,
ಸ ಗ ಮ ನಿ ದ ದ ನಿ ಸ
ಸ ನಿ ದ ಪ ಮ ಗ ರಿ ಸ
ಘನಪಂಚಕ
ನಾಟ, ಗೌಳ, ಆರಭಿ, ಶ್ರೀರಾಗ ಮತ್ತು ವರಾಳಿ-ಈ ಐದು
ರಾಗಗಳಿಗೆ ಘನಪಂಚಕಗಳೆಂದು ಹೆಸರು.
ಕೇದಾರ, ನಾರಾಯಣಗೌಳ, ರೀತಿಗೌಳ, ಸಾರಂಗನಾಟ, ಭೌಟಿ-ಈ
ಐದು ರಾಗಗಳಿಗೆ ದ್ವಿತೀಯ ಘನಪಂಚಕಗಳೆಂದು ಹೆಸರು.