This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕೆಳಭಾಗದಲ್ಲಿ ನುಡಿಕೆಗಳು ಮನೋಹರವಾದ ನಾದವೈವಿಧ್ಯವನ್ನು ತೋರುತ್ತವೆ.
ಎರಡು ಅಂಗೈಗಳು ಮತ್ತು ಬೆರಳುಗಳಿಂದ ಈ ವಾದ್ಯವನ್ನು ನುಡಿಸುತ್ತಾರೆ.
ಕಚೇರಿಗಳಲ್ಲಿ ತನಿ ನುಡಿಸುವಾಗ ಮುಕ್ತಾಯದ ಘಟ್ಟದಲ್ಲಿ ಇದನ್ನು ಮೇಲಕ್ಕೆ
ಎಸೆದು, ಮುಕ್ತಾಯದ ಎಡುಪಿಗೆ ಸರಿಯಾಗಿ ಕೈಸೇರುವಂತೆ ನುಡಿಸುವ ಸಮರ್ಥ
ವಾದಕರು ಅನೇಕರು ಇದ್ದಾರೆ. ಸಾಧಕ ಮಾಡಿ ಬಹುತೀವ್ರಗತಿಯಲ್ಲಿ ಜತಿಗಳನ್ನು
ನುಡಿಸಬಹುದು. ಇದನ್ನು ಖಂಜರ ಅಥವಾ ಮೃದಂಗದ ಜೊತೆಗೆ ನುಡಿಸುವರು.
ಜರುಗಿಸಿ ನುಡಿಸಬಹುದಾದ ವಾದ್ಯ ಇದೊಂದೇ ಘಟ ವಿದ್ವಾಂಸರಲ್ಲಿ ಹಲವು
ಶ್ರುತಿಗಳ ಘಟಗಳಿರುತ್ತವೆ. ತಮಿಳುನಾಡಿನ ಪನುಟ ಮತ್ತು ಮಾನಾ
ಮಧುರೆಯಲ್ಲಿ ಒಳ್ಳೆಯ ಘಟವಾದ್ಯಗಳನ್ನು ತಯಾರಿಸುತ್ತಾರೆ. ಮದ್ರಾಸಿನ
ಟ ಎಸ್. ವಿಲ್ವಾದ್ರಿ ಅಯ್ಯರ್, ರಾಮಚಂದ್ರನ್ ಮುಂತಾದ ಖ್ಯಾತ ಘಟಂ
ವಿದ್ವಾಂಸರಾಗಿದ್ದರು. ಬೆಂಗಳೂರಿನ ಮಂಜುನಾಥ್, ಮೈಸೂರಿನ ಎಂ. ಎ. ಕೃಷ್ಣ
ಮೂರ್ತಿ ಮುಂತಾದವರು ಈಗಿನ ಖ್ಯಾತ ಘಟಂ ವಿದ್ವಾಂಸರು.
 
ಘನ-ಇದು ಮನೋಧರ್ಮ ಸಂಗೀತದ ಒಂದು ಭಾಗ
ಒತಗತಿಯಲ್ಲಿ
ರಾಗವನ್ನು ತಾನದ ಶೈಲಿಯಲ್ಲಿ ಹಾಡುವುದು ಘನಂಶೈಲಿ ಘನಂ ಕೃಷ್ಣಯ್ಯರ್,
ಘನಂ ಶೀನಯ್ಯ, ಘನಂ ತಿರುಮಲಯ್ಯರ್, ಪೈದಾಳ ಗುರುಮೂರ್ತಿ ಶಾಸ್ತ್ರಿ, ವಿಜಯ
ನಗರದ ಹಿರಿಯ ಗುರುರಾಯಾಚಾರ್ಯುಲು ಘನಂ ಶೈಲಿಯ ಹಾಡುಗಾರಿಕೆಯಲ್ಲಿ
ಪ್ರವೀಣರಾಗಿದ್ದರು.
 
ಘನ ಆಂದೋಳಿಕ ಇದು ೨೮ನೆ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ
 

 
449
 
-
 
ಸ ಗ ಮ ದ ನಿ ಸ
 
ಸ ನಿ ದ ಪ ಮ ಗ ರಿ ಗ ಸ
 
ಘನಕೇಶಿ. ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
 
ಸ ರಿ ಗ ಮ ಪ ನಿ ಸ
 
ಸ ನಿ ದ ಪ ಮ ರಿ ಸ
 
ಘನಂಕೃಷ್ಣಯ್ಯರ್- ಕೃಷ್ಣಯ್ಯರ್ ೧೯ನೆ ಶತಮಾನದ ಒಬ್ಬ ಪ್ರಸಿದ್ಧ
ಸಂಗೀತ ವಿದ್ವಾಂಸರು, ತಮಿಳುನಾಡಿನ ತಿರುಚಿಯ ಬಳಿಯಿರುವ ಪೆರಿಯತಿರುಕ್ಕುನ್ನ
ಎಂಬ ಊರಿನ ಅಷ್ಟ ಸಹಸ್ರಂ ಬ್ರಾಹ್ಮಣ ಪಂಗಡದ ರಾಮಸ್ವಾಮಿ ಅಯ್ಯರ್ ಎಂಬು
ವರ ಕಿರಿಯ ಮಗನಾಗಿ ಜನಿಸಿದರು. ಮೊದಲು ಪಚ್ಚಿ ಮಿರಿಯಂ ಆದಿ ಅಪ್ಪಯ್ಯ
ನವರಲ್ಲಿ ಸಂಗೀತ ಶಿಕ್ಷಣವನ್ನು ಪಡೆದು ನಂತರ ಬೊಬ್ಬಿಲಿ ಕೇಶವಯ್ಯನವರಲ್ಲಿ ಘನಂ
ಶೈಲಿಯ ಹಾಡುಗಾರಿಕೆಯನ್ನು ಕಲಿತು ಆ ಶೈಲಿಯ ಗಾಯನದಲ್ಲಿ ಪ್ರವೀಣರಾದರು.
ತಂಜಾವೂರು ಆಸ್ಥಾನ ವಿದ್ವಾಂಸರಾದರು. ಕಪಿಸ್ಥಳದ ರಾಮಭದ್ರ ಮಪ್ಪನಾರ್‌,