This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
೩೩೧
 
ಕೀಲುಮಣೆಯ ಮೇಲೆ ೧೨ ಸ್ವರಸ್ಥಾನಗಳನ್ನು ಗುರುತುಮಾಡಿರುವ ಭಿನ್ನಾಂಶ
ಮಾಪಕವಿದೆ. ಸ್ವರಗಳ ಅಕ್ಷರಗಳ ಮೇಲ್ಬಾಗದಲ್ಲಿ ಶಂಕರಾಭರಣ ಅಥವಾ ಹಿಂದೂ
ಸ್ಥಾನಿ ಬಿಲಾವಲ್
ರಾಗದ ಸ್ವರಗಳನ್ನು ಗುರುತು ಮಾಡಲಾಗಿದೆ. ಭಿನ್ನಾಂಶ
ಮಾಪಕವನ್ನು ಗೊತ್ತಾದ ನೇರದಲ್ಲಿ ಚಲಿಸಬಹುದು. ಈ ವಾದ್ಯವನ್ನು ಅವಶ್ಯವಿದ್ದರೆ
ಶ್ರುತಿಪೆಟ್ಟಿಗೆಯಾಗಿ ಬಳಸಬಹುದು.
 
ಗ್ರಹತ್ರಯ-ಇವು ಸಂಗೀತ ರಚನೆಗಳಲ್ಲಿ ಕಂಡುಬರುವ ಮೂರು ಬಗೆಯ
ಗ್ರಹ ಅಥವಾ ಎಡುಪ್ಪುಗಳು. ಇವು ಯಾವುವೆಂದರೆ
 
ಸಮಗ್ರಹ -ಸಂಗೀತ ಮತ್ತು ತಾಳಾವರ್ತವು ಒಟ್ಟಿಗೆ ಆರಂಭವಾಗು
 
ವುದು ಸಮಗ್ರಹ.
 
ಅನಾಗತಗ್ರಹ-ತಾಳಾವರ್ತವು ಆರಂಭವಾದ ನಂತರ ಸಂಗೀತವು
ಆರಂಭವಾದರೆ ಅದು ಅನಾಗತ ಗ್ರಹ ಸಂಗೀತವು ೧/೪, ೧/೨, ೩/೪, ೧ ಅಥವಾ
೧ ಅಕ್ಷರಕಾಲದ ನಂತರ ಆರಂಭವಾಗಬಹುದು.
 
೩. ಅತೀತಗ್ರಹ-ತಾಳಾವರ್ತಕ್ಕೆ ಮೊದಲೇ ಅಂದರೆ ಹಿಂದಿನ ಆವರ್ತದ
ಕೊನೆಯ ಅಕ್ಷರ ಅಥವಾ ಅದಕ್ಕೆ ಹಿಂದಿನ ಅಕ್ಷರದಿಂದ ಸಂಗೀತವು ಆರಂಭವಾಗು
ಇದೆ. ಸಾಹಿತ್ಯದ ವಿಶೇಷ ಲಕ್ಷಣಗಳಿಂದ ಈ ಬಗೆಯ ಗ್ರಹವಿರುವುದು ಸಂಗೀತ
ರಚನೆಗಳಲ್ಲಿ ಕಂಡುಬರುತ್ತದೆ.
 
ಗ್ರಹಸ್ಪರ ಪ್ರಬಂಧ-ಇದೊಂದು ಬಗೆಯ ಸಂಗೀತರಚನೆ ಇದರ
ಸಾಹಿತ್ಯದ ಕೆಲವು ಭಾಗಕ್ಕೆ ಬದಲಾಗಿ ಸ್ವರಸಂಜ್ಞಾಸೂಚಕ ಅಕ್ಷರಗಳನ್ನು ಬಳಸಿ
ಆಯಾ ಭಾಗದ ರಾಗವನ್ನು ಹಾಡಲಾಗುವುದು. ಈ ಅಕ್ಷರಗಳು ಸ್ವರಾಕ್ಷರಗಳಿಗಿಂತ
ಭಿನ್ನವಾಗಿರುತ್ತವೆ. ಗೋಪಾಲನಾಯಕನು (೧೬ನೆ ಶ) ಭೈರವಿ ರಾಗದಲ್ಲಿ ಗ್ರಹಸ್ವರ
ಪ್ರಬಂಧವನ್ನು ರಚಿಸಿದ್ದಾನೆ.
 
ಘ-ಮರೀಚ, ವರುಣ, ಮೇಘ ಇತ್ಯಾದಿ ಅರ್ಥಗಳಿವೆ.
 
ಘಟ-ಇದೊಂದು ಉಪತಾಳ ವಾದ್ಯ. ರಾಮಾಯಣದ ಕಾಲದಿಂದಲೂ
ಪ್ರಸಿದ್ಧವಾಗಿರುವ ಕಚೇರಿವಾದ ಮತ್ತು ಜಾನಪದ ವಾದ್ಯ ಈ ಮಡಕೆ ವಾದ್ಯವನ್ನು
ತಯಾರಿಸಲು ವಿಶೇಷ ಗುಣವುಳ್ಳ ಮಣ್ಣನ್ನು ಆಯ್ದು ಅದನ್ನು ಕೆಲವು ತಿಂಗಳ ಕಾಲ
ಕೊಳೆ ಹಾಕುತ್ತಾರೆ. ನಂತರ ಇದರೊಡನೆ ಕಬ್ಬಿಣದ ಪುಡಿಯನ್ನು ಕಲಸಿ ಬೇಯಿಸಿ
ವಾದ್ಯವನ್ನು ತಯಾರಿಸುತ್ತಾರೆ. ಬೆಂಗಳೂರು ಜಿಲ್ಲೆಯ ಚೆನ್ನಪಟ್ಟಣವು ಸೊಗಸಾದ
ಘಟವಾದ್ಯಗಳ ತಯಾರಿಕೆಗೆ ಪ್ರಸಿದ್ಧವಾಗಿತ್ತು. ಇಲ್ಲಿ ತಯಾರಾಗುತ್ತಿದ್ದ ವಾದ್ಯವು
ನೇರಳೆ ಹಣ್ಣಿನ ಬಣ್ಣ ಹೊಂದಿದ್ದು ಕಲ್ಲಿನಿಂದ ತಯಾರಾದ ವಾದ್ಯದಂತೆ ಗಟ್ಟಿಯಾಗಿದ್ದು
ದೀರ್ಘಕಾಲ ಬಾಳಿಕೆ ಬರುತ್ತಿತ್ತು. ಈಗ ನಾವು ಕಾಣುವ ವಾದ್ಯದ ಬಾಯಿಗಿಂತಲೂ
ಚಿಕ್ಕಬ ಬಾಯಿ ಇದ್ದು, ನುಡಿಸುವಾಗ ಹೊಟ್ಟೆಗೆ ಆತುತೆಗೆದಾಗ ಮನೋಹರವಾದ
ಘುಂಕಾರ ಕೊಡುತ್ತಿತ್ತು. ಘಟವಾದ್ಯದ ಹೊರ ಮೈ ಕತ್ತಿನ ಭಾಗದಲ್ಲಿ, ಹೊಟ್ಟೆಯ