This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕಟ್ಟಲಾಗಿದೆ. ಈ ತಂತಿಗಳಿಗೆ ಬೇರೆ ಬೇರೆ ಅಂತರದಲ್ಲಿ ವಿವಿಧ ಶ್ರುತಿಯ ಚಿಕ್ಕ
ಗಂಟೆಗಳನ್ನು ಕಟ್ಟಿದೆ. ಇವುಗಳನ್ನು ಬೆರಳುಗಳಿಂದ ತಟ್ಟಿ ಈ ವಾದ್ಯವನ್ನು
ನುಡಿಸುವರು. ಇದು ಉತ್ತರಭಾರತದ ದರ್ಭಾಂಗ ಮುಂತಾದ ಹಲವು ಕಡೆ
ಪ್ರಚಲಿತವಿದೆ. ಇದನ್ನು ನೇರವಾಗಿ ನಿಲ್ಲಿಸಿಕೊಂಡು ನುಡಿಸುತ್ತಾರೆ. ಇದೊಂದು
ಚಿಕ್ಕ ಗಂಟಾತರಂಗ್ ವಾದ್ಯ
 
೩೩೦
 
ಗುಂಡುತಾಳ-ಇದು ಸಮ ಅಳತೆಯ ಎರಡು ಕಂಚಿನ ಬಿಲ್ಲೆಗಳನ್ನೊಳಗೊಂಡ
ತಾಳವಾದ್ಯ. ಒಂದನ್ನೊಂದು ತಟ್ಟಿದಾಗ ಇಂಪಾದ ನಾದ ಕೊಡುತ್ತವೆ.
ಹೊರಮೈ ಕೇಂದ್ರವು ಉಬ್ಬಾಗಿದ್ದು ಮಧ್ಯದಲ್ಲಿ ರಂಧ್ರವಿರುತ್ತದೆ.
ದಪ್ಪವಾಗಿರುವ ಹತ್ತಿ ದಾರದ ಗಂಟು ಹಾಕಿದೆ.
 
ಇವುಗಳ
ಇದಕ್ಕೆ
 
ಈ ಗಂಟನ್ನು ಹಿಡಿದು ತಾಳವನ್ನು
ಹಾಕಬೇಕು, ಹರಿಕಥಾವಿದ್ವಾಂಸರು ಮತ್ತು ಭಜನ ಗೋಷ್ಠಿಯವರು ಈ ತಾಳವನ್ನು
ಹೆಚ್ಚಾಗಿ ಉಪಯೋಗಿಸುತ್ತಾರೆ.
 
ಗುಂಪಿತ-ಇದು
 
ಪಂಚದಶ ಗಮಕಗಳಲ್ಲಿ ಒಂದು ಬಗೆಯ ಗಮಕ,
ಇದಕ್ಕೆ ಹುಂಪಿತವೆಂದೂ ಹೆಸರು (ವಿವರಗಳಿಗೆ ನೋಡಿ-ಗಮಕ)
 
ಗ್ರಹಭೇದ-ರಾಗಗಳ ಸಂಖ್ಯೆಯನ್ನು ಅಧಿಕಗೊಳಿಸಲು ಅಳವಡಿಸುವ
ಸೂತ್ರವೇ ಗ್ರಹಭೇದ. ಇದಕ್ಕೆ ಗ್ರಹಸ್ವರ ಭೇದ ಅಥವಾ ಆಧಾರಷಡ್ಡ ವರ್ಗಾವಳಿ
ಎಂದೂ ಹೆಸರು. ಒಂದು ರಾಗದ ಪ್ರತಿಯೊಂದು ಸ್ವರವನ್ನು ಆಧಾರ ಸ್ವರವನ್ನಾಗಿ
ಇಟ್ಟುಕೊಂಡು ಆ ರಾಗದ ಆರೋಹಣಾವರೋಹಣಗಳನ್ನು ಒಂದುಗೂಡಿಸುವುದು
ಗ್ರಹಭೇದ. ಇದರಿಂದ ಅನೇಕ ಇತರ ರಾಗಗಳುಂಟಾಗುತ್ತವೆ. ಇದರಲ್ಲಿ ಮಾನಸಿಕ
ಪದ್ಧತಿ, ಅಂತರ ವಿಧಾನ, ಸ್ವರಸ್ಥಾನ ವಿಧಾನ, ಸ್ವರಭೇದ ವಿಧಾನ, ಪ್ರಯೋಗ
ವಿಧಾನ ಎಂಬ ಹಲವು ವಿಧಾನಗಳಿವೆ.
 
ಹೇಳಿರುವ
 
ಉತ್ತಮ ಸ್ವರಜ್ಞಾನ ಮತ್ತು ಅನುಭವವಿರುವ ವಿದ್ವಾಂಸರು ರಾಗಾಲಾಪನೆ
ಮಾಡುವಾಗ ವಿಚಿತ್ರ ಕಲ್ಪನೆಯನ್ನು ಮಾಡಿ ಗ್ರಹಭೇದದಿಂದ ಇನ್ನೊಂದು ರಾಗವನ್ನು
ಸ್ವಲ್ಪ ತೋರಿಸಬಹುದು.
ಪುರಾತನ ಸಂಗೀತ ಶಾಸ್ತ್ರಗ್ರಂಥಗಳಲ್ಲಿ
ಅನ್ಯರಾಗಕಾಕು ಎಂಬ ಪದವು ಸೂಕ್ತವಾದ ಜಾಗದಲ್ಲಿ ಗ್ರಹಭೇದ ಮಾಡುತ್ತಿದ್ದ
ರೆಂಬುದನ್ನು ಸೂಚಿಸುತ್ತದೆ. ರಸಿಕನಾದ ಶೋತ್ಸವಿಗೆ ಮುಖ್ಯರಾಗದ ಹಿನ್ನೆಲೆಯಲ್ಲಿ
ಗ್ರಹಭೇದವು ಒಂದು ಮಿಂಚಿನಂತೆ ಭಾಸವಾಗುತ್ತದೆ.
 
ಗ್ರಹ ಭೇದಪ್ರದರ್ಶಿನಿ- ಇದೊಂದು ಪ್ರದರ್ಶನವಾದ್ಯ. ಗ್ರಹಭೇದದಿಂದ
ಉಂಟಾಗುವ ರಾಗಗಳನ್ನು ತೋರಿಸುತ್ತದೆ. ಈ ವಾದ್ಯವು ನೋಡಲು ಒಂದು ಚಿಕ್ಕ
ಹಾರ್ಮೋನಿಯಂ ವಾದ್ಯದಂತಿದೆ. ಇದರಲ್ಲಿ ೨೫ ಕೀ ಗಳಿವೆ. ೧೨ ಕೀ ಗಳು
ಪ್ರಥಮ ಸ್ಥಾಯಿಯ ೧೨ ಸ್ವರಸ್ಥಾನಗಳನ್ನು ಸೂಚಿಸುತ್ತವೆ. ಎರಡನೆಯ ೧೨ ಕೀ
ಗಳು ಎರಡನೆ ಸ್ಥಾಯಿಯ ೧೨ ಸ್ವರಸ್ಥಾನಗಳನ್ನೂ, ೨೫ನೇ ಕೀ ಮೂರನೆ
ಸ್ಥಾಯಿಯ ಷಷ್ಟವನ್ನೂ ಸೂಚಿಸುತ್ತದೆ. ಈ ಕೀ ಗಳೆಲ್ಲವೂ ಒಂದೇ ಮಟ್ಟದಲ್ಲಿವೆ.