This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಗಂಧರ್ವಲೋಕ-
ಗಂಧರ್ವ ವಾಸಿಸುವ ಲೋಕ, ದೇವಾಲಯಗಳ ಉತ್ಸವ

ಗಳಲ್ಲಿ ಸಂಗೀತಕ್ಕಾಗಿ ಹಣ ವೆಚ್ಚ ಮಾಡುವವರು ಗಂಧರ್ವಲೋಕಕ್ಕೆ ಹೋಗುತ್ತಾರೆಂದು

ನಂಬಿಕೆಯಿದೆ
 
೩೨೯
 

 
ಗಂಧಿನಿ
ಇದು ಬೃಹದ್ಧರ್ಮ ಪುರಾಣದಲ್ಲಿ ಉಕ್ತವಾಗಿರುವ ಏಳುದಾಸೀರಾಗ

ಗಳಲ್ಲಿ ಒಂದರ ಹೆಸರು
 

 
ಗಂಡಕರ್ಮ-
ಭರತನಾಟ್ಯದ ಕೆನ್ನೆಗಳ ವಿವಿಧ ಕ್ರಿಯಾ ಭೇದಗಳಿಗೆ ಗಂಡ

ಕರ್ಮವೆಂದು ಹೆಸರು. ಇವು ಆರು ವಿಧ-ಕ್ಷಾಮ, ಫುಲ್ಲ, ಪೂರ್ಣ, ಕಂಪಿತ,

ಕುಂಚಿತ ಮತ್ತು ಸಮ
 

 
ಗುಂಡಕ್ರಿ-
ಇದು ಪಾರ್ಶ್ವದೇವನ ಸಂಗೀತ ಸಮಯಸಾರವೆಂಬ ಗ್ರಂಥದಲ್ಲಿ

ಉಕ್ತವಾಗಿರುವ ಒಂದು ಷಾಡವರಾಗ
 

 
ಗುಂಡಕ್ರಿಯ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವದ ಒಂದು
 

ಜನ್ಯರಾಗ,
 

ಸ ರಿ ಮ ಪ ನಿ ಸ
 

ಸ ನಿ ಪ ದ ಪ ಮ ಗ ರಿ ಸ
 

ಇದೊಂದು ಪುರಾತನ ರಾಗ, ಆಂಜನೇಯನು ಈ ರಾಗವನ್ನು ಹಾಡಿ ಸಮೀಪದಲ್ಲಿದ್ದ

ಬಂಡೆಯನ್ನು ಕರಗಿಸಿದನೆಂದು ಪುರಾಣಗಳಲ್ಲಿ ಹೇಳಿದೆ
 
ತ್ಯಾಗರಾಜ
 
ವಿರಚಿತ
 
>
 
*
ಇಂತನುಚು ವರ್ಣಿಂಪ ತರಮಾ ' ಎಂಬ ರಚನೆಯು ಈ ರಾಗದ ಪ್ರಸಿದ್ಧ ಕೃತಿ.
 

ರ್ಣಾಟಕದ ನೃತ್ಯ ಕಲೆಗೆ
ಇವರ ಮುತ್ತಜ್ಜಿ ರಂಗ
 

 
ಗುಂಡಪ್ಪ ನಟುವನಾರ್-
ಗುಂಡಪ್ಪನವರು

ಪ್ರಸಿದ್ಧವಾಗಿದ್ದ ಮನೆತನದಲ್ಲಿ ೧೮೯೮ರಲ್ಲಿ ಜನಿಸಿದರು.

ನಾಯಕಮ್ಮ ಮೈಸೂರು ರಾಜರ ಆಸ್ಥಾನದ ಗೌರವಕ್ಕೆ ಪಾತ್ರರಾಗಿದ್ದರು ಇವರ

ಅಜ್ಜಿ ರಂಗಮ್ಮ ಬಸವನಹಳ್ಳಿಯ ರಂಗನಾಥಸ್ವಾಮಿ ದೇವಾಲಯದಲ್ಲಿ ನಾಟ್ಯ ಸೇವೆ

ಸಲ್ಲಿಸುತ್ತಿದ್ದರು. ಗುಂಡಪ್ಪನವರು ಕೋಲಾರದ ಕಿಟ್ಟಪ್ಪನವರಲ್ಲಿ ಸುಮಾರು ಹನ್ನೆರಡು

ವರ್ಷಗಳ ಕಾಲ ನಾಟ್ಯ ಶಿಕ್ಷಣವನ್ನು ಪಡೆದರು. ತಮ್ಮ ಗುರುವಿನ ನಾಟ್ಯ ಪ್ರದರ್ಶನ

ಗಳಲ್ಲಿ ಭಾಗವಹಿಸುತ್ತಿದ್ದರು. ಅವರ ಮರಣಾನಂತರ ಆ ನಾಟ್ಯವೃಂದದ ಧುರೀಣ

ರಾದರು. ನಟುವನಾರ್ ಮನೆತನದ ಏಕೈಕ ಕಲಾವಿದರಾಗಿ ಸುಮಾರು ಮೂರು

ದಶಕಗಳ ಕಾಲದಲ್ಲಿ ಕರ್ಣಾಟಕದಲ್ಲಿ ಪ್ರಸಿದ್ಧರಾಗಿರುವ ಬಹು ಮಂದಿ ಶಿಷ್ಯರು,

ಶಿಷ್ಯ ಯರಿಗೆ ನಾಟ್ಯಕಲೆಯಲ್ಲಿ ಶಿಕ್ಷಣ ನೀಡಿದ್ದಾರೆ.
 

 
ಗುಂಡಾಚಾರರು-ರ್ಯರು
ಇವರು ಸುರಪುರದ ಆನಂದದಾಸರಲ್ಲಿ ಕೀರ್ತನಾಭ್ಯಾಸ

ಮಾಡಿ ಹೆಸರುವಾಸಿಯಾದ ಪುರಾಣಿಕರಾಗಿದ್ದರು. ಇವರ ಕಂಠಶ್ರೀ ಮತ್ತು ಗಾನ

ಮಾಧುರ್ಯಗಳು ಆನಂದದಾಸರನ್ನು ಜ್ಞಾಪಕಕ್ಕೆ ತರುತ್ತಿದ್ದು ವು.
 

 
ಗುಂಗುರು-
ಇದೊಂದು ಘನವಾದ್ಯ. ಇದಕ್ಕೆ ಮುಂಗರು ಎಂಬ ಹೆಸರೂ

ಇದೆ. ಮರದ ಒಂದು ಚೌಕಟ್ಟನಲ್ಲಿ ಸಮಾನಾಂತರವಾಗಿ ಹಲವು ತಂತಿಗಳನ್ನು