This page has not been fully proofread.

೩೨೮
 
ಜನ್ಯರಾಗ
 
ಬರುತ್ತದೆ.
 
ಗಂಧರ್ವ-(೧) ಭಾರತದ ಪುರಾತನ ಸಾಹಿತ್ಯದಲ್ಲಿ ಗಂಧರ್ವರ ವಿಚಾರವು
ಗಂಧರ್ವರು ದೇವಲೋಕದ ಗಾಯಕರು. ಮಂದರು ಮೇರು
ಮುಂತಾದ ಪರ್ವತ ಪ್ರದೇಶಗಳಲ್ಲಿರುವವರು. ಅವರ ಶಾರೀರವು ದಿವ್ಯವಾದುದು.
ಹಾಡುವುದು, ನೃತ್ಯ, ವೀಣೆ ನುಡಿಸುವುದರಲ್ಲಿ ಬಹು ಪ್ರವೀಣರು. ಅವರ
ಪತ್ನಿಯರೆಲ್ಲರೂ ದೇವಲೋಕದ ಅಪ್ಸರೆಯರು.
 
(೨) ಈ ರಾಗವು ೪೨ನೆ ಮೇಳಕರ್ತ ರಘುಪ್ರಿಯದ ಒಂದು ಜನ್ಯರಾಗ,
ಮ ಪ ದ ನಿ ಸ ರಿ ಗ
 
ಆ :
 
ಗ ರಿ ಸ ನಿ ಪ ಮ
 
ಗಂಧರ್ವಕನ್ನಡ-ಈ ರಾಗವು ೩೧ನೆ ಮೇಳಕರ್ತ ಯಾಗಪ್ರಿಯದ ಒಂದು
 
ಆ :
 
ಸ ರಿ ಗ ಮ ಪ ದ ನಿ ದ ಸ
ಸ ನಿ ದ ಪ ಮ ಗ ರಿ ಸ
 
es:
 
ಅ :
 
ಸ ರಿ ಗ ಪ ದ ಸ
 
ಸ ನಿ ದ ಪ ಮ ಗ ಮ ರಿ ಸ
 
ಗಂಧರ್ವಗಾನ-ಅತ್ಯುತ್ತಮವಾದ ಗಾನವನ್ನು ಗಂಧರ್ವಗಾನವೆನ್ನುವುದು
ವಾಡಿಕೆ, ಮಹಾವೈದ್ಯನಾಧ ಅಯ್ಯರ್‌ರ ಗಾಯನವನ್ನು ಗಂಧರ್ವಗಾನವೆನ್ನುತ್ತಿದ್ದರು.
ಗಂಧರ್ವಗೀತ-ಅನಾದಿ ಸಂಪ್ರದಾಯದಿಂದ ಬೆಳೆದುಬಂದ ಸಂಗೀತ. ಇದು
ಗಾನಗೀತಕ್ಕಿಂತ ಪುರಾತನ,
 
ಗಂಧರ್ವನಾರಾಯಣಿ-ಈ ರಾಗವು ೨೪ನೆ ಮೇಳಕರ್ತ ವರುಣಪ್ರಿಯದ
ಒಂದು ಜನ್ಯರಾಗ.
 
ಸ ಮ ಪ ದ ನಿ ಸ
 
ಸ ನಿ ದ ನಿ ಪ ಮ ಗ ಸ
 
ಸಂಗೀತ ಪಾರಿಭಾಷಿಕ ಕೋಶ
 
ಗಂಧರ್ವಪ್ರೀತಿ-ಗಂಧರ್ವರನ್ನು ಸ್ತುತಿಸಿ ಅವರ ಅನುಗ್ರಹವನ್ನು ಪಡೆಯಲು
ವಿವಾಹದ ಸಂದರ್ಭಗಳಲ್ಲಿ ಕಚೇರಿಗಳನ್ನು ನಡೆಸುತ್ತಾರೆ.
 
ಗಂಧರ್ವಮನೋಹರಿ-ಈ ರಾಗವು ೨೬ನೆ ಮೇಳಕರ್ತ ಚಾರುಕೇಶಿಯ
 
ಒಂದು ಜನ್ಯರಾಗ,
 
ಸ ರಿ ಮ ಪ ಸ
 
ಸ ನಿ ದ ಮ ಗ ರಿ ಸ
 
ಗಂಧರ್ವಮೇಳ-ಕಾಶೀನಾಥ ವಿರಚಿತ ರಾಮಾಯಣ ಪಟ್ಟಾಭಿಷೇಕ ಶಬ್ದ
ದಲ್ಲಿ ಉಕ್ತವಾಗಿರುವ ಒಂದು ವಾದ್ಯವೃಂದದ ಹೆಸರು.
 
ಗಂಧರ್ವರಾಜ -ತಂಜಾವೂರು ಸರಸ್ವತೀ ಮಹಲ್ ಪುಸ್ತಕ ಭಂಡಾರದಲ್ಲಿರುವ
ರಾಗರತ್ನಾಕರವೆಂಬ ಸಂಸ್ಕೃತ ಗ್ರಂಥ ಕರ್ತೃವಿನ ಹೆಸರು.