2023-07-04 06:23:34 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ಈ ರಾಗವು ೬ನೆ ಮೇಳಕರ್ತ ತಾನರೂಪಿಯ ಒಂದು
ಜನ್ಯರಾಗ,
ಸ ರಿ ಗ ಮ ಪ ದ ನಿ ಸ ನಿ ಸ
ಅ : ಸ ಪ ದ ನಿ ಪ ಮ ಗ ರಿ ಸ
ಗೌಳಋಷಭ
ಗೌಳರಾಗದ
ಮೌಲ್ಯವನ್ನು ಹೊಂದಿ ಏಕಶ್ರುತಿಋಷಭವೆನಿಸಿದೆ. ಇದಕ್ಕೆ ಗೌಳಋಷಭವೆಂದು
ಗೌಳಶಾರೀರ
ತುಂಬಿದ, ಗಂಭೀರವಾದ ಘನಶಾರೀರಕ್ಕೆ ಗೌಳಶಾರೀರ
ವೆಂದೂ, ಇಂತಹ ಶಾರೀರವುಳ್ಳ ವಿದ್ವಾಂಸನ ಗಾಯನಕ್ಕೆ ಗೌಳಗಾತ್ರವನ್ನು ವುದುಂಟು,
ಇಂತಹವರು ಹಾಡುವ ನಾಭಿತಾನವು ಕೇಳಲು ಬಲುಸೊಗಸು. ಚೆಂಬೈ ವೈದ್ಯನಾಥ
ಭಾಗವತರು ಮತ್ತು ಎಂ. ಡಿ. ರಾಮನಾಥನ್ ಇವರನ್ನು ಗೌಳಶಾರೀರವುಳ್ಳ
ಗಾಯಕರೆನ್ನ ಬಹುದು.
ಗಂಗಾತರಂಗಿಣಿ
(೧) ಈ ರಾಗವು ೩೩ನೆ ಮೇಳಕರ್ತ ಗಾಂಗೇಯ
ಭೂಷಣಿಯ ಒಂದು ಜನ್ಯರಾಗ
ಸ ರಿ ಗ ಮ ಪ ಸ
ಸ ನಿ ದ ಪ ಮ ಗ ಮ ರಿ ಸ
(೨) ಅಸಂಪೂರ್ಣ ಮೇಳ ಪದ್ಧತಿಯಲ್ಲಿ ೩೩ನೆ ಮೇಳರಾಗ, ಸುಬ್ಬರಾಯದೀಕ್ಷಿತರು
ಈ ರಾಗಾಂಗರಾಗದ ಆರೋಹಣಾವರೋಹಣವನ್ನು ಈ ರೀತಿ ಕೊಟ್ಟಿದ್ದಾರೆ.
ಸ ರಿ ಗ ಮ ಪ ದ ನಿ ಸ
ಸ ನಿ ಪ ದ ಮ ಗ ಮ ರಿ ಸ
ಮುತ್ತು ಸ್ವಾಮಿದೀಕ್ಷಿತರು ಈ ರಾಗದಲ್ಲಿ ವರದರಾಜ ಎಂಬ ಕೃತಿಯನ್ನು ರಚಿಸಿದ್ದಾರೆ.
ಗಂಗೂಬಾಯಿಹಾನಗಲ್
ಗಂಗೂಬಾಯಿಯವರು
ಕಲಾವಿದೆ. ಇವರು ೧೯೧೩ರಲ್ಲಿ
ಧಾರವಾಡದಲ್ಲಿ ಜನಿಸಿದರು. ಇವರ ತಾಯಿ ಅಂಬಾಬಾಯಿ ಕರ್ಣಾಟಕ
ಸಂಗೀತದಲ್ಲಿ ಪರಿಣತರಾಗಿದ್ದರು. ಗಂಗೂಬಾಯಿಯವರು ಮೊದಲು ಪ್ರಸಿದ್ಧ ಕಿನ್ನರಿ
ವಿದ್ವಾನ್ ಹುಲಗೂರು ಕೃಷ್ಣಾಚಾರರಲ್ಲಿ ಒಂದು ವರ್ಷ ಶಿಕ್ಷಣ ಪಡೆದು ನಂತರ
ಪ್ರತಾಪಲಾಲ್ ಮತ್ತು ದತ್ತೋಪಂತ್ ದೇಶಾಯಿಯವರಲ್ಲಿ ತುಮಿಯನ್ನು ಕಲಿತು
ತರುವಾಯ ಸವಾಯಿ ಗಂಧರ್ವರೆಂದು ಪ್ರಸಿದ್ಧರಾದ ಕುಂದಗೋಳ ರಾಮರಾಯರಲ್ಲಿ
ಹಲವು ವರ್ಷಗಳ ಕಾಲ ಶಿಕ್ಷಣ ಪಡೆದರು. ೧೯೩೩ರಲ್ಲಿ ಗ್ರಾಮಾಫೋನ್ ರೆಕಾರ್ಡ್
ಗಳಿಗಾಗಿ ಹಾಡಿದರು. ೧೯೩೮ರಲ್ಲಿ ಕಲ್ಕತ್ತದಲ್ಲಿ ಹಾಡಿ ಪ್ರಸಿದ್ಧರಾದರು. ನೇಪಾಳ,
ಪಾಕಿಸ್ಥಾನಗಳಿಗೆ ಸಾಂಸ್ಕೃತಿಕ ನಿಯೋಗದ ಸದಸ್ಯರಾಗಿ ಹೋಗಿ ಖ್ಯಾತಿ ಪಡೆದರು.
೧೯೬೩ರಲ್ಲಿ ಕರ್ಣಾಟಕ ರಾಜ್ಯ ಸಂಗೀತನಾಟಕ ಅಕಾಡೆಮಿಯು ಇವರಿಗೆ ಪ್ರಶಸ್ತಿ