This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ವೈಶಿಷ್ಟ್ಯಗಳನ್ನು ಕಳೆದುಕೊಂಡು ಅಭಾವ ಉಂಟಾಗುತ್ತದೆ. ಶ್ರೀರಾಗದಲ್ಲಿ
ಪ ದ ನಿ ವ ಮ-ಎಂಬ ಸ್ವರಗುಚ್ಛವನ್ನು ಹೆಚ್ಚಾಗಿ ಬಳಸಿದರೆ ಅಭಾವ
 
ಉಂಟಾಗುವುದು.
 
೨೭
 
ಅಭ್ಯಾಸಗಾನ -ಸಂಗೀತವನ್ನು ಕಲಿಯುವಾಗ
ಅಭ್ಯಸಿಸುವ ಸಂಗೀತ
ಭಾಗ. ಶಾರೀರವನ್ನು ಪಳಗಿಸಲು ಅಥವಾ ವಾದ್ಯವನ್ನು ನುಡಿಸಲು ಕಲಿಯುವ
ಗೀತಗಳು, ವರ್ಣಗಳು, ಅಭ್ಯಾಸದಿಂದ ಸ್ವರಜ್ಞಾನ ಮತ್ತು ತಾಳಜ್ಞಾನ
ಉಂಟಾಗುತ್ತದೆ. ಸಭಾ ಸಂಗೀತವನ್ನು ಕಲಿಯುವ ಮೊದಲು ಪ್ರತಿಯೊಬ್ಬ
ಸಂಗೀತಾಭ್ಯಾಸಿಯು ಅಭ್ಯಾಸ ಗಾನ ಭಾಗವನ್ನು ಕಲಿಯಲೇ ಬೇಕು. ಇದರಿಂದ ಮುಂದೆ
ಸಂಗೀತ ಕಛೇರಿಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ.
ಅಭಿನಯಸಾರ ಸಂಪುಟಂ-೧೯ನೇ ಶತಮಾನದಲ್ಲಿದ್ದ ನಾರಾಯಣ
ಅಯ್ಯಂಗಾರ್ ಎಂಬುವರು ರಚಿಸಿದ ತಮಿಳು ಭಾಷೆಯಲ್ಲಿರುವ ನಾಟ್ಯಶಾಸ್ತ್ರ ಗ್ರಂಥ.
ಇದನ್ನು ಮದ್ರಾಸಿನ ಮ್ಯೂಸಿಕ್ ಅಕಾಡೆಮಿಯು ಪ್ರಕಟಿಸಿದೆ. ಈ ಗ್ರಂಥದಲ್ಲಿ
ಆರು ವಿಭಾಗಗಳಿವೆ.
 
ವಿವೇಕ ಪ್ರಕಾಶ ಬೋಧಂ-ಈ ಪ್ರಕರಣದಲ್ಲಿ ಗುರುಶಿಷ್ಯರಲ್ಲಿರ
ಬೇಕಾದ ಗುಣಗಳು, ಅರ್ಹತೆ ಮತ್ತು ಬೋಧನಾಕ್ರಮ ಮುಂತಾದ ವಿಷಯಗಳ
ವಿವೇಚನೆ ಇದೆ.
 
ನಾಯಿಕಾ ನಾಯಕ ಭಾವ ಲಕ್ಷಣಂ ವಿವಿಧ ರಸಗಳನ್ನು
ಕುರಿತು ವಿವೇಚಿಸಲಾಗಿದೆ.
 
೩. ರಸ ಪರಿಮಳಂ-ವಿವಿಧ ರಸಗಳನ್ನು ಕುರಿತು ವಿವೇಚಿಸಲಾಗಿದೆ.
ಉಪಮಾನ ಚಿಂತಾಮಣಿ
 
೫. ಅಭಿನಯಾಮೃತಂ-ಶಿರಸ್ಸು, ಹಸ್ತಗಳು ಮುಂತಾದ ಅಂಗಗಳ
ಚಲನೆಗಳನ್ನು ಕುರಿತು ಹೇಳಿದೆ.
 
ಭಾವ ಪ್ರಕಾಶಂ - ಭಾವಗಳನ್ನು ಪ್ರಕಟನ ಮಾಡುವ ವಿಚಾರವಿದೆ.
ಅಭಿನಯ-ಅಭಿನಯವು ನಾಟಕದಲ್ಲಿ ಮತ್ತು ನಾಟ್ಯದಲ್ಲಿ ಮುಖ್ಯ
 
ವಾದುದು ರಸಭಾವಗಳು ಜೀವವಾದರೆ ಅಭಿನಯವು ದೇಹ,
 
ಅಭಿನಯವೆಂದರೆ
 
'ನೀ'ಧಾತುವಿಗೆ
 
ಪ್ರೇಕ್ಷಕರ ಕಡೆಗೆ
 
ಏನೆಂಬುದನ್ನು ಭರತನು ವಿಸ್ತಾರವಾಗಿ ವ್ಯಾಖ್ಯಾನ ಮಾಡಿದ್ದಾನೆ.
ಮುಂದೆ ತೆಗೆದುಕೊಂಡು ಹೋಗುವುದು ಎಂಬ ಅರ್ಧ ಬರುತ್ತದೆ. ಅಭಿ' ಎಂದರೆ
ಕಡೆಗೆ ಅಧವಾ ದಿಕ್ಕಿನಲ್ಲಿ ಎಂದರ್ಥ. ರಂಗಭೂಮಿಯಿಂದ
ಎಂದರೆ ರಸಾನುಭವವನ್ನು ತೆಗೆದುಕೊಂಡು ಹೋಗುವ ಸಾಧನವೇ ಅಭಿನಯ.
ನಾಟ್ಯ ಶಾಸ್ತ್ರದಂತೆ ಅಭಿನಯವು ಆಂಗಿಕ, ವಾಚಿಕ, ಆಹಾರ್ಯ ಮತ್ತು ಸಾತ್ವಿಕ
ఎంబ ನಾಲ್ಕು ವಿಧವಾಗಿರುತ್ತದೆ. ಇದಲ್ಲದೆ ಸಾಮಾನ್ಯಾಭಿನಯ ಮತ್ತು
ಚಿತ್ರಾಭಿನಯ ಎಂಬ ಎರಡು ವಿಧಗಳನ್ನು ಹೇಳಿದ್ದಾನೆ. ಅಭಿನಯವು ಯಾಂತ್ರಿಕ