This page has been fully proofread once and needs a second look.

ಸಂಗೀತಪ್ರಿಯರನ್ನೂ ಆನಂದದಲ್ಲಿ ತಣಿಸಿದರು. ತಿರುಕ್ಕೋಡಿ ಕಾವಲ್
ಕೃಷ್ಣಯ್ಯರ್‌ ಜೀಮಂತರಾಗಿದ್ದಾಗಲೇ ಇವರು ಕೀರ್ತಿಶಾಲಿಗಳಾದರು ಮತ್ತು ಅವರ
ಪ್ರಶಂಸೆಯನ್ನು ಪಡೆದಿದ್ದರು. ಪಿಟೀಲು ವಾದ್ಯದಲ್ಲಿ ಕರ್ಣಾಟಕ ಸಂಗೀತವನ್ನು
ಎಷ್ಟು ಚೆನ್ನಾಗಿ ನುಡಿಸಬಹುದು ಎಂದು ತೋರಿಸಿಕೊಟ್ಟ ಆದ್ಯರಲ್ಲಿ ಒಳ್ಳೆಯವರು
ಒಬ್ಬ ಪ್ರಮುಖ ವಿದ್ವಾಂಸರು.
ತಮಿಳುನಾಡಿನ ನನ್ನಿಲಂ ತಾಲ್ಲೂಕಿನ ಅಚ್ಯುತ ಮಂಗಲವೆಂಬ ಗ್ರಾಮವು
ಇವರ ಜನ್ಮಸ್ಥಳ, ಒಳ್ಳೆಯವರು ತಮ್ಮ ಹನ್ನೆರಡನೆ ವಯಸ್ಸಿನಲ್ಲಿ ಸಂಗೀತಾಭ್ಯಾಸವನ್ನು
ಶಿಕ್ಷಣವನ್ನು ಉಮಯಾಸ್ಪುರಂ ವಂಚಾಪಕೇಶ
ತರುವಾಯ ಹಲವಾರು ಕೃತಿಗಳನ್ನು ಎಟ್ಟಿಯಾಪುರಂಆರಂಭಿಸಿದರು
ಪ್ರಾರಂಭದ
ಅಯ್ಯರ್‌ರವರಲ್ಲಿ ಪಡೆದರು.
ಆಗಿನ ಹಿರಿಯ ಗಾಯಕರಇವರರಾಮಚಂದ್ರಭಾಗವತರಿಂದ ಕಲಿತರು.
ಪಕ್ಕವಾದ್ಯವನ್ನು ಬಹುವಾಗಿ
ಚೆನ್ನಾಗಿ ಅನುಸರಿಸಿ ಅದಕ್ಕೆ ಮೆರುಗು
ಬಯಸುತ್ತಿದ್ದರು.
ಗಾಯಕನ ಸಂಗೀತವನ್ನು
ಕೊಡುವ ಕಲೆಯಲ್ಲಿ ನಿಸ್ಸಿಮರಾಗಿದ್ದರು.
ಶರಭ ಶಾಸ್ತ್ರಿಗಳಾದಿಯಾಗಿ ಆಗಿನ ಎಲ್ಲ ಪ್ರಸಿದ್ಧ ವಿದ್ವಾಂಸರ ಗಾಯನಕ್ಕೆ ಪಕ್ಕವಾದ್ಯ
ನುಡಿಸಿದರು. ಇವರ ನುಡಿಕಾರದಲ್ಲಿ ಆಲಾಪನೆಗಳು, ನೆರವಲ್‌ಗಳು ಮತ್ತು
ಕಲ್ಪನೆಶ್ವರಗಳು ಇವರ ಪ್ರತಿಭೆಯ ಪ್ರತೀಕಗಳಾಗಿದ್ದು ವು. ತಾನ ನುಡಿಸುವಾಗ
ಕಮಾನನ್ನು ಡೋಲಾಯಮಾನವಾಗಿ ಎಳೆಯುವ ವಿಧಾನವನ್ನು ರೂಢಿಗೆ ತಂದರು,
ಈ ವಿಧಾನವನ್ನು ಈಗ ಎಲ್ಲರೂ ಅನುಸರಿಸುತ್ತಾರೆ. ತನಿ ಕಚೇರಿಗಳಲ್ಲಿ ಒಳ್ಳೆಯವರ
ಪ್ರೌಢಿಮೆ, ಪ್ರತಿಭೆಗಳು ಸಂಪೂರ್ಣವಾಗಿ ಪ್ರಕಾಶಿಸುತ್ತಿದ್ದು ವು. ಕೃತಿಗಳನ್ನು
ನುಡಿಸುವುದರಲ್ಲಿ ಅಚ್ಚುಕಟ್ಟು, ಭಾವ ಸಂಪೂರ್ಣತೆ ಎದ್ದು ಕಾಣುತ್ತಿದ್ದು ವುತ್ಯಾಗರಾಜರ ಒಂದು ಶ್ರೇಷ್ಠ ಕೃತಿಯಾದ ದೇವಗಾಂಧಾರಿ ರಾಗದ ಕ್ಷೀರಸಾಗರ
ಶಯನ 'ವನ್ನು ನುಡಿಸುವಾಗ, ಅದರ ಚರಣದ ' ತಾರಕನಾಮ ' ಎಂಬ ಭಾಗವನ್ನು
ನುಡಿಸುವಾಗ ಒಂದು ವಿಶೇಷ ಸಂಗತಿಯನ್ನು ನುಡಿಸಿ ಅತಿತಾರಸ್ಥಾಯಿ ಷಡ್ಡವನ್ನು
ಮುಟ್ಟುತ್ತಿದ್ದರು. ಇದು ಆ ಉತ್ತಮ ಕೃತಿಗೆ ವಿಶೇಷ ಸೊಬಗನ್ನು ನೀಡುತ್ತಿತ್ತು.
ನಯವಾದ ಏರು ಜಾರುಗಳು, ಸಂಸ್ಕರಿಸಿದ ವಾದನ ವಿಧಾನ, ಇಂಪು ಮತ್ತು ಶುದ್ಧತೆ
ಯಿಂದ ಕೂಡಿದ ಸ್ವರಗಳು, ಕೃತಿಗಳ ಸೊಗಸಾದ ನಿರೂಪಣೆ, ಕಮಾನನ್ನು
ಎಳೆಯುವ ಕುಶಲತೆ, ಮೇಲಿನ ಸ್ಥಾಯಿಗಳಲ್ಲಿ ಅತಿ ಸುಲಭವಾಗಿ ನುಡಿಸುವುದು,
ಮೂರು ಕಾಲಗಳಲ್ಲಿ ಕಲಾತ್ಮಕವಾಗಿ ಲಯಸಂಪತ್ತಿನಿಂದ ನುಡಿಸಿ ಮನಮೋಹಕವಾದ
ಮುಕ್ತಾಯಗಳನ್ನು ಕೊಡುವುದು, ಶ್ರೇಷ್ಠ ಕಲಾಭಿಜ್ಞತೆ ಮುಂತಾದ ಅಂಶಗಳೆಲ್ಲವೂ
ಇವರ ವಾದನದಲ್ಲಿ ಎದ್ದು ಕಾಣುತ್ತಿದ್ದುದರಿಂದ ಇವರ ಸಮಕಾಲೀನರ ಗೌರವಕ್ಕೆ
ಪಾತ್ರರಾದರು.ಇವರು ಸರಳ ಜೀವಿಗಳೂ, ಹಸನ್ಮುಖಿಗಳೂ, ಸಹೃದಯರೂ ಆಗಿದ್ದರು.
ತಮ್ಮ ಸಂಗೀತದಿಂದ ಆನಂದ ಪಡೆದು ಇತರರಿಗೆ ಆನಂದ ನೀಡುತ್ತಿದ್ದ