2023-07-04 06:09:42 by jayusudindra
This page has been fully proofread once and needs a second look.
ರಾಗಿದ್ದರು.
ಗೋವಿಂದಸಾಮಯ್ಯನವರು
೩೧೮
ಸಂದರ್ಭಗಳಲ್ಲಿ ಸ್ತ್ರೀವೇಷಧರಿಸಿ ನೃತ್ಯ ಮಾಡುತ್ತಿದ್ದರು
ಯಾರಿಗೂ ತಿಳಿಯುತ್ತಿರಲಿಲ್ಲ. ಇವರ ಸಹೋದರ ಕೂವನಸಾಮಯ್ಯ ವಾಗ್ಗೇಯ
ಕಾರರಾಗಿದ್ದರು. ಪ್ರಸಿದ್ಧವಾದ ಪಂಚರತ್ನ ವರ್ಣಗಳನ್ನು ಗೋವಿಂದಸಾಮಯ್ಯ
ರಚಿಸಿದ್ದಾರೆ. ಇವು ಮೋಹನ, ಕೇದಾರಗೌಳ, ನಾಟಕುರಂಜಿ, ನವರೋಜ್ ಮತ್ತು
ಸಾರಂಗ ರಾಗಗಳಲ್ಲಿವೆ. ನಾಟ್ಯಕ್ಕೆ ಬಹಳ ಚೆನ್ನಾಗಿವೆ ಮತ್ತು ಸಂಗೀತ ರಚನೆಯಲ್ಲಿ
ಉತ್ತಮವಾದುವು. ಸಾಹಿತ್ಯವೂ ಬಹಳ ಉತ್ತಮವಾಗಿದೆ. ಇವುಗಳನ್ನು ಹಿರಿಯ
ವಿದ್ವಾಂಸರು ಮಾತ್ರ ಹಾಡುತ್ತಾರೆ. ಇವಲ್ಲದೆ ಹಲವು ಪದಗಳನ್ನೂ, ಜಾವಳಿಗಳನ್ನೂ
ರಚಿಸಿದ್ದಾರೆ. ಇವೆಲ್ಲವೂ ಈಗ ಪ್ರಚಾರದಲ್ಲಿವೆ
ಈ ಸಭೆಯ
ಗೋವಿಂದಸ್ವಾಮಿ,
ಇವರು ಮೈಸೂರಿನ ವ್ಯಾಪಾರಿ ಮತ್ತು
ಭಾರತಜನಮನೋಲ್ಲಾಸಿನಿ ಎಂಬ ಸಂಗೀತ ನಾಟಕ ಸಭೆಯ
ಸಂಜೀವಯ್ಯನವರ ದ್ವಿತೀಯ ಪುತ್ರನಾಗಿ ೧೯೧೩ರಲ್ಲಿ ಜನಿಸಿದರು.
ನಾಟಕಗಳಲ್ಲಿ ಶ್ರೀಕೃಷ್ಣ, ಮನ್ಮಥ ಮುಂತಾದ ಪಾತ್ರಗಳನ್ನು ಧರಿಸಿ ತಮ್ಮ
ಅಭಿನಯ ಮತ್ತು ಮಧುರ ಸಂಗೀತದಿಂದ ಕೀರ್ತಿಶಾಲಿಗಳಾದರು. ನಾಲ್ವಡಿ
ಕೃಷ್ಣರಾಜ ಒಡೆಯರು ಇವರ ಪಾತ್ರಗಳನ್ನು ಮೆಚ್ಚಿ ಕೆಲವು ಕಾಲ ಅರಮನೆಯಲ್ಲಿರಿಸಿ
ಕೊಂಡು ಸನ್ಮಾನಿಸಿದರು. ರಂಗಭೂಮಿಯಲ್ಲಿ ಪ್ರಸಿದ್ಧರಾಗಿದ್ದ ಎ. ವಿ. ವರದಾ
ಚಾರರು, ಬಳ್ಳಾರಿ ರಾಘವಾಚಾರ್ಯರು, ಮತ್ತು ಜಿ. ಎಚ್. ವೀರಣ್ಣನವರು
ಇವರಿಗೆ ಸುವರ್ಣ ಪದಕಗಳನ್ನಿತ್ತು ಪ್ರೋತ್ಸಾಹಿಸಿದರು. ಅಭಿನಯ ಕಂಠೀರವ
ಎಂ. ರ್ಎ. ಗಂಗಾಧರರಾಯರ ನಾಟಕದ ಕಂಪೆನಿಯಲ್ಲಿ ಏಳು ವರ್ಷಗಳ ಕಾಲ
ಮತ್ತು ಸಿ. ಬಿ. ಮಲ್ಲಪ್ಪನವರ ಕಂಪೆನಿಯಲ್ಲಿ ೬೭ ವರ್ಷಗಳ ಕಾಲವಿದ್ದು
ನಟಶ್ರೇಷ್ಠರೆನಿಸಿಕೊಂಡಿದ್ದ ಕಾಲಪಿಲ್ಲಯ್ಯ, ಮಹಮದ್‌ರ್, ಗುರುಮೂರ್ತಪ್ಪ,
ಸುಬ್ಬರಾಯರು, ಸುಬ್ಬಯ್ಯನಾಯ್ಡು ಇವರೆಲ್ಲರ ಜೊತೆಯಲ್ಲಿ ನಟಿಸಿ ಅನೇಕ
ಪಾರಿತೋಷಕಗಳನ್ನು ಪಡೆದಿದ್ದಾರೆ. ನಂತರ ದೇವೇಂದ್ರಪ್ಪನವರಲ್ಲಿ ಪ್ರೌಢ ಶಿಕ್ಷಣ
ಪಡೆದು ನುರಿತ ವಿದ್ವಾಂಸರಾಗಿ ಮೈಸೂರು ರಾಜ್ಯ, ಆಂಧ್ರ, ಮದರಾಸು, ಬೊಂಬಾಯಿ
ರಾಜ್ಯಗಳಲ್ಲಿ ಅನೇಕ ಕಚೇರಿಗಳನ್ನು ಮಾಡಿ ಸನ್ಮಾನಿತರಾದರು. ಗದ್ವಾಲ್
ಸಂಸ್ಥಾನದಲ್ಲಿ ಕೆಲವು ಕಾಲ ಆಸ್ಥಾನ
ಪ್ರಣವ ಮ್ಯೂಸಿಕ್
ಕಲಾಸೇವೆ ಮಾಡುತ್ತಿದ್ದಾರೆ.
ಕಾಲೇಜ್ ಎಂಬ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿ
ಇವರು ಗಂಡಸೆಂಬುದು
-
ಗೋವಿಂದಸ್ವಾಮಿ
ಯವರು ಅತ್ಯಂತ ಪ್ರತಿಭಾವಂತರಾದ ಪಿಟೀಲು ವಿದ್ವಾಂಸರಾಗಿದ್ದು ವಿದ್ವತ್ತೂರ್ಣ
ಹಾಗೂ ಆಹ್ವಾ
ದಕರವಾದ ಕಚೇರಿಗಳಿಂದ ತಮ್ಮ ಕಾಲದ ಸಂಗೀತಗಾರರನ್ನೂ,