This page has been fully proofread once and needs a second look.

೩೧೬
 
ಸ ರಿ ಗ ಮ ಪ ದ ಸ

ಸ ದ ಪ ಮ ಗ ರಿ ಸ
 

 
ಗೋವಿಂದದೀಕ್ಷಿತರು (೧೫೫೪-೧೬೨೪)-
ಇವರು ಅಪ್ಪಯ್ಯ ದೀಕ್ಷಿತರ

ಸಮಕಾಲೀನರಾಗಿದ್ದರು. ಇವರು ಹೊಯ್ಸಳ ಕರ್ಣಾಟಕ ಬ್ರಾಹ್ಮಣರೂ ಮತ್ತು

ಕರ್ಣಾಟಕದ ಶಿವಮೊಗ್ಗ ಜಿಲ್ಲೆಯವರೆಂದು ತಿಳಿದುಬರುತ್ತದೆ ತಂಜಾವೂರನ್ನು

ಆಳಿದ ಚೆನ್ನಪ್ಪನಾಯಕ, ಅಚ್ಯುತನಾಯಕ, ಮತ್ತು ರಘುನಾಥನಾಯಕರ

ಪ್ರಧಾನಿಯಾಗಿದ್ದು ತನ್ನ ಅಧಿಕಾರಾವಧಿಯಲ್ಲಿ ತಂಜಾವೂರಿನ ಏಳಿಗೆಗೆ ಕಾರಣ

ರಾದರು ರಘುನಾಧನಾಯಕನ ಹೆಸರಿನಲ್ಲಿ ಸಂಗೀತಸುಧಾ ಎಂಬ ಶಾಸ್ತ್ರ

ಗ್ರಂಥವನ್ನೂ, ಒಂದು ನೂತನ ವೀಣಾ ಪ್ರಕಾರವನ್ನೂ ರಚಿಸಿದರು. ಇವರ ಹಿರಿಯ

ಮಗ ಯಜ್ಞನಾರಾಯಣದೀಕ್ಷಿತನು ೧೭ನೆ ಶತಮಾನದ ಒಬ್ಬ ಶ್ರೇಷ್ಠ ಸಾಹಿತಿ ಮತ್ತು

ಅತಾಚಾರ, ಎರಡನೆಯ ಮಗನಾದ ವೆಂಕಟೇಶ್ವರದೀಕ್ಷಿತನು ವೆಂಕಟಾದ್ದರಿ

ಮತ್ತು ವೆಂಕಟಮಖಿಯೆಂದು ಪ್ರಸಿದ್ಧನಾಗಿದ್ದಾನೆ.
 

 
ಗೋವಿಂದನಾರಾಯಣಿ-
ಈ ರಾಗವು ೫೨ನೆ ಮೇಳಕರ್ತ ರಾಮಪ್ರಿಯದ
 

ಒಂದು ಜನ್ಯರಾಗ.
 
ಸಂಗೀತ ಪಾರಿಭಾಷಿಕ ಕೋಶ
 

ಸ ಗ ಮ ಪ ದ ನಿ ಸ

ಸ ನಿ ದ ಸ ಗ ರಿ ಸ
 

 
ಗೋವಿಂದಪುರ-
ಈ ಗ್ರಾಮವು ತಮಿಳುನಾಡಿನ ತಂಜಾವೂರು ಜಿಲ್ಲೆಯ

ತಿರುವಡ ಮರುದೂರಿನ ಸಮೀಪದಲ್ಲಿ ಕಾವೇರಿ ನದಿಯ ತೀರದಲ್ಲಿದೆ. ಇಲ್ಲಿ

ಬೊಧೇಂದ್ರ ಸದ್ಗುರು ಸ್ವಾಮಿಯ ಸಮಾಧಿಯಿದೆ.
 

 
ಗೋವಿಂದವಾಮಾರಾರ್ (೧೭೯೮-೧೮೪೩)-
ಇವರು ೧೯ನೆ ಶತಮಾನದ

ಪೂರ್ವಾರ್ಧದಲ್ಲಿದ್ದ, ಅದ್ಭುತ ಲಯಜ್ಞಾನ ಮತ್ತು ರವೆಜಾತಿ ಶಾರೀರವಿದ್ದ ಪ್ರಖ್ಯಾತ

ಸಂಗೀತ ವಿದ್ವಾಂಸರೂ ಗಾಯಕರೂ ಆಗಿದ್ದರು. ಕೇರಳದ ತಿರುವಾಂಕೂರಿನ

ಮೂವತ್ತು ಪುಳತಾಲ್ಲೂಕಿನ ರಾಮಮಂಗಲವೆಂಬ ಗ್ರಾಮವು ಇವರ ಜನ್ಮಸ್ಥಳ.

ಇವರಿಗೆ ಯಾವ ರಚನೆಯನ್ನಾದರೂ ಆರು ಕಾಲದಲ್ಲಿ ಹಾಡಿ ಎಲ್ಲರನ್ನೂ ಬೆರಗು

ಗೋಳಿಸಿ ಶರಣು ಹೋಗುವಂತೆ ಮಾಡುವ ಶಾರೀರವಿತ್ತು.

ಆದ್ದರಿಂದ ಇವರು

ಷಟ್ಕಾಲಗೋವಿಂದಮಾರಾರ್ ಎಂದು ಪ್ರಸಿದ್ಧರಾಗಿದ್ದರು. ಪರಮ ದೈವಭಕ್ತರೂ,

ನಿಷ್ಠಾವಂತರೂ, ಭಾಗವತ ಸಂಪ್ರದಾಯದ ಸಾಧುಶಿರೋಮಣಿಯೂ ಆಗಿದ್ದರು.

ಷಟ್ಯಾಲ ಎಂಬ ಬಿರುದನ್ನು ಸೇಲಂ ನರಸಯ್ಯ ಮತ್ತು ವಿಜಯನಗರದ ವೀಣಾವೆಂಕಟ

ರಮಣದಾಸರು ಪಡೆದಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.

ದಾಸರಿಗೆ ಷಟ್ಕಾಲ

ಚಕ್ರವರ್ತಿ ಎಂಬ ಬಿರುದು ಇದ್ದಿತು
 

ತ್ಯಾಗರಾಜರ ಕೃತಿಗಳನ್ನು ತಿರುವಾಂಕೂರಿನಲ್ಲಿ ಪ್ರಥಮತಃ ಅವರ ಶಿಷ್ಯ

ಕನ್ನಯ್ಯ ಭಾಗವತರು ಪ್ರಚಾರಕ್ಕೆ ತಂದರು. ಅವುಗಳಿಂದ ಆಕರ್ಷಿತರಾದ