This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಗೋಮೇಧಿಕ-
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
 

ಪ ದ ನಿ ಸ

ಸ ನಿ ದ ಪ ಗ ರಿ ಸ
 

 
ಗೋರಂಜಿ-
ಪಾಶದೇವನ ಸಂಗೀತಸಮಸಾರವೆಂಬ ಗ್ರಂಥದಲ್ಲಿ ಇದು

ಒಂದು ಭಾಷಾಂಗ ಸಂಪೂರ್ಣರಾಗವೆಂದು ಉಕ್ತವಾಗಿದೆ.
 

 
ಗೋಲ್ಗೊಂಡ ಬಾದ್ಷಾ
ಪದಗಳ ವಾಗ್ಗೇಯಕಾರ ಕ್ಷೇತ್ರಜ್ಞರನ್ನು

ಗೌರವಿಸಿದ ಗೋಳ್ಕೊಂಡದ ದೊರೆ, ಕ್ಷೇತ್ರಜ್ಞ ಗೋಲ್ಗೊಂಡದಲ್ಲಿದ್ದಾಗ ೪೦ ದಿನಗಳಲ್ಲಿ

೧೫೦೦ ಪದಗಳನ್ನು ರಚಿಸಿದರೆಂದೂ, ದೊರೆಯು ಅತ್ಯಂತ ಉದಾರವಾಗಿ ಅವರನ್ನು

ಗೌರವಿಸಿದನೆಂದೂ - ವೆಡುಕ ತೋನಡುಚುಕೊನ್ನ ' ಎಂಬ ದೇವ ಗಾಂಧಾರಿರಾಗದ

ಪದದಲ್ಲಿ ಸೂಚಿಸಿದ್ದಾರೆ.
 
>
 

 
ಗೋವರ್ಧನಿ
ಈ ರಾಗವು ೪೫ನೆ ಮೇಳಕರ್ತ ಶುಭಪಂತುವರಾಳಿಯ

ಒಂದು ಜನ್ಯರಾಗ,
 

ಸ ರಿ ಗ ಪ ದ ಸ
 

ಸ ನಿ ದ ಪ ಮ ಗ ರಿ ಸ
 

 
ಗೋವಿಡಂಬಿನಿ-
ಈ ರಾಗವು ೨೦ನೆ ಮೇಳಕರ್ತ ನಠಭೈರವಿಯ ಒಂದು
 

ಜನ್ಯರಾಗ,
 
ಜನ್ಯರಾಗ
 

ಸ ಗ ಮ ಪ ದ ನಿ ಸ
 

ಸ ದ ಪ ಗ ರಿ ಸ
 

 
ಗೋವಿಂದ-
ಸಂಗ್ರಹ ಚೂಡಾಮಣಿ ಎಂಬ ಗ್ರಂಥವನ್ನು ಬರೆದಿರುವ
 
S:
 
ತಿಂಡಿ
 

ಗೋವಿಂದಾಚಾರ್ಯ,
 

 
ಗೋವಿಂದಾಚಾರ್ಯ-
ಇವರು ೧೮ನೆ ಶತಮಾನದಲ್ಲಿ ತಂಜಾವೂರು

ರಾಜಾಸ್ಥಾನದಲ್ಲಿ ಜೋತಿಷ್ಯ ವಿದ್ವಾಂಸರಾಗಿದ್ದರು ಕಾಕವಟ್ಟಾರಕಂ ಎಂಬಲ್ಲಿ

ವಾಸಿಸುತ್ತಿದ್ದರು. ಇವರಿಗೆ ಅಕಳಂಕ ಎಂಬ ಬಿರುದು ಇದ್ದಿತು. ಇವರು ರಚಿಸಿರುವ

ಸಂಗ್ರಹ ಚೂಡಾಮಣಿ ಎಂಬ ಸಂಸ್ಕೃತದಲ್ಲಿರುವ ಲಕ್ಷಣ ಗ್ರಂಥವು ಆಧುನಿಕ ಸಂಗೀತ

ಪದ್ಧತಿಗೆ ಅನುಗುಣವಾಗಿದೆ. ಈಗಿನ ೭೨ ಮೇಳಗಳ ಹೆಸರನ್ನು ಪ್ರಥಮ ಬಾರಿ

ಈ ಗ್ರಂಥದಲ್ಲಿ ಕೊಡಲಾಗಿದೆ. ಈ ಮೇಳಗಳಿಗೆ ೭೨ ಲಕ್ಷಣ ಗೀತೆಗಳನ್ನೂ, ಆಗಿನ
 
ಪ್ರಸಿದ್ಧವಾಗಿದ್ದ ೨೯೪ ಜನ್ಯರಾಗಗಳಿಗೆ ೨೯೪ ಲಕ್ಷಣ ಗೀತೆಗಳನ್ನೂ ರಚಿಸಿದ್ದಾರೆ.

ಈ ಗ್ರಂಥವು ಹಿಂದಿನ ಪದ್ಧತಿಗಳಲ್ಲಿ ಕಂಡುಬರುವ ನ್ಯೂನತೆಗಳನ್ನು ಸರಿಪಡಿಸುವ

ಪ್ರಯತ್ನದಲ್ಲಿ ಪ್ರಮುಖ ಹೆಜ್ಜೆಯಾಗಿದೆ.
 

 
ಗೋವಿಂದ ಧನಾನ್ಯಾಸಿ -
ಈ ರಾಗವು ೬೩ನ ಮೇಳಕರ್ತ ಲತಾಂಗಿಯ ಒಂದು

ಜನ್ಯರಾಗ,