2023-07-04 06:03:13 by jayusudindra
This page has been fully proofread once and needs a second look.
ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಬಹಳ ಭಾವಪರವಶರಾಗಿ ಶೋಕ ಮತ್ತು
ಕರುಣರಸ ಪ್ರಧಾನವಾದ ರಾಗಗಳನ್ನು ನುಡಿಸುವುದರಲ್ಲಿ ಖ್ಯಾತರಾಗಿದ್ದರು ಗಾಯನ
ದಂತೆ ನುಡಿಸುವುದು ಇವರ ವೈಶಿಷ್ಟ್ಯವಾಗಿತ್ತು ಹಾಗೂ ಸಾಂಪ್ರದಾಯಿಕವೂ
ಚೇತೋಹಾರಿಯೂ ಆಗಿತ್ತು. ರಾಗಗಳನ್ನು ವಿಸ್ತಾರವಾಗಿ ಗಂಟೆಗಟ್ಟಲೆ ನುಡಿಸು
ತಿದ್ದರು. ಹಿಂದೂಸ್ಥಾನಿ ಸಂಗೀತ, ಜ್ಯೋತಿಷ್ಯ, ಮೃದಂಗವಾದನ, ಛಾಯಾಚಿತ್ರ
ಗ್ರಹಣ, ತೈಲಚಿತ್ರರಚನೆ ಇವರ ಹವ್ಯಾಸಗಳಾಗಿದ್ದುವು. ಭಕ್ತಿ ಮತ್ತು ಶೃಂಗಾರರಸ
ಪ್ರಧಾನವಾದ ಹಲವು ತಮಿಳು ಕೃತಿಗಳನ್ನು ರಚಿಸಿದ್ದಾರೆ.
ಹಲವು ಬಿರುದುಗಳಲ್ಲಿ ದಿಗ್ವಿಜಯ ನಾದವಾಣಿ, ಗೋಟು ವಾದ್ಯಗಾನಶಿಖಾಮಣಿ,
ಗೋಟುವಾದ್ಯ ಕಲಾನಿಧಿ, ನಾದಬ್ರಹ್ಮ ವಿದ್ಯಾವಾರಿಧಿ, ಗೋಟುವಾದ ಸಾಮ್ರಾಟ್
ಎಂಬುವು ಕೆಲವು. ಇವರ ಶಿಷ್ಯರಲ್ಲಿ ಪುತ್ರ ನರಸಿಂಹನ್, ವಿ ಶ್ರೀನಿವಾಸ
ಅಯ್ಯಂಗಾರ್, ಎಂ. ವಿ. ವರಾಹಸ್ವಾಮಿ ಮತ್ತು ಮನ್ನಾರುಗುಡಿ ಸಾವಿತ್ರಮ್ಮಾಳ್
ಪ್ರಮುಖರು.
೩೧೪
ಗೋದಾರಿ
ಇದು ೩೯ನೆ ಮೇಳಕರ್ತ ಝುಲವರಾಳಿಯ ಒಂದು ಜನ್ಯರಾಗ,
ಸ ರಿ ಗ ರಿ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
ಅ :
ಗೋಧವಿನಾಕ-
ಇದೊಂದು ಬಗೆಯ ತಂತೀವಾದ್ಯ.
ಗೋಧಿಕ
ಮೊಸಳೆಯ ಚರ್ಮವಿರುವ ಒಂದು ಮದ್ದಳೆ.
ಗೋಮಂಡಲ
ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
ಸ ರಿ ಗ ರಿ ಮ ಸ ನಿ ದ ಸ ಸ
ಸ ರಿ ಗ ರಿ ಮ ಸ ನಿ ದ ಸ ಸ
9 : ಸ ನಿ ದ ಪ ಮ ಗ ರಿ ಸ
ಗೋಮುಖ
ಇದು ರಾಮಾಯಣ ಮತ್ತು ಮಹಾಭಾರತದಲ್ಲಿ ಉಕ್ತವಾಗಿ
ರುವ ಒಂದು ರಣವಾದ್ಯ. ಗೋಮುಖವನ್ನು ಹೋಲುವ ಊದುವ ಭಾಗವುಳ್ಳ ಶಂಖ,
ಗೋಮುಖಿ
(೧) ಇದೊಂದು ಸುಷಿರವಾದ್ಯ
(೨) ಇದು ೧೫ನೆ ಮೇಳಕರ್ತ ಮಾಯಾಮಾಳವಗೌಳವ ಒಂದು ಜನ್ಯರಾಗ
ಗ ರಿ ಸ ಮ ಪ ದ ನಿ ಸ
ಸ ನಿ ದ ಸ ರಿ ಗ ಸ
ಸ ನಿ ದ ಸ ರಿ ಗ ಸ
ಗೋಮೂತ್ರಕ
(ಈ ರಾಗವು ೨೮ನೆ ಮೇಳಕರ್ತ ಹರಿಕಾಂಭೋಜಿಯ
ಒಂದು ಜನ್ಯರಾಗ.
ಆ
ಸ ರಿ ಗ ಮ ಪ ನಿ ಸ
ಸ ನಿ ದ ಪ ಮ ಗ ರಿ ಸ