2023-07-04 06:01:43 by jayusudindra
This page has been fully proofread once and needs a second look.
೧೯೫೯)
ಗೋಟುವಾದ್ಯಕ್ಕೆ ಉತ್ತರ ಭಾರತದಲ್ಲಿ ವಿಚಿತ್ರವೀಣಾ ಎಂದು ಹೆಸರು.
ಈ ಕಠಿಣತರವಾದ ವಾದ್ಯವನ್ನು ನುಡಿಸುವುದರಲ್ಲಿ ಅಸಾಧಾರಣ ಪ್ರತಿಭೆಯನ್ನು
ಹೊಂದಿದ್ದ ನಾರಾಯಣ ಅಯ್ಯಂಗಾರರು ಮೈಸೂರಿನ ಕೀರ್ತಿಯನ್ನು ಭಾರತಾದ್ಯಂತ
ವಲ್ಲದೆ ವಿದೇಶಗಳಲ್ಲಿ ಹರಡಿದ ಕಲಾವಿದರು. ಇವರು ತಮಿಳುನಾಡಿನ ತಿರುನೆಲ್ವೇಲಿ
ಜಿಲ್ಲೆಯ ವ ಹೇಂದ್ರ ಗಿರಿ ಎಂಬ ಬೆಟ್ಟದ ಸಮೀಪದಲ್ಲಿರುವ ಬೂದಂಪಾಡಿ ಗ್ರಾಮದಲ್ಲಿ
ಜನಿಸಿದರು. ಇವರ ತಂದೆ ಶ್ರೀನಿವಾಸ ಅಯ್ಯಂಗಾರ್ ಲೋಕೋಪಯೋಗಿ
ಇಲಾಖೆಯಲ್ಲಿ ಓವರ್‌ಸೀಯರ್ ಆಗಿದ್ದರು. ಇವರ ತಾಯಿಯ ಹೆಸರು ಶ್ರೀವರಮಂಗೈ,
ತಂದೆಗೆ ಸ್ವಲ್ಪ ಪಿಟೀಲು ನುಡಿಸುವ ಅಭ್ಯಾಸವಿತ್ತು. ನಾರಾಯಣ ಅಯ್ಯಂಗಾರರಿಗೆ
ಚಿಕ್ಕಂದಿನಿಂದಲೂ ಸಂಗೀತದ ಗೀಳು. ತಂದೆಗೆ ತಿಳಿಯದೆಯೇ ಗುಟ್ಟಾಗಿ ಸಂಗೀತಾಭ್ಯಾಸ
ಮಾಡುತ್ತಿದ್ದರು ಹೈಸ್ಕೂಲ್ ವಿದ್ಯಾಭ್ಯಾಸದ ನಂತರ ಕಾಲೇಜಿನಲ್ಲಿ ಎಫ್. ಎ.
ಸಂಗೀತಾಭ್ಯಾಸವನ್ನು ಮುಂದುವರಿಸಲು ಕಾಲೇಜನ್ನು
ತರಗತಿಗೆ ಸೇರಿದರು
ಹಾಡುಗಾರಿಕೆ ಕಲಿತರು ಅವರ ಅಪ್ಪಣೆಯಂತೆ ಅವರ ಗೋಟುವಾದ್ಯವನ್ನು
ತೆಗೆದುಕೊಂಡು ಹೋಗಿ ಸತತವಾಗಿ ಅಭ್ಯಾಸ ಮಾಡಿದರು. ನಂತರ
ಸುಪ್ರಸಿದ್ಧ ವಿದ್ವಾಂಸರಾಗಿದ್ದ ತಿರುವಡ ಮರುದೂರು ಸಖಾರಾಮರಾಯರಲ್ಲಿ ಸ್ವಲ್ಪ
ಕಾಲ ಕಲಿತು ಅವರ ವಾದ್ಯವನ್ನು ಪಡೆದು ತಿರುಮಲೆಯ ತುಂಬುರು ತೀರ್ಧಕ್ಕೆ ಹೋಗಿ
ಕೆಲವು ತಿಂಗಳ ಕಾಲ ಸತತವಾಗಿ ಸಾಧನೆ ಮಾಡಿ, ತರುವಾಯ ಶೀಘ್ರವಾಗಿ ಕೀರ್ತಿ
ಶಿಖರವನ್ನೇರಿದರು.
ရုဒ
ನುಡಿಸಿ ಅವರ ಪ್ರಶಂಸೆ ಪಡೆದರು. ೧೯೨೮ರಲ್ಲಿ ಕೊಲಂಬಿಯಾ ಗ್ರಾಮಾಫೋನ್
ಕಂಪೆನಿಯು ಇವರ ಹಲವು ಕೃತಿಗಳ ವಾದನದ ಮುದ್ರಿಕೆಗಳನ್ನು ಹೊರತಂದಿತು.
ಒಂದೆರಡು ಸಲ ಭಾರತಾದ್ಯಂತ ಪ್ರವಾಸ ಮಾಡಿ ಹಲವಾರು ಕಡೆ ಕಚೇರಿಗಳನ್ನು
ಮಾಡಿ ಪ್ರಸಿದ್ಧರಾದರು. ನಾಲ್ವಡಿ ಕೃಷ್ಣರಾಜ ಒಡೆಯರು ಇವರನ್ನು ಆಸ್ಥಾನ
ವಿದ್ವಾಂಸರನ್ನಾಗಿ ನೇಮಿಸಿದರು. ೧೯೨೮ ರಿಂದ ೧೯೩೮ ರವರೆಗೆ ಅನೇಕ ರಾಜ
ಮಹಾರಾಜರ ಆಸ್ಥಾನಗಳಲ್ಲಿ, ಮಠಾಧಿಪತಿಗಳ ಮತ್ತು ಭಾರತೀಯ ನಾಯಕರ
ಸಮ್ಮುಖದಲ್ಲಿ ನುಡಿಸಿ ಮೆಚ್ಚುಗೆ ಮತ್ತು ಗೌರವ ಪಡೆದರು.
ರವರೆಗೆ ಬರ್ಮ, ಮಲಯ, ಸಿಂಹಳ ಮುಂತಾದ ದೇಶಗಳಲ್ಲಿ ಪ್ರವಾಸ ಮಾಡಿ ಕಚೇರಿ
ಗಳನ್ನು ಮಾಡಿದರು. ೧೯೫೯ರಲ್ಲಿ ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ಕಾರ್ಯ
ಕ್ರಮವನ್ನು ಮುಗಿಸುತ್ತಿದ್ದಾಗಲೇ ಕೊನೆಯುಸಿರನ್ನೆಳೆದರು.
೧೯೩೯ ರಿಂದ ೧೯೪೧
ಚೇತನವನ್ನಿತ್ತು ಅದರ ಹಿರಿಮೆಯನ್ನು ಸ್ಥಾಪಿಸಿದರು. ಸತತ ಪ್ರಯೋಗದಿಂದ ೨೨