This page has not been fully proofread.

೩೦೮
 
ಸಂಗೀತ ಪಾರಿಭಾಷಿಕ ಕೋಶ
 
ಸುಳಾದಿಗಳಲ್ಲಿ ಹರಿಯ ಮಹಿಮೆಯು, ಶಾಸ್ತ್ರಾರ್ಧವೂ ಬಹು ವಿಸ್ತಾರವಾಗಿ ವರ್ಣಿತ
ವಾಗಿದೆ. ದಾಸಸಾಹಿತ್ಯದಲ್ಲಿ ಗೋಪಾಲದಾಸರ ಕೃತಿಗಳಿಗೆ ಬಹಳ ಮಹತ್ವವಿದೆ.
ಇವರ ಮಡಿ ಸುಳಾದಿ ಬಹು ಬೋಧಪ್ರದ. ಇವರು ರಚಿಸಿ ಹಾಡಿದ ಸುರಟರಾಗದ
ಮಂಗಳಂ ಮಂಗಳಂ ದಯಾನಿಧೇ ಮಂಗಳಂ ಮಂಗಳಂ ಎಂಬ ಕೃತಿಯನ್ನು ಈಗಲೂ
ಉತ್ತನೂರಿನ ವೆಂಕಟೇಶ ದೇವಾಲಯದಲ್ಲಿ ಹಾಡುತ್ತ ಸ್ವಾಮಿಗೆ ಆರತಿ ಎತ್ತುವುದು
ಪದ್ಧತಿಯಾಗಿ ಬಂದಿದೆ.
 
ಹಾಗೂ
 
ಗೋಪಾಲನಾಯಕ - ಇವನು ಅಲ್ಲಾವುದ್ದೀನ ಖಿಲ್ಟಿಯ (೧೨೯೫-೧೩೧೫)
ಆಸ್ಥಾನವಿದ್ವಾಂಸನಾಗಿದ್ದನು
ಅತ್ಯಂತ ಪ್ರಸಿದ್ಧ ಗಾಯಕ ಮತ್ತು
ವಾಗ್ಗೇಯಕಾರನಾಗಿದ್ದನು. ಅದೇ ಆಸ್ಥಾನ ಕವಿ ಮತ್ತು ಪರ್ಷಿಯನ್ ವಿದ್ವಾಂಸ
ನಾಗಿದ್ದ ಅಫಾರ್ ಖುಸ್ರುವಿಗೆ ಗೋಪಾಲನಾಯಕನಲ್ಲಿ ಅಪಾರ ಗೌರವ ಮತ್ತು
ಸ್ನೇಹವಿದ್ದಿತು. ಒಂದು ಸಲ ಗೋಪಾಲನಾಯಕನು ಒಂದೇ ರಾಗವನ್ನು ಏಳು ದಿನ
ಸಾಯಂಕಾಲದಲ್ಲಿ ಹಾಡಿದ್ದನ್ನು ಅಮಾರ್‌ಖುಸ್ಸುವು ಅಲ್ಲಾವುದ್ದೀನನ ಸಿಂಹಾಸನದ
ಹಿಂದೆ ಅವಿತುಕೊಂಡು ಕೇಳಿ ಆ ರಾಗದ ಮುಖ್ಯಾಂಶಗಳು ಮತ್ತು ಸ್ವರಗಳನ್ನು
ಗುರುತು ಮಾಡಿಕೊಂಡು, ಎಂಟನೆಯ ಸಂಜೆ ನಾಯಕನ ಶೈಲಿಯಲ್ಲಿ ಹಾಡಿ
ಎಲ್ಲರನ್ನೂ ಬೆರಗುಗೊಳಿಸಿದನು. ಗೋಪಾಲನಾಯಕನೂ ಖುಸುವೂ ಆತ್ಮೀಯ
ಗೆಳೆಯರಾಗಿ ಆಗಾಗ್ಗೆ ಸಂಗೀತದ ಬಗ್ಗೆ ವಿಚಾರ ವಿನಿಮಯ ಮಾಡಿ
ಕೊಳ್ಳುತ್ತಿದ್ದರು.
 
ಗೋಪಾಲನಾಯಕನು ತಾಳಾರ್ಣವ, ರಾಗ ಕದಂಬಕಂ ಮತ್ತು ಗ್ರಹಸ್ವರ
ಪ್ರಬಂಧು ಎಂಬ ಮೂರು ಗ್ರಂಥಗಳನ್ನು ರಚಿಸಿದ್ದಾನೆ. ಕಲ್ಲಿನಾಥನು ಈ ಗ್ರಂಥ
ಗಳಿಂದ ಹಲವು ಅಂಶಗಳನ್ನು ಉದಾಹರಿಸಿದ್ದಾನೆ. ಗೀತ, ಆಲಾಪ, ತಾಯ ಮತ್ತು
ಪ್ರಬಂಧಗಳನ್ನು ಹಾಡುವುದರಲ್ಲಿ ನಾಯಕನು ಅದ್ವಿತೀಯನಾಗಿದ್ದನು. ಸಂಗೀತ
ಕ್ಷೇತ್ರದಲ್ಲಿ ಗೋಪಾಲನಾಯಕನ ಸ್ಥಾನವು ಅದ್ವಿತೀಯವಾದುದು. ಖುಸ್ತು ಮತ್ತು
ನಾಯಕ ಇವರಿಬ್ಬರೂ ಸಂಗೀತ ಪದ್ಧತಿಗಳ ಮಥನ, ವಿಮರ್ಶೆ, ಮಿಲನ ಮತ್ತು
ಪ್ರಯೋಗಮಾಡಿ ಹಿಂದೂಸ್ಥಾನಿ ಗಾನಪದ್ಧತಿಯ ಆದಿಪುರುಷರಾದರು.
ಗೋಪಿಕಾಕುಸುಮ-ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವ
ಗೌಳ ರಾಗದ ಒಂದು ಜನ್ಯರಾಗ
 
ಸ ರಿ ಮ ದ ನಿ ಸ
ಸ ನಿ ದ ಮ ರಿ ಸ
 
ಗೋಪಿಕಾಗೀತ-ಇವು ತತ್ವಬೋಧಕವಾದ ಸಂಸ್ಕೃತದ ಹಾಡುಗಳು,
ಇವನ್ನು ಭಜನೆಗಳಲ್ಲಿ ಹಾಡುತ್ತಾರೆ.
 
ಗೋಪಿಕಾಂಭೋಧಿ-ನಾರದನ ಸಂಗೀತ ಮಕರಂದವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಒಂದು ರಾಗ.