This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಆಡಿಯಪಾದ ಎಂಬ ಕೀರ್ತನೆಯಲ್ಲಿ ತಾಂ ಎಂಬ ಜತಿ ಅಕ್ಷರವನ್ನು ಎರಡು ಅರ್ಥ

ಗಳುಂಟಾಗುವಂತೆ ಬಳಸಿದ್ದಾರೆ.

ಇವರ ರಚನೆಗಳು ರಾಗ, ಲಯ, ತಾಳ, ಯತಿ,

ಪ್ರಸ್ತಾರ, ಲಕ್ಷಲಕ್ಷಣ, ಸಂವಿಧಾನಪ್ರತ್ಯಯ ಪರಿಪೂರ್ಣವಾಗಿ ನವರಸಭರಿತವಾಗಿ

ಸರ್ವಾಂಗಪುಷ್ಟವಾಗಿವೆ. ಭಾರತಿಯವರು ತಮ್ಮ ೮೬ನೆ ವಯಸ್ಸಿನಲ್ಲಿ ಮಹಾಶಿವ

ರಾತ್ರಿಯ ದಿನ ಕಾಲವಾದರು.
 
೩೦೬
 

 
ಗೋಪಾಲಕೃಷ್ಣಯತಿ -
ಇವರು ಹಲವು ಭಕ್ತಿ ಕೃತಿಗಳನ್ನು ಕೃಷ್ಣ ಎಂಬ

ಅಂಕಿತದಲ್ಲಿ ರಚಿಸಿರುವ ಪ್ರಸಿದ್ಧ ವಾಗ್ಗೇಯಕಾರ. ಇವರು ರಚಿಸಿರುವ ಕೇದಾರಗೌಳ

ರಾಗದ - ಭಕ್ತ ಶ್ರೀಧರವೆಂಕಟ ಗುರುವರ್ಯ ' ಎಂಬ ತೆಲುಗು ಕೃತಿಯು ಪ್ರಸಿದ್ಧ

ಇದು ಮಹಾಭಕ್ತರಾಗಿದ್ದ ಶ್ರೀಧರವೆಂಕಟೇಶ್ವರದೀಕ್ಷಿತರ (ಅಯ್ಯಾವಾಳ್)
 
6
 
ವಾಗಿದೆ.
 
ಸ್ತುತಿಯಾಗಿದೆ.
 

 
ಗೋಪತಿ-
\
ಈ ರಾಗವು ೪೨ನೆ ಮೇಳಕರ್ತ ರಘುಪ್ರಿಯದ ಒಂದು ಜನ್ಯರಾಗ

ಸ ರಿ ಗ ಮ ಪ ದ ನಿ
 

 

ಪ ಮ ಗ ರಿ ಸ ನಿ
 

 
ಗೋಪಾಲದಾಸ-
ಇದು ತ್ಯಾಗರಾಜರ ಶಿಷ್ಯ ವೀಣೆ ಕುಪ್ಪಯ್ಯರ್ ಮತ್ತು

ತಿರುವೋಟ್ಟಿಯೂರ್ ತ್ಯಾಗಯ್ಯರ್ ತಮ್ಮ ಸಂಗೀತರಚನೆಗಳಲ್ಲಿ

ವೇಣುಗೋಪಾಲಸ್ವಾಮಿಯು ಈ ವಾಗ್ಗೇಯಕಾರರ ಮನೆ

ಅಂಕಿತವನ್ನು ಬಳಸಿದ್ದಾರೆ.
 

 
ದೇವರಾದ್ದರಿಂದ ತಮ್ಮ ಭಕ್ತಿಸೂಚಕವಾಗಿ
 
ಕುಪ್ಪಯ್ಯರ್‌ರವರ ರಚನೆಗಳನ್ನು ಪಲ್ಲವಿ ಸ್ವರಕಲ್ಪವಲ್ಲಿ (೧೯೦೦) ಎಂಬ ಗ್ರಂಥದಲ್ಲಿ

ಮತ್ತು ತ್ಯಾಗಯ್ಯರ್‌ರ ರಚನೆಗಳನ್ನು ಸಂಕೀರ್ತನ ರತ್ನಾವಳಿ (೧೯೦೮) ಎಂಬ ಗ್ರಂಥ

ದಲ್ಲಿ ಪ್ರಕಟಿಸಲಾಗಿದೆ. ಇವೆರಡೂ ತೆಲುಗು ಗ್ರಂಥಗಳು. ತಂದೆ ಮತ್ತು ಮಗನ

ಅಂಕಿತವು ಒಂದೇ ಆಗಿದ್ದರೂ, ಅವರ ರಚನೆಗಳು ಬೇರೆ ಬೇರೆ ಗ್ರಂಥಗಳಲ್ಲಿರುವುದರಿಂದ

ಗೊಂದಲಕ್ಕೆ ಅವಕಾಶವಿಲ್ಲ.
 
ಅವರ ಪುತ್ರ
ಬಳಸಿರುವ ಅಂಕಿತ.
 

 
ಗೋಪಾಲದಾಸರು (೧೭೨೨-೧೭೮೫)-
ಗೋಪಾಲದಾಸರು ಕರ್ಣಾಟಕದ

ರಾಯಚೂರ್ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೊಸರುಕಲ್ಲು ಗ್ರಾಮದಲ್ಲಿ

ಜನಿಸಿದರು. ಇವರ ತಂದೆ ಹರಿತಸ ಗೋತ್ರದ ಮುರಾರಿರಾಯರು ಮತ್ತು ತಾಯಿ

ವೆಂಕಮ್ಮ, ಗೋಪಾಲದಾಸರ ಮೊದಲ ಹೆಸರು ಭಾಗಣ್ಣ,

ಮಂದಿ,
 
ತಮ್ಮಂದಿರು ಮೂರು

ಚಿಕ್ಕಂದಿನಲ್ಲಿ ತಂದೆಯ ವಿಯೋಗದಿಂದ ತಾಯಿ ವೆಂಕಮ್ಮ ನಿರ್ಗತಿಕರಾಗಿ

ಮಕ್ಕಳ ಸಹಿತ ಭಿಕ್ಷುಕಳಾಗಿ ಸಂಚರಿಸುತ್ತಾ ಗದ್ವಾಲ ಸಂಸ್ಥಾನದ ಸಂಕಾಪುರಕ್ಕೆ

ಬಂದು ಅಲ್ಲಿಯ ಮಾರುತಿಯ ಗುಡಿಯಲ್ಲಿದ್ದು ಜೀವನ ಸಾಗಿಸುತ್ತಿದ್ದಳು.

ಭಾಗಣ್ಣನಿಗೆ ಚಿಕ್ಕಂದಿನಲ್ಲೇ ಧರ್ಮೋಪನಯನವಾಗಿ ಗಾಯತ್ರಿ ಪುನಶ್ಚರಣೆಯಿಂದ

ವಾಕ್ಸಿದ್ಧಿ ಪಡೆದರು.

ಇದರ ಪ್ರಭಾವದಿಂದ ಜನರಿಗೆ ಭವಿಷ್ಯ ಹೇಳಲು ತೊಡಗಿದರು.

ದ್ರವ್ಯಾರ್ಜನೆಯಲ್ಲದೆ ಅದ್ಭುತ ಕವಿತಾ ಶಕ್ತಿ ಬಂದಿತು. 'ಗಾಲದ ರಾಜನು