2023-06-25 23:30:04 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ತತ್ವಗಳು, ಜೇನಿನಂತೆ ಹರಿಯುವ ಸಂಗೀತ, ಅವುಗಳಲ್ಲಿರುವ ಉದಾತ್ತ ಭಾವನೆಗಳು,
ಕೆಲವು ಕೀರ್ತನೆಗಳಲ್ಲಿ ಅಡಕವಾಗಿರುವ ಸುಂದರವಾದ ಜತಿಗಳು ಇವೆಲ್ಲವೂ ಭಾರತಿ
ಯವರಿಗೆ ಅಪಾರ ಕೀರ್ತಿ ತಂದುವು. ನಾಗಪಟ್ಟಣದ ಒಬ್ಬ ಶ್ರೀಮಂತ ವರ್ತಕ
ಪ್ರೋತ್ಸಾಹ ಹಾಗೂ ಪೋಷಣೆಯಿಂದ ತನ್ನ ಕೃತಿಯ ಪ್ರಥಮ ಪ್ರದರ್ಶನ ನೀಡಿದರು.
ತರುವಾಯ ಹಲವಾರು ಕಡೆ ಪ್ರದರ್ಶನಕ್ಕೆ ಬೇಡಿಕೆ ಬಂದಿತು.
ರಲ್ಲಿ ಗ್ರಂಥರೂಪದಲ್ಲಿ ಪ್ರಕಟಿಸಲ್ಪಟ್ಟಿತು. ೧೯೬೨ರಲ್ಲಿ ದ್ವಿತೀಯಾವೃತ್ತಿ ಪ್ರಕಟಿಸ
ಮೊದಲು ೧೮೬೧
ಲಾಯಿತು.
೩೦೫
ಶೆಕ್ಕಿಲಾರ್ ಕವಿಯ ಪೆರಿಯಪುರಾಣಂ ಎಂಬ ಗ್ರಂಥದಲ್ಲಿ ನಂದರ್ನಾ
ವಿಷಯವು ೩೭ ಪದ್ಯಗಳಲ್ಲಿ ಸಂಗ್ರಹವಾಗಿದೆ. ಇಷ್ಟು ಸ್ವಲ್ಪ ವಿಷಯವನ್ನು ಆಧರಿಸಿ
ವಿಸ್ತಾರವಾದ ರೂಪಕವನ್ನು ರಚಿಸಿದರು. ವಿಪರೀತ ಮಡಿವಂತ, ನಿರ್ದಯಿ ಮತ್ತು
ಹಠವಾದಿಯಾದ ಜಮೀನ್ದಾರ, ಒಬ್ಬ ಜ್ಞಾನವೃದ್ದ ಮುಂತಾದ ಪಾತ್ರಗಳನ್ನು
ಸೃಷ್ಟಿಸಿದ್ದಾರೆ. ನಂದನಾರ್ ಮತ್ತು ಜಮೀನ್ದಾರ ಇವರಿಬ್ಬರ ಪಾತ್ರಗಳು ನೇರ
ವಿರುದ್ಧವಾದುವು.
ಈ ಪಾತ್ರಗಳ ವಿರೋಧವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಪದ್ಯಗಳ ಅಂತಶ್ಯಕ್ತಿ, ಸ್ವಾಭಾವಿಕವಾಗಿ ಹರಿಯುವ ಸಂಗೀತ, ನಂದನಾರ್ ಬಗ್ಗೆ
ಅನುಕಂಪ, ಜಮೀನ್ದಾರನ ಬಗ್ಗೆ ಕ್ರೋಧವುಂಟಾಗುವಂತೆ ಪಾತ್ರ ರಚನೆ, ಸುಂದರ
ವಾದ ಇದು ತೊಲ್ಲಲಂಕಾರಗಳು ಮತ್ತು ನೊಂಡಿ ಚಿಂದುಗಳು ಭಾರತಿಯ ರಚನಾ
ಕೌಶಲ್ಯದ ಪ್ರತೀಕಗಳು. ಈ ರೂಪಕದ ಸಂಗೀತವು ಆಹ್ಲಾದಕರವಾಗಿದೆ. ಭಕ್ತಿ
ಯಿಲ್ ಕರೆ ಕಂಡವನ್ ಪಾರ್ಕ್ಟಾರ್ಡ್‌ವುಂಡವ ಎಂಬ ಮಾತು ಭಕ್ತಿಯ
ಪರಿಚಯವನ್ನು ಪರಿಣಾಮಕಾರಿಯಾಗಿ ಮಾಡುತ್ತದೆ.
(
ಅಲ್ಲದೆ
ಭಾರತಿಯವರೇ ನಂದನಾರ್ ಚರಿತದ ಕಾಲಕ್ಷೇಪವನ್ನು ಮೂರು ದಿನಗಳ
ಕಾಲ ಮಾಡುತ್ತಿದ್ದರು. ಈ ರೂಪಕದ ಜನಪ್ರಿಯತೆಗೆ ಬಹುಮಟ್ಟಿಗೆ ಕಾರಣರಾದ
ವರು ಆಧುನಿಕ ಕಥಾಕಾಲಕ್ಷೇಪದ ಪದ್ಧತಿಯನ್ನು ರೂಪಿಸಿದ ತಂಜಾವೂರು ಕೃಷ್ಣ
ಭಾಗವತರು (೧೮೪೭-೧೯೦೩), ಭಾರತಿಯವರು ನಂದನಾರ್ ಚರಿತ್ರಂ
ತಿರುನೀಲಕಂರ ನಾಯನಾರ್ ಚರಿತ್ರಂ, ಇಯರ್‌ಗೈ ನಾಯನಾರ್ ಚರಿತ್ರಂ ಮತ್ತು
ಕಾರೈಕ್ಕಾಲ್ ಅಮ್ಮೆ ಯಾರ್ ಚರಿತ್ರಂ ಎಂಬ ಚಿಕ್ಕ ರೂಪಕಗಳನ್ನು ರಚಿಸಿದ್ದಾರೆ.
ಇವಲ್ಲದೆ ಜ್ಞಾನಚಿಂದು, ಜ್ಞಾನಕುಮ್ಮಿ, ಚಿದಂಬರಂ ಕಣ್ಣಿ, ಮಾಮಿನಾಟಕಂ
ಎಂಬುವುಗಳನ್ನು ರಚಿಸಿದ್ದಾರೆ. ವಿವಾಹ ಸಂದರ್ಭಗಳಲ್ಲಿ ಹಾಡಲು ಹಾಡುಗಳ
ಸಾಹಿತ್ಯವನ್ನು ರಚಿಸಿದರು.
ಚಿದಂಬರದ ನಟರಾಜ ಮತ್ತು ಗೋವಿಂದರಾಜಸ್ವಾಮಿ
ಸನ್ನಿಧಿಗಳಲ್ಲಿ ನಡೆಯುವ ಪೂಜಾದಿಗಳ ಹೋಲಿಕೆ ಮತ್ತು ವಿವರಣೆಯನ್ನು ಸುರಟ
ಎ
ವಸಂತರಾಗದ
ರಾಗದ ತಿಳ್ಳೆಂಬಲತ್ತಾನೆ ಎಂಬ ಹಾಡಿನಲ್ಲಿ ಚಿತ್ರಿಸಿರುವರು.
ನಟನಮಾಡಿನಾರ್ ಎಂಬ ಹಾಡು ನೃತ್ಯ ಪ್ರದರ್ಶನಗಳಲ್ಲಿ ಬಹುವಾಗಿ ಪ್ರಚಾರವಾಗಿದೆ.
20