This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಮಾಯಾವರಂ ದೇವಾಲಯಗಳಿಗೆ ಬರುವ ಯಾತ್ರಾರ್ಥಿಗಳಿಗೆ ರಾತ್ರಿಯ ವೇಳೆ ಅನ್ನ
ದಾನಮಾಡಲು ವುದುವಟ್ಟುಗಳನ್ನು ಸ್ಥಾಪಿಸಿದರು.
 
ಹಲವು ಭಾಷೆಗಳಲ್ಲಿ ಪಾಂಡಿತ್ಯ, ಶಾಸ್ತ್ರ ಪುರಾಣಗಳಲ್ಲಿ ವೈದುಷ್ಯ, ಸಂಗೀತದಲ್ಲಿ
ವಿದ್ವತ್ತು ಮುಂತಾದ ಅರ್ಹತೆಗಳಿಂದ ಇವರು ಉತ್ತಮ ವಾಗ್ಗೇಯಕಾರರಾದರು.
ಪರಿಚಿತ ರಾಗಗಳಲ್ಲಿ ಇವರು ರಚಿಸಿದ ಮೊದಲಿನ ಕೃತಿಗಳು ಜನಪ್ರಿಯವಾದುವು.
ನಾಟಕಪ್ರಿಯರಾಗದ "ಶಿವಲೋಕಮೆಂಗಿರ', ಸರಸಾಂಗಿರಾಗದ "ಮಹಾದೇವಶರಣಂ',
ಆಹಿರಿರಾಗದ (ಅಂಬಲವಾಣನೈ, ಜಗಮೋಹಿನಿರಾಗದ 'ಶಿವಕಾಮಸುಂದರಿ' ಮಾಂಜಿ
ರಾಗದ 'ಸಂಜಲಪದವೇಂಡಾಮ್' ಮುಂತಾದ ಕೃತಿಗಳು ಇವರ ಪ್ರತಿಭೆಯ ಪ್ರತೀಕ
ಗಳಾಗಿವೆ. ತ್ಯಾಗರಾಜರ ನಂತರ ಈ ಅಪರೂಪರಾಗಗಳಲ್ಲಿ ಕೃತಿಗಳನ್ನು ರಚಿಸಿದವರಲ್ಲಿ
ಇವರೇ ಮೊದಲಿಗರು. ಆಕರ್ಷಕ ಶೈಲಿ, ತಿಳಿಯಾದ ಸಾಹಿತ್ಯ, ಭಾವಕ್ಕೆ ತಕ್ಕ ರಾಗ
ಇವುಗಳಿಂದ ಇವರ ಕೃತಿಗಳು ಜನಪ್ರಿಯವಾಗಿವೆ. ಇವರ ಕೈಯಲ್ಲಿ ಲಾವಣಿಗಳು
ಮತ್ತು ಚಿಂದುಗಳು ಹೊಸ ಚೈತನ್ಯ ಪಡೆದುವು. ತ್ಯಾಗರಾಜರೂ ಕೂಡ ಇವರ
ರಚನೆಗಳಿಗೆ ಮನಸೋತಿದ್ದರು. ಸಂಗೀತ ರೂಪಕಗಳಲ್ಲದೆ "ವಿಡುತಿ' ಬಿಡು ಕೀರ್ತನೆ
ಗಳನ್ನು ರಚಿಸಿದರು
ಇವಲ್ಲಿ ಇವರ ಅಂಕಿತವಿಲ್ಲ. ಸಾಹಿತ್ಯವು ಬೇರೆ ಬೇರೆ ವಿಷಯ
ಗಳಿಗೆ ಸಂಬಂಧಿಸಿದೆ. ಇವರು ರಚಿಸಿದ ವಿಡುತಿ ಕೀರ್ತನೆಗಳೂ, ಕಣ್ಣಿಗಳೂ ೧೮೦
ಇವರ ಸಂಗೀತ ರೂಪಕಗಳಲ್ಲಿರುವ ಕೀರ್ತನೆಗಳು ೪೨೬ ಇವೆ ಒಟ್ಟಿನಲ್ಲಿ
ಇವರು ಸಾವಿರಕ್ಕೂ ಮಿಗಿಲಾಗಿ ಕೃತಿಗಳನ್ನು ರಚಿಸಿದ್ದಾರೆ.
 
ಇವೆ.
 
ಮಾಯಾವರಂನಲ್ಲಿದ್ದ ಕೃಷ್ಣಾನಂದಯೋಗಿ ಎಂಬ ಇವರ ಮಿತ್ರರು ಇವರ
ರಚನೆಗಳನ್ನೆಲ್ಲಾ ಬರೆದಿಟ್ಟರು. ಅಲ್ಲಿ ಮುನ್ಸಿಫ್ ಆಗಿದ್ದ ವೇದನಾಯಕಂಪಿಳ್ಳೆ
ಇವರ ಒಬ್ಬ ಅಚ್ಚು ಮೆಚ್ಚಿನ ಶಿಷ್ಯರು. ಒಳ್ಳೆಯವರ 'ಸರ್ವಸಮಯ ಸಮರಸ ಕೀರ್ತನೆ'
ಗಳಲ್ಲಿ ಭಾರತಿಯವರ ಪ್ರಭಾವವನ್ನು ಕಾಣಬಹುದು. ಭಾಗವತದ ದಶಮಸ್ಕಂದದ
ಎಂಬ ಗ್ರಂಥದ ಕರ್ತೃವಾದ ಅನಂತಭಾರತಿ (೧೮೪೫-೧೯೦೫)
ಇವರ ಸ್ನೇಹಿತರಾಗಿದ್ದರು. ಭಾರತಿಯವರು ತ್ಯಾಗರಾಜರ ನೌಕಾ ಚರಿತಂ ಮತ್ತು
ಪ್ರಹ್ಲಾದಭಕ್ತಿ ವಿಜಯಂ ಎಂಬ ಸಂಗೀತ
ರೂಪಕಗಳಿಂದ ಪ್ರಭಾವಿತರಾಗಿದ್ದರು.
ಭಕ್ತನಂದನಾರ್‌ರ ಜೀವನ ಚರಿತ್ರೆಯನ್ನು ಸಂಗೀತರೂಪಕದ ವಿಷಯವನ್ನಾಗಿ ತೆಗೆದು
 
ಕೀರ್ತನೆಗಳು
 
೩೦೪
 
ಕೊಂಡು ರಚಿಸಿದರು
 
* ನಂದನಾರ್' ಚರಿತವು ದಕ್ಷಿಣ ಭಾರತದ ಸಂಗೀತಕ್ಕೆ ಭಾರತಿಯವರ ಒಂದು
ಅಮೂಲ್ಯವಾದ ಕೊಡುಗೆ. ಬಹಳ ಜನಪ್ರಿಯವಾದ ಆಗಾಗ್ಗೆ ಪ್ರದರ್ಶಿತವಾಗು
 
ತಿರುವ ರೂಪಕ.
 
ಇದರ ಹಾಡುಗಳು ಚಿರಪರಿಚಿತವಾಗಿದ್ದು ತಮಿಳು ದೇಶದ ಎಲ್ಲಾ
ವರ್ಗಗಳ ಜನರು ಹಾಡುತ್ತಾರೆ. ಭಾರತಿಯವರು ಈ ರೂಪಕದಲ್ಲಿ ತಮ್ಮ ಭಾವನೆ
 
ಮತ್ತು ಅನುಭವಗಳನ್ನು ಸೊಗಸಾಗಿ ಚಿತ್ರಿಸಿದ್ದಾರೆ.
 
ಅವರು ಬಳಸಿರುವ ಸುಂದರ
 
ವಾದ ಸಾಹಿತ್ಯ, ಪದಲಾಲಿತ್ಯ, ಪ್ರಾಸಗಳ ನಿನಾದ, ಸಾಹಿತ್ಯದಲ್ಲಿ ಅಡಕವಾಗಿರುವ