This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ವಿಶ್ವನಾಥ ಅಯ್ಯರಲ್ಲ ಕಲಿತರು. ವಂಡಿತ್ ಕೃಷ್ಣಾನಂದರಲ್ಲಿ ಹಿಂದೂಸ್ಥಾನಿ
ಸಂಗೀತವನ್ನೂ ಕಲಿತರು ತಮ್ಮ ೬ ನೆ ವಯಸ್ಸಿನಲ್ಲೇ ಕಚೇರಿಗಳಲ್ಲಿ ಭಾಗವಹಿಸಲು
ಪ್ರಾರಂಭಿಸಿದ ೩೦ ವರ್ಷಗಳಿಂದ ಹಿರಿಯ ವಿದ್ವಾಂಸರ ಕಚೇರಿಗಳಿಗೆ ಪಕ್ಕ ವಾದ್ಯ
ನುಡಿಸುತ್ತ ಬಂದಿದ್ದಾರೆ. ಕರ್ಣಾಟಕ ಮತ್ತು ಹಿಂದೂಸ್ಥಾನಿ ಸಂಗೀತಗಳೆರಡರಲ್ಲಿ
ಗಾಯಕರಾಗಿ ಪಂಡಿತ್ ರವಿಶಂಕರ್, ಉಸ್ತಾದ್ ಅಲ್ಲಾ ರಖಾ ಮುಂತಾದವರ ಜೊತೆ
ನುಡಿಸಿದ್ದಾರೆ. ಇಂಗ್ಲೆಂಡ್, ಅಮೆರಿಕ, ಯೂರೋಪ್, ಕೆನಡಾಗಳಲ್ಲಿ ಪ್ರವಾಸ
ಮಾಡಿ ಕಚೇರಿಗಳಲ್ಲಿ ನುಡಿಸಿದ್ದಾರೆ. ಇವರು ವಾಗ್ಗೇಯಕಾರರೂ ಆಗಿದ್ದಾರೆ
ಇವರು ಮದ್ರಾಸ್ ವಿಶ್ವವಿದ್ಯಾನಿಲಯದ ಬಿ ಕಾಂ. ಪದವೀಧರರು. ಸಂಗೀತ ವಿದ್ಯಾ
ರತ್ನ, ಗಾನಕಲಾಭಾರತಿ, ಸಂಗೀತಕಲಾವಿಭೂಷಣ ಇತ್ಯಾದಿ ಬಿರುದಾಂಕಿತರು
ಗೋಪಾಲಕೃಷ್ಣ ಭಾರತಿ (೧೮೧೦-೧೮೯೬)-ಗೋಪಾಲಕೃಷ್ಣ ಭಾರತಿ
ತಮಿಳಿನ ವಾಗ್ಗೇಯಕಾರರಲ್ಲಿ ಅತ್ಯಂತ ಶ್ರೇಷ್ಠರು. ಇವರು ತಂಜಾವೂರು ಜಿಲ್ಲೆಯ
ಮುಡಿಕೊಂಡಾನ್ ಎಂಬಲ್ಲಿ ಜನಿಸಿದರು. ಭಾರದ್ವಾಜ ಗೋತ್ರದ ವಡಮ ಬ್ರಾಹ್ಮಣ
ಮನೆತನಕ್ಕೆ ಸೇರಿದವರು ಇವರ ಪೂರ್ವಿಕರು ಸಂಗೀತ ವಿದ್ವಾಂಸರಾಗಿದ್ದರು. ಇವರ
ತಂದೆ ಶಿವರಾಮಭಾರತಿ, ತಾತ ರಾಮಸ್ವಾಮಿಭಾರತಿ, ಮುತ್ತಾತ ವಳರ್ ಕೋದಂಡ
ರಾಮಭಾರತಿ ಎಲ್ಲರೂ ಸಂಸ್ಕೃತ ವಿದ್ವಾಂಸರೂ ವೈಣಿಕರೂ ಆಗಿದ್ದರು
 
ಚಿಕ್ಕಂದಿನಲ್ಲೇ ಮಾತಾಪಿತರನ್ನು ಕಳೆದುಕೊಂಡ ಗೋಪಾಲಕೃಷ್ಣ ಭಾರತಿಯ
ಜೀವನವು ಸುಗುಮವಾಗಿರಲಿಲ್ಲ. ಇವರು ತಂಜಾವೂರು ಜಿಲ್ಲೆಯ ಕೊತ್ತನೂರು
ದೇವಾಲಯದಲ್ಲಿ ಕೆಲವು ಕಾಲ ಪರಿಚಾರಕರಾಗಿದ್ದಾಗ ಇಲ್ಲಿಯ ಸರಸ್ವತೀ ದೇವಿಯು
ಪ್ರತ್ಯಕ್ಷಳಾಗಿ ಇವರನ್ನು ಅನುಗ್ರಹಿಸಿದಳೆಂದ ಶ್ರದ್ಧಾವಂತರು ಹೇಳುತ್ತಾರೆ.
ಗೋವಿಂದಯತಿ ಎಂಬುವರಲ್ಲಿ ವೇದಾಧ್ಯಯನ ಮಾಡಿದರು ಹಲವು ಭಾಷೆಗಳಲ್ಲಿ
ವಿದ್ವತ್ತನ್ನು ಗಳಿಸಿದರು ತಿರುವಡಮರುದೂರಿನ ಅಮರಸಿಂಹ ರಾಜನ ಪೋಷಣೆ
ಯಲ್ಲಿದ್ದ ರಾಮದಾಸರೆಂಬುವರಲ್ಲಿ ಸಂಗೀತ ಶಿಕ್ಷಣ ಪಡೆದರು. ಹಿಂದೂಸ್ಥಾನಿ
ಸಂಗೀತದ ಪಾಂಡಿತ್ಯದಿಂದ ಹಮಾರ್‌ ಕಲ್ಯಾಣಿ, ಬೇಹಾಗ್ ಮುಂತಾದ ಉತ್ತರಾದಿ
ರಾಗಗಳಲ್ಲಿ ಕೃತಿಗಳನ್ನು ರಚಿಸಿದರು. ನಂತರ ಅನತಾಂಡವಪುರದಲ್ಲ, ಅಣ್ಣು
ವಯ್ಯಾರ್‌ನ ಮಿರಾಸ್‌ದಾರರೊಬ್ಬರ ಪೋಷಣೆಯಲ್ಲಿ ಹಲವು ವರ್ಷಗಳ ಕಾಲ
ವಿದ್ದರು.
 
೩೦೩
 
ಭಾರತಿಯವರು ನೈಷ್ಟಿಕ ಬ್ರಹ್ಮಚಾರಿಗಳಾಗಿದ್ದು ಯೋಗಾಭ್ಯಾಸದಲ್ಲಿ ನಿರತ
ರಾಗಿದ್ದು ಏಕಾಂತ ಜೀವಿಗಳಾಗಿದ್ದರು. ಹರಿಕಥೆ ಮಾಡುವುದರಲ್ಲಿ ಪ್ರವೀಣರಾದ
ಮೇಲೆ ಹಲವು ಕಡೆ ಕಥಾಕಾಲಕ್ಷೇಪ ಮಾಡಲು ತೊಡಗಿದರು. ಕಥಾಕಾಲಕ್ಷೇಪಕ್ಕೆ
೬೦ ರೂ. ಶುಲ್ಕವನ್ನು ಕೊಡಬೇಕೆಂದು ಗೊತ್ತು ಮಾಡಿ, ಸಂಭಾವನೆಯನ್ನು ಆಗ
ತೆಗೆದುಕೊಳ್ಳದೆ ದಾನಧರ್ಮಗಳನ್ನು ಮಾಡಬೇಕಾಗಿ ಬಂದಾಗ ಚೀಟಿ ಬರೆದು
ಕಳುಹಿಸುತ್ತಿದ್ದರು. ಖರ್ಚಾಗದೇ ಉಳಿದಿದ್ದ ಹಣವನ್ನು ಚಿದಂಬರಂ ಮತ್ತು