This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ರಾಗಿದ್ದು ಯಕ್ಷಗಾನದಲ್ಲಿ ಕೀರ್ತಿ ಪಡೆದಿದ್ದರು. ಇಂತಹ ಸಂಗೀತಗಾರರ ಮನೆತನದಲ್ಲಿ
ಜನಿಸಿ ಕನ್ನಡಿಗರಾದ ಗುರುರಾವ್ ಹಿಂದೂಸ್ಥಾನಿ ಸಂಗೀತ ಪ್ರಪಂಚದಲ್ಲಿ ಹಿರಿಯ
ಕಲಾವಿದರಾಗಿದ್ದಾರೆ. ಗುರುರಾಯರು ಶಾಲೆಯಲ್ಲಿ ಓದುತ್ತಿದ್ದಾಗಲೇ ಸಂಗೀತಾಭ್ಯಾಸ
ವನ್ನು ಆರಂಭಿಸಿ ಮೊದಲು ದತ್ತೋಪಂತಜೋಷಿ ಮತ್ತು ಪಿತ್ರೆವಕೀಲರಲ್ಲಿ ಕಲಿತು
ನಂತರ ರಾಮಕೃಷ್ಣ ಬುವಾ ವರೆ ಅವರ ಶಿಷ್ಯರಾಗಿ ದೀರ್ಘಕಾಲ ಪ್ರೌಢ ಶಿಕ್ಷಣ
ಪಡೆದರು. ಭಾರತದ ಬಿಂದೂರಾಯರಲ್ಲಿ ಗಮಕಕಲೆಯನ್ನು ಅಭ್ಯಾಸಮಾಡಿ ಕನ್ನಡ
ಸಾಹಿತ್ಯ ಪರಿಷತ್ತಿನಲ್ಲಿ ಗಮಕ ಶಿಕ್ಷಣದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.
ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ಸಂಗೀತದ ಉಪ ನಿರ್ಮಾಪಕರಾಗಿದ್ದು
೧೯೭೦ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿಯ
ಗುರುರಾಯರು ಮನಮೋಹಕವಾದ ಶಾರೀರವುಳ್ಳ ರಸಿಕರ
ಮನಸ್ಸನ್ನು ಸೂರೆಗೊಳ್ಳುವ ಹಿರಿಯ ಗಾಯಕರು,
 
೧೯೬೬ರಲ್ಲಿ ನಿವೃತ್ತರಾದರು.
ಪ್ರಶಸ್ತಿ ದೊರಕಿತು.
 
DEE
 
ಗುರುಂಜಿ :-ಇದು ಪಾರ್ಶ್ವದೇವನ 'ಸಂಗೀತ ಸಮಯಸಾರ' ವೆಂಬ ಗ್ರಂಥ
ದಲ್ಲಿ ಉಕ್ತವಾಗಿರುವ ಒಂದು ಷಾಡವ ರಾಗ,
 
ಗುರುವಿರಾಮ-ಇದು ಕರ್ಣಾಟಕ ಸಂಗೀತದ ತಾಳಪದ್ಧತಿಯ ಮೋಡ
ಶಾಂಗಗಳಲ್ಲಿ ಒಂದು ಅಂಗ. ಇದರ ಕಾಲ ಪ್ರಮಾಣವು ಎರಡೂಕಾಲು ಮಾತ್ರೆಗಳು
ಅಧವಾ ೯ ಅಕ್ಷರಕಾಲ,
 
ಗುರುಸ್ವಾಮಿ ದೇಶಿಕರ್ (೧೯ ನೆ ಶ.)-ಇವರು ತಮಿಳುನಾಡಿನ ತಂಜಾ
ವೂರು ಜಿಲ್ಲೆಯ ತಿರುವಾರೂರಿನಲ್ಲಿದ್ದರು. ತಮಿಳಿನ ತೇವಾರಂ ಗೀತೆಗಳನ್ನು
ಹಾಡುವುದರಲ್ಲಿ ಪ್ರಸಿದ್ಧರಾಗಿದ್ದ ವಿದ್ವಾಂಸರಾಗಿದ್ದರು.
 
ಗುಹದಾಸ-ಪ್ರಸಿದ್ಧ ಗಾಯಕರೂ, ವಾಗ್ಗೇಯಕಾರರೂ ಆಗಿದ್ದ ಮಹಾ
ವೈದ್ಯನಾಥ ಅಯ್ಯರ್ ಮತ್ತು ಅವರ ಸಹೋದರರು ತಮ್ಮ ರಚನೆಗಳಲ್ಲಿ ಬಳಸಿರುವ
ಮುದ್ರೆ,
 
ಗುಹಪ್ರಿಯ-ಈ ರಾಗವು ೧೬ ನೆ ಮೇಳಕರ್ತ ಚಕ್ರವಾಕದ ಒಂದು ಜನ್ಯ
 
ಆ .
 
ಸ ರಿ ಗಾ ಮ ಸ ಪ ಮ ದ ನಿ ಸ
ಅ . ಸ ನಿ ದಾ ಪ ಮ ಗ ಸ ರಿ ಸ
ಗರ್ಜರಿಕಾ-ಸೋಮನಾಧನ ( ರಾಗವಿಧ > ವೆಂಬ ಗ್ರಂಥದಲ್ಲಿ
ಉಕ್ತವಾಗಿರುವ ಒಂದು ರಾಗ
 
ರಾಗ,
 
ಗೂಡಾ-ಇದು ಭಾವಭಟ್ಟನ ಶ್ರುತಿ ಪದ್ಧತಿಯಲ್ಲಿ ಷಡ್ಡದ ಮೂರನೆಯ
ಶ್ರುತಿಯ ಹೆಸರು.
 
ಗೆಟ್ಟು ವಾದ್ಯ ಇದು ದಕ್ಷಿಣ ಭಾರತದ ಅಪರೂಪವಾದ ಒಂದು ತಂತಿ
ವಾದ್ಯ ಹಾಗೂ ತಾಳವಾದ್ಯ. ಇದು ತಂಬೂರಿಯಂತಿದ್ದು ನಾಲ್ಕು ತಂತಿಗಳನ್ನು