This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸ್ತುತಿಸಿದರು. ಸುಬ್ರಹ್ಮಣ್ಯನು ಇವರಿಗೆ ಒಬ್ಬ ವೃದ್ಧನ ರೂಪದಲ್ಲಿ ದರ್ಶನವಿತ್ತು
ಬಾಯನ್ನು ತೆರೆಯುವಂತೆ ಹೇಳಿ ಕಲ್ಲು ಸಕ್ಕರೆಯ ಚೂರೊಂದನ್ನು ಹಾಕಿ ಅದೃಶ್ಯ
ನಾದನು. ದೀಕ್ಷಿತರಿಗೆ ಸಂಗೀತ ಲೋಕದ ಸಂಪೂರ್ಣ ಜ್ಞಾನವು ಉಂಟಾಯಿತು
ತಕ್ಷಣವೇ ವಾಗ್ಗೇಯಕಾರರಾದರು. ಅವರು ಪ್ರಧಮವಾಗಿ ರಚಿಸಿದ ಕೃತಿ ಮಾಯಾ
ಮಾಳವಗೌಳರಾಗದ (ಆದಿತಾಳ) - ಶ್ರೀನಾಥಾದಿ ಗುರುಗುಹೋ ಜಯತಿ ' ಎಂಬುದು.
ಕೃತಿ ರಚನೆಗೆ ಗುಹನು ಇವರಿಗೆ ಗುರುವಾದುದರಿಂದ ದೀಕ್ಷಿತರು - ಗುರುಗುಹ ' ಎಂಬ
ಅಂಕಿತವನ್ನು ಬಳಸಿದರು.
 
6
 
ಗುರುಗುಹಗಾನಾಮೃತವರ್ಷಿಣಿ-ಮುತ್ತು ಸ್ವಾಮಿದೀಕ್ಷಿತರ ಕಮಲಾಂಬ
ನವಾವರಣ ಕೀರ್ತನೆಗಳನ್ನು ಸ್ವರಲಿಪಿಸಹಿತ ತಮಿಳಿನಲ್ಲಿ ಕಲ್ಲಿಡೈ ಕುರುಚಿ ವೇದಾಂತ
ಭಾಗವತರೆಂಬುವರು (೧೯೩೬) ಪ್ರಕಟಿಸಿದ ಗ್ರಂಥದ ಹೆಸರು.
 
ಗುರುಜೋತಿ-ಈ ರಾಗವು ೬೧ನೆ ಮೇಳಕರ್ತ ಕಾಂತಿ ಮತಿಯ ಒಂದು
 
ಜನ್ಯರಾಗ,
 
ಸ ರಿ ಗ ಮ ದ ಸ
ಅ : ಸ ದ ಮ ಗ ರಿ ಸ
 
ಗುರುದೇವ -ಜಗದ್ವಿಖ್ಯಾತ ಕವಿ ಮತ್ತು ವಾಗ್ಗೇಯಕಾರರಾಗಿದ್ದ ರವೀಂದ್ರ
ನಾಥರಾಕೂರರನ್ನು ಗುರುದೇವ ಎಂದು ಎಲ್ಲರೂ ಕರೆಯುತ್ತಿದ್ದರು.
ಗುರುದ್ರುತ ಕರ್ಣಾಟಕ ಸಂಗೀತದ ತಾಳಪದ್ಧತಿಯ ಷೋಡಶಾಂಗಗಳಲ್ಲಿ
ಇದು ಒಂದು ಅಂಗ ಇದರ ಕಾಲಪ್ರಮಾಣವು ಎರಡೂವರೆ ಮಾತ್ರೆಗಳು ಅಥವಾ
ಹತ್ತು ಅಕ್ಷರಕಾಲ.
 
-
 
ಗುರುದ್ರುತವಿರಾಮ-ಇದು ಕರ್ಣಾಟಕ ಸಂಗೀತದ ತಾಳವದ್ಧತಿಯ
ಷೋಡಶಾಂಗಗಳಲ್ಲಿ ಒಂದು ಅಂಗ. ಇದರ ಕಾಲಪ್ರಮಾಣವು ಎರಡೂಮುಕ್ಕಾಲು
ಮಾತ್ರೆಗಳು ಅಥವಾ ಹನ್ನೊಂದು ಅಕ್ಷರಕಾಲ
 
ಗುರುಪರಂಪರೆ
 
ಅರಿಯಕುಡಿ ರಾಮಾನುಜ
 
ಪ್ರಸಿದ್ಧರಾದ ಸಂಗೀತ ವಿದ್ವಾಂಸರು ತಮ್ಮ ಗುರುಗಳ
ಪೀಳಿಗೆಯನ್ನು ಹೇಳಿಕೊಳ್ಳಲು ಹೆಮ್ಮೆಪಡುವುದುಂಟು.
ಅಯ್ಯಂಗಾರರ ಗುರು ರಾಮನಾಡ್ ಶ್ರೀನಿವಾಸಯ್ಯಂಗಾರ್, ಮೈಸೂರು ವಾಸು
ದೇವಾಚಾರ್ಯರ ಮತ್ತು ರಾಮನಾಡ್ ಶ್ರೀನಿವಾಸ ಅಯ್ಯಂಗಾರರ ಗುರು ಪಟ್ಟ
ಸುಬ್ರಹ್ಮಣ್ಯ ಅಯ್ಯರ್, ಅವರ ಗುರು ಮಾನಂಬುಚಾವಡಿ ವೆಂಕಟಸುಬ್ಬಯ್ಯರ್.
ಅವರ ಗುರು ಸಂಗೀತದ ತ್ರಿರತ್ನರಲ್ಲಿ ಒಬ್ಬರಾದ ತ್ಯಾಗರಾಜರು. ಗುರುಗಳ
ಪೀಳಿಗೆಯನ್ನು ಗುರು ಪರಂಪರೆ ಎಂದು ಹೇಳುವುದು ರೂಢಿ. ಹೀಗೆಯೇ ಶಿಷ್ಯರನ್ನು
ಹೇಳಿದರೆ ಅದು ಶಿಷ್ಯ ಪರಂಪರೆ.
 
ಗುರುಪುರಂದರವಿಠಲ-ಇದು ಪುರಂದರದಾಸರ ಎರಡನೆಯ ಪುತ್ರ ತನ್ನ
ಕೃತಿಗಳಲ್ಲಿ ಬಳಸಿರುವ ಅಂಕಿತ.