This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಮುತ್ತು ಸ್ವಾಮಿ ದೀಕ್ಷಿತರು ರಚಿಸಿರುವ " ನಮೋ ನಮಸ್ತೆ' ಎಂಬ ಕೃತಿಯು ಈ
 
ರಾಗದಲ್ಲಿದೆ.
 
೨೪
 

 
ಗ್ರೀವಾ ಭೇದಗಳು-
ಭರತನಾಟ್ಯದಲ್ಲಿ ಗ್ರೀವಾ ಭೇದಗಳೆಂದರೆ ಕತ್ತಿನ

ಚಲನೆಗಳು. ಭರತಮುನಿ ಹೇಳಿರುವ ಭೇದಗಳು ಒಂಭತ್ತು ವಿಧ. ಅವು ಸಮ,

ನತ, ಉನ್ನತ, ತ್ರಶ್ರ, ರೇಚಿತ, ಕುಂಚಿತ, ಅಂಚಿತ, ವಲಿತ ಮತ್ತು ನಿವೃತ್ತ.

ನಂದಿಕೇಶ್ವರನ ರೀತ್ಯಾ ಗ್ರೀವಾ ಭೇದಗಳು ನಾಲ್ಕು, ಅವು ಸುಂದರಿ, ತಿರನ,

ಪರಿವರ್ತಿತಾ ಮತ್ತು ಪ್ರಕಂಪಿತ.
 

 
ಗ್ರೀಷ್ಠಾಮಾವಳಿ-
ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು
 
ಜನ್ಯರಾಗ,
 

 

ಸ ರಿ ಗ ಮ ಪ ಸ

ಸ ನಿ ದ ಮ ಗ ರಿ ಸ
 

 
ಗು-
ಸಪ್ತ ಸ್ವರಗಳ ಸ್ವರಸ್ಥಾನ ಸೂಚಕಗಳಲ್ಲಿ ಅಂತರ ಗಾಂಧಾರದ

ಸಂಜ್ಞಾಸೂಚಕ ಅಕ್ಷರ. ೨೨ ಶ್ರುತಿಗಳಲ್ಲಿ ಅಂತರ ಗಾಂಧಾರ ಶ್ರುತಿ ಅಥವಾ

ಮೂರನೆಯ ಶ್ರುತಿಯನ್ನು ಸೂಚಿಸುವ ಸಂಜ್ಞಾ ಕ್ಷರ.
 

 
ಗುಜ್ಜರಿ-
ಈ ರಾಗವು ೧೫ನೆ ಮೇಳಕರ್ತ ಮಾಯಾಮಾಳವಗೌಳದ ಒಂದು

ಜನ್ಯರಾಗ, ಇದಕ್ಕೆ ಮುರ್ಜರಿ ಎಂದೂ ಹೆಸರು.
 

ಸ ರಿ ಗ ಮ ಪ ದ ನಿ ಸ
 

ಸ ದ ನಿ ಪ ಮ ಗ ರಿ ಸ
 

ಬೃಹದ್ಧರ್ಮ ಪುರಾಣ, ಸಂಗೀತ ಮಕರಂದ, ಸಂಗೀತ ರತ್ನಾಕರ ಇತ್ಯಾದಿ ಗ್ರಂಧಗಳಲ್ಲಿ

ಉಕ್ತವಾಗಿರುವ ಪುರಾತನ ರಾಗ, ಬೇರೆ ಬೇರೆ ಪ್ರದೇಶಗಳಲ್ಲಿ ಈ ರಾಗವು ಪ್ರಚಲಿತ

ವಾಗಿದ್ದು ದ್ರಾವಿಡ ಗುಜ್ಜರಿ, ದಕ್ಷಿಣ ಗುಜ್ಜರಿ, ಮಹಾರಾಷ್ಟ್ರ ಗುಜ್ಜರಿ, ಸೌರಾಷ್ಟ್ರ

ಗುಜ್ಜರಿ ಎಂಬ ಹೆಸರಿದ್ದಿತು. ಜಯದೇವನ ಒಂದು ಅಷ್ಟ ಪದಿಯು ಈ ರಾಗದಲ್ಲಿದೆ.

ಈ ರಾಗದಲ್ಲಿ ತ್ಯಾಗರಾಜರ * ವರಾಲಂದು ಕೊಮ್ಮನಿ (ಆದಿ) ಎಂಬ ಕೃತಿಯು

ಪ್ರಸಿದ್ಧವಾಗಿದೆ
 

 
ಗುಣಕರಿ-
ಇದು ಹಂಸವಿಲಾಸ ಎಂಬ ಗ್ರಂಥದಲ್ಲಿ ಉಕ್ತವಾಗಿರುವ ಭೈರವದ

ಒಂದು ಜನ್ಯರಾಗ,
 
ಜನ್ಯರಾಗ,
 

 
ಗುಣಪ್ರಿಯ-
ಈ ರಾಗವು ೧೬ನೆ ಮೇಳಕರ್ತ ಚಕ್ರವಾಕದ ಒಂದು

ಸ ರಿ ಗಾ ಮ ಸ ಪ ಮ ದ ನಿ ಸ

ಸ ದ ನಿ ಪ ಮ ಗ ಸ ರಿ ಸ
 

 
ಗುಣಭೂಷಣಿ
ಈ ರಾಗವು ೩೭ನೆ ಮೇಳಕರ್ತ ಸಾಳಗದ ಒಂದು
 
ಜನ್ಯರಾಗ,