This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಕಾವ್ಯಗಳನ್ನು ಹಲವರು ರಚಿಸಿದಾ ರೆ. ಇಂತಹವುಗಳಲ್ಲಿ ವೆಂಕಟಮಖಿಯ
ತ್ಯಾಗರಾಜಾಷ್ಟಪದಿ, ಶಾಹಜೀಯ ಅಷ್ಟಪದೀಕಾವ್ಯ, ಉಪನಿಷದ್ ಬ್ರಹ್ಮನ
ರಾಮಾಷ್ಟಪದಿ, ಚಂದ್ರಶೇಖರೇಂದ್ರ ಸರಸ್ವತಿಯ ಶಿವಾಷ್ಟ ಪದಿ, ಮೈಸೂರಿನ ವೆಂಕಟಪ್ಪ
ನಾಯಕನ ಶಿವಾಷ್ಟಪದಿ ಮುಂತಾದುವುಗಳನ್ನು ಹೆಸರಿಸಬಹುದು. ಕನ್ನಡದಲ್ಲಿ ಚಿಕ್ಕ
ದೇವರಾಜ ಒಡೆಯರ ಗೀತಗೋಪಾಲ ಮತ್ತು ತಿರುಮಲಾರ್ ವಿರಚಿತ ಚಿಕ್ಕದೇವ
ರಾಯ ಸಪ್ತಪದಿ, ಕಳಲೆ ನಂಜರಾಜ ವಿರಚಿತ ಸಂಸ್ಕೃತದ ಗೀತಗಂಗಾಧರ ಇವು
 
ಕರ್ಣಾಟಕದ ಕೊಡುಗೆಗಳು.
 
ಗೀತಸುಂದರಂ-ಇದು ಸದಾಶಿವ ದೀಕ್ಷಿತರು ಶಿವ ಮತ್ತು ಪಾರ್ವತಿ
ತಿಯನ್ನು
ಕುರಿತು ಜಯದೇವ ಕವಿಯ ಗೀತ ಗೋವಿಂದ ಕಾವ್ಯದ ಮಾದರಿಯಲ್ಲಿ ರಚಿಸಿರುವ
ಸಂಸ್ಕೃತ ಕಾವ್ಯ.
 
ಗೀತಶಂಕರ -ಜಯದೇವನ ಗೀತ ಗೋವಿಂದ ಕಾವ್ಯದ ಮಾದರಿಯಲ್ಲಿ
ಅನಂತನಾರಾಯಣ ಎಂಬ ಕವಿ ರಚಿಸಿರುವ ಒಂದು ಸಂಸ್ಕೃತ ಕಾವ್ಯ. ಇದು
ತಂಜಾವೂರಿನ ಸರಸ್ವತಿ ಮಹಲ ಗ್ರಂಥಾಲಯದಲ್ಲಿದೆ.
 
ಗೀತಾನುಗ-ಗಾಯನದಲ್ಲಿ ಪಕ್ಕವಾದ್ಯಗಳಾಗಿ ನುಡಿಸಲಾಗುವ ವಾದ್ಯಗಳಿಗೆ
ಗೀತಾನುಗವೆಂದು ಹೆಸರು. ಪಿಟೀಲು, ಸಾರಂಗಿ, ಹಾರ್ಮೋನಿಯಂ ವಾದ್ಯಗಳು
 
ಗೀತಾ ನುಗ.
 
ಗೀತಾಯನ-ಸಂಗೀತ ವಾದ್ಯಗಳಾದ ವೀಣೆ
ಮುಂತಾದುವು ಗೀತಾಯನ ವಾದ್ಯಗಳು.
 
ಗೀರ್ವಾಣಪದ-ಈ ರಾಗವು ೭೨ನೆ ಮೇಳಕರ್ತ ರಸಿಕಪ್ರಿಯದ ಒಂದು
 
ಜನ್ಯರಾಗ,
 
ಅ.
 
9.9.:
 
ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ
 
ಗೀರ್ವಾಣಪ್ರಿಯ-ಈ ರಾಗವು ೨೯ನೆ ಮೇಳಕರ್ತ ಧೀರಶಂಕರಾಭರಣದ
ಒಂದು ಜನ್ಯರಾಗ.
 
ಸ ರಿ ಗ ಮ ದ ಸ
 
ಸ ನಿ ದ ಮ ಗ ರಿ ಸ
 
ಗೀರ್ವಾಣಿ-(೧) ಈ ರಾಗವು ೪೩ನೆ ಮೇಳಕರ್ತ ಗವಾಂಭೋದಿಯ
 
ಒಂದು ಜನ್ಯರಾಗ.
 
೨೯೩
 

 
ಸ ರಿ ಗ ರಿ ಮ ಗ ಮ ದ ನಿ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
 
1
 
ಮತ್ತು ಕೊಳಲೇ
 
(೨) ಅಸಂಪೂರ್ಣ ಮೇಳ ಪದ್ಧತಿಯಲ್ಲಿ ಇದು ೪೩ನೆ ರಾಗಾಂಗರಾಗ
ಪ ದ ನಿ ದ ಪ ದ ಸ
 

 
ಸ ರಿ ಗ ಮ
ಸ ನಿ ದ ಪ
 
ಮ ಗ ರಿ ಸ