This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಆಗುವುದಿಲ್ಲ. ಆದರೆ ತನಗೆ ಮಾತ್ರ ತೀವ್ರ ವ್ಯಥೆಯಾಗಿದೆ ಎಂದು ರಾಧೆಯು

ಪ್ರಲಾಪಿಸುವಳು.
 
೨೯!
 
ಎಂಟನೆಯ ಸರ್ಗ - ವಿಲಕ್ಷ ಲಕ್ಷ್ಮೀಪತಿ-ಅಷ್ಟಪದಿ-೧೭-

ಸಿ
ರಾತ್ರಿಯು ಕಳೆದು ಬೆಳಗಾಯಿತು. ರಾಧೆಗೆ ಬಹಳ ಕೋಪ ಬಂದಿತು. ಆ ವೇಳೆಗೆ

ಸರಿಯಾಗಿ ಕೃಷ್ಣನು ಅವಳ ಬಳಿ ಬಂದು ತನ್ನನ್ನು ಕ್ಷಮಿಸಬೇಕೆಂದು ಕೇಳುವನು.

ಆದರೂ ರಾಧೆಯು ಅವನನ್ನು ಕಟುವಾಗಿ ಟೀಕಿಸುವಳು.
 

ಒಂಭತ್ತನೆಯ ಸರ್ಗ

ಕೃಷ್ಣನು ನಿರಾಶನಾಗಿ ಹೊರಟು ಹೋಗುವನು.
 

ಮುಗ್ಧಮುಕುಂದ- ಅಷ್ಟ ಪದಿ-೧೮-

ಅದನ್ನು ಕಂಡ ಸಖಿಯು ರಾಧೆ

ಯನ್ನು ಅವಳು ಮಾಡಿದ ಕೆಲಸವು ತಪ್ಪೆಂದೂ, ಅದರಿಂದ ಕೃಷ್ಣನು ಕೋಪಗೊಂಡು

ಬರದೇ ಹೋದರೆ ಏನು ಮಾಡುವೆ ಎಂದು ಹೀಯ್ಯಾಳಿಸುವಳು.
 

ಹತ್ತನೆಯ ಸರ್ಗ-ಚತುರ ಚತುರ್ಭುಜ-ಅಷ್ಟಪದಿ ೧೯ ಆದರೆ

ಆ ದಿನ ಸಂಜೆ ಕೃಷ್ಣನು ಮರಳಿ ರಾಧೆಯ ಬಳಿ ಬಂದು ನಡೆದುದನ್ನು ಮರೆತು

ಬಿಡುವಂತೆ ಕೇಳಿಕೊಳ್ಳುವನು
 
-
 

ಹನ್ನೊಂದನೆಯ ಸರ್ಗ ಸಾನಂದದಾಮೋದರ - ಅಷ್ಟ ಪದಿ

೨೦-೨೨-ಸಖಿಯು ರಾಧೆಯ ಅದೃಷ್ಟವನ್ನು ಕೊಂಡಾಡುವಳು. ಕೃಷ್ಣನನ್ನು

ಮಾಮೂಲು ಸ್ಥಳದಲ್ಲಿ ಸಂಧಿಸಬೇಕೆಂದು ರಾಧೆಯನ್ನು ಪ್ರೇರೇಪಿಸುವಳು. ರಾಧೆಯು

ಶೃಂಗರಿಸಿಕೊಂಡು ಹೊರಟು ಕೃಷ್ಣನನ್ನು ಲತಾಗೃಹದ ಬಳಿ ಸಂಧಿಸುವಳು.

ಹನ್ನೆರಡನೆ ಸರ್ಗ-ಸುಪ್ರೀತ ಪೀತಾಂಬರ-ಅಷ್ಟ ಪದಿ-೨೩-೨೪-

ರಾಧೆಯ ಜೊತೆಯಲ್ಲಿ ಬಂದ ಸಖಿಯರೆಲ್ಲರೂ ಒಂದೊಂದು ನೆಪ ಹೇಳಿ ಹೊರಟು

ಹೋಗುವರು. ರಾಧಾಕೃಷ್ಣರು ಆನಂದದಿಂದ ಕೂಡಿ ನಲಿಯುತ್ತಾರೆ.

ಗೀತ ಗೋವಿಂದದ ೨೪ ಅಷ್ಟಪದಿಗಳೂ ಅಭಿನಯಕ್ಕೆ ಯೋಗ್ಯವಾಗಿವೆ.

ಇದರ ಪ್ರತಿಯೊಂದು ಮಾತಿಗೂ ಅಭಿನಯವನ್ನು ಸೂಚಿಸುವ ವ್ಯಾಖ್ಯಾನಗಳಿವೆ.

ಅಪ್ರಮೇಯಶಾಸ್ತ್ರಿ ಮತ್ತು ಪೆರಿಯಸ್ವಾಮಿ ತಿರುಮಲಾಚಾರರು ಅಷ್ಟಪದಿಗಳಿಗೆ

ಟೀಕನ್ನು ಕನ್ನಡದಲ್ಲಿ ಬರೆದಿದ್ದಾರೆ.
 

ಗೀತಗೋವಿಂದವು ನಮ್ಮ ಸಂಗೀತ ಸಾಹಿತ್ಯ ಸಂಸ್ಕೃತಿಗಳ ಮೇಲೆ ಬಹುವಾಗಿ

ಪ್ರಭಾವ ಬೀರಿದೆ.

ಇದೇ ಹೆಸರು ಮತ್ತು ವಸ್ತುವನ್ನುಳ್ಳ ಅನೇಕ ಕಾವ್ಯಗಳನ್ನು

ಸಂಸ್ಕೃತ ಮತ್ತು ದೇಶ ಭಾಷೆಗಳಲ್ಲಿ ಹಲವರು ರಚಿಸಿದ್ದಾರೆ ಹರಿಶಂಕರನ

ಗೀತರಾಘವ, ಪ್ರಭಾಕರನ ಗೀತರಾಘವ, ಭಾನುದತ್ತನ ಗೀತ ಗೌರೀಪತಿ, ಕಲ್ಯಾಣ

ಕವಿಯ ಗೀತಗಂಗಾಧರ, ರಾಮಭಟ್ಟನ ಗೀತ ಗಿರೀಶ, ವಂಶ ಮಣಿಯ ಗೀತದಿಗಂಬರ,

ಚತುರ್ಭುಜನ ಗೀತಗೋಪಾಲ, ಪುರುಷೋತ್ತಮ ಮಿಶ್ರನ ಅಭಿನವ ಗೀತಗೋವಿಂದ,

ಸದಾಶಿವ ದೀಕ್ಷಿತನ ಗೀತಸುಂದರಂ, ಅನಂತ ನಾರಾಯಣನ ಗೀತಶಂಕರಂ,

ತಿರುಮಲನ ಗೀತಗೌರಿ ಮುಂತಾದುವು ಇಂತಹ ಕಾವ್ಯಗಳು, ಹೀಗೆಯೇ ಗೇಯ