This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಅಷ್ಟ ಪದಿಗಳ ಗಾಯನವು ದಕ್ಷಿಣ ಭಾರತದಲ್ಲಿ ಪ್ರಾರಂಭವಾದುದು ೧೭ನೆ
ಶತಮಾನದಲ್ಲಿ. ತಮಿಳುನಾಡು, ಆಂಧ್ರ, ಕೇರಳ, ಕರ್ಣಾಟಕದಲ್ಲಿ ಏಕರೂಪವಾದ
ಶೈಲಿಯ ಗಾಯನ ಕಂಡುಬರುವುದಿಲ್ಲ. ಒಂದೊಂದು ಪ್ರದೇಶದಲ್ಲಿ ಭಿನ್ನತೆ ಕಂಡು
ಬರುತ್ತದೆ.
 
೨೯೧
 
ಗೀತಗೋವಿಂದದ ಒಂದೊಂದು ಸರ್ಗದ ಹೆಸರೂ ಮನೋಹರವಾಗಿದೆ.
ಕೃಷ್ಣನು ಕಾವ್ಯದ ಏಕೈಕ ನಾಯಕ, ಅವನ ಸ್ವಭಾವ ಧೀರಲಲಿತ ಮತ್ತು ಕಾವ್ಯದ
ಕ್ರಿಯೆ ಕೃಷ್ಣನ ಶೃಂಗಾರ ಎಂಬುದು ಈ ಹೆಸರುಗಳಿಂದಲೇ ಹೇಳಬಹುದು. ಗೀತ
ಗೋವಿಂದದ ಸರ್ಗಗಳ ತಾತ್ಪರ್ಯವನ್ನು ಹೀಗೆ ಸಂಗ್ರಹಿಸಬಹುದು-
ಪ್ರಥಮ
ಈ ಸರ್ಗದ ಮೊದಲಲ್ಲೇ
 
ಸರ್ಗ-ಸಾಮೋದದಾಮೋದರಂ-ಅಷ್ಟ ಪದಿಗಳು-೧-೪
ದಶಾವತಾರಗಳನ್ನು ಮಾಡಿದ ಕೃಷ್ಣನಿಗೆ ನಮಸ್ಕಾರವಿದೆ.
ಜಯಜಗದೀಶ ಹರೇ ಎಂಬ ಪಲ್ಲವಿಯಿಂದ ದಶಾವತಾರಗಳನ್ನು ವರ್ಣಿಸಲಾಗಿದೆ.
ವಸಂತಋತುವಿನ ವರ್ಣನೆ, ಕೃಷ್ಣನು ಗೋಪಿಕಾಸ್ತ್ರೀಯರೊಂದಿಗೆ ಕಾಲಕಳೆಯು
ತಿದ್ದುದನ್ನು ಸಖಿಯು ರಾಧೆಗೆ ವರ್ಣಿಸುತ್ತಾಳೆ.
 
-
 
ಎರಡನೆಯ ಸರ್ಗ- ಆಕ್ಷೇಶ ಕೇಶವ-ಅಷ್ಟ ಪದಿಗಳು - ೫-೬
ತಾನೊಬ್ಬಳೇ ಕೃಷ್ಣನ ಪ್ರೇಮಕ್ಕೆ ಅರ್ಹಳು ಎಂಬ ರಾಧೆಯ ಅಹಂಭಾವವು ನಶಿಸಿ
ಹೋಗುವುದು. ಕೃಷ್ಣನಲ್ಲಿ ಏನೇ ತಪ್ಪಿದ್ದರೂ ಅವನೊಂದಿಗೆ ಇದ್ದ ಸವಿನೆನಪುಗಳನ್ನು
ಮರೆಯಲಾಗದೆಂದು ರಾಧೆ ತನ್ನ ಸಖಿಗೆ ಹೇಳುತ್ತಾಳೆ. ಹೇಗಾದರೂ ಮಾಡಿ
ಕೃಷ್ಣನನ್ನು ಸಂಧಿಸಲು ಏರ್ಪಾಡು ಮಾಡಬೇಕೆಂದು ಹೇಳುತ್ತಾಳೆ.
ಮೂರನೆಯ ಸರ್ಗ-ಮುಗ್ಧ ಮಧುಸೂದನ
ಕೃಷ್ಣನು ರಾಧೆಯನ್ನು ಮರೆತುದಕ್ಕೆ ಪಶ್ಚಾತ್ತಾಪ ಪಡುತ್ತಾನೆ.
 
ಅಷ್ಟಪದಿ-೭
 
ನಾಲ್ಕನೆಯ ಸರ್ಗ-ಸ್ನಿಗ್ಧ ಮಧುಸೂದನ-ಅಷ್ಟ ಪದಿ-೮-೯
ಸಖಿಯು ರಾಧೆಯ ಮನಸ್ಸಿನ ಹೊಯ್ದಾಟವನ್ನು ಕೃಷ್ಣನಿಗೆ ತಿಳಿಸುತ್ತಾಳೆ.
 
ಐದನೆ ಸರ್ಗ-ಸಾಕಾಂಕ್ಷ ಪುಂಡರೀಕಾಕ್ಷ - ಅಷ್ಟ ಪದಿ- ೧೦-೦೧
ರಾಧೆಯನ್ನು ಸಂತೈಸಿ ಕರೆತರುವಂತೆ ಕೃಷ್ಣನು ಸಖಿಗೆ ಹೇಳುತ್ತಾನೆ. ಸಖಿಯು
ರಾಧೆಯನ್ನು ಕಂಡು ಕೃಷ್ಣನ ಅಭೀಷ್ಟವನ್ನು ತಿಳಿಸುತ್ತಾಳೆ.
 
ಆರನೆಯ ಸರ್ಗ-ದೃಷ್ಟ ವೈಕುಂಠ (ಸೋತ್ಕಂಠ ಕುಂಠ)- ಅಮ್ಮ
ಪದಿ-೧೨-ಸಖಿಯು ಪುನಃ ಕೃಷ್ಣನ ಬಳಿಗೆ ಬಂದು ರಾಧೆಯ ಮನಸ್ಸು ಸ್ಥಿಮಿತ
ವಿಲ್ಲದ ಪ್ರಯುಕ್ತ ಅವಳಿಗೆ ಕೃಷ್ಣನ ಬಳಿ ಬರಲು ಸಾಧ್ಯವಿಲ್ಲವೆಂದೂ, ಕೃಷ್ಣನೇ
ಆಕೆಯ ಬಳಿ ಹೋಗಬೇಕೆಂದೂ ತಿಳಿಸುತ್ತಾಳೆ.
 
ಏಳನೆಯ ಸರ್ಗ- ನಾಗರನಾರಾಯಣ (ನಾಗರಿಕನಾರಾಯಣ)
ಅಷ್ಟ ಪದಿ-೧೩-೧೬ - ಚಂದ್ರೋದಯವಾಗಿದೆ. ಕೃಷ್ಣನು ತನ್ನ ಬಳಿಗೆ ಬರಲಿಲ್ಲ.
ಮತ್ತಾರೋ ಗೋಪಿಗೆ ಕೃಷ್ಣನ ಸಹವಾಸ ಲಭಿಸಿದೆ. ಆಕೆಗೆ ತನ್ನಂತೆ ವ್ಯಥೆಯೇನೂ