2023-07-03 14:45:13 by jayusudindra
This page has been fully proofread once and needs a second look.
ಸಂಕಲ್ಪವಿನಾ ಶ್ರೀ ಕೃಷ್ಣನ ಅನುಗ್ರಹವು ಎಂದಿಗೂ ಲಭಿಸಲಾರದು. ಆಕೆ ಜೀವರ
ಬಂಧವಿಮೋಚನೆ ಮಾಡಿ, ಅವರಿಗೆ ಮೋಕ್ಷವನ್ನೀಯುವಂತೆ ತನ್ನ ಪತಿಯಾದ
ಶ್ರೀ ಕೃಷ್ಣನಲ್ಲಿ ಬಿನ್ನಿಸಿಕೊಳ್ಳುತ್ತಾಳೆ. ಗೀತಗೋವಿಂದದಲ್ಲಿ ಸಾರಿರುವ ತತ್ವವು
ಭಗವದ್ಗೀತೆಯಲ್ಲಿ ಅಡಗಿದೆ ಎಂದು ವಿದ್ವಾಂಸರ ಅಭಿಪ್ರಾಯ. ಇದಕ್ಕೆ ನಿದರ್ಶನವಾಗಿ
ಗೀತಗೋವಿಂದದಲ್ಲಿ ನಾಲ್ಕನೆಯ ಸರ್ಗದ ಒಂಭತ್ತನೆಯ ಶ್ಲೋಕವೂ, ಭಗವದ್ಗೀತೆಯ
ಐದನೆಯ ಸರ್ಗದ ಒಂಭತ್ತನೆಯ ಶ್ಲೋಕವೂ ಒಂದೇ ತತ್ವವನ್ನು ಸಾರುತ್ತವೆ.
ಎಂದಿದ್ದಾರೆ. ಭಗವದ್ಗೀತೆಯು ವೇದಾಂತ ಸ್ವರೂಪ. ಗೀತಗೋವಿಂದವು ದೈವಿಕ
ಶೃಂಗಾರ ಸ್ವರೂಪ
BUT
ವಂತೆ ಮಾಡಲು ಪದಗಳ ಅಪೂರ್ವ ಜೋಡಣೆ. ಇಲ್ಲಿಯ ಪದಲಾಲಿತ್ಯವನ್ನು
ಮೆಚ್ಚಬೇಕಾದರೆ ಸಂಸ್ಕೃತದ ಮೂಲಗ್ರಂಥವನ್ನು ಓದಬೇಕು. ಮೂಲದಲ್ಲಿ ಪ್ರತಿ
ಒಂದು ಶ್ಲೋಕಕ್ಕೂ ಒಂದು ರಾಗ ಮತ್ತು ತಾಳವನ್ನು ಕೊಟ್ಟಿದೆ ಆದರೆ ಈಗ
ಅವುಗಳನ್ನು ಬೇರೆ ಬೇರೆ ರಾಗಗಳಲ್ಲಿ ಹಾಡುತ್ತಾರೆ. ರಾಣಾ ಕುಂಭನು ತನ್ನ
ಕಾಲದಲ್ಲಿ ಬಳಕೆಯಲ್ಲಿದ್ದವು ಎಂದು ಹೇಳಲಾಗಿರುವ ರಾಗಗಳನ್ನು ಕೊಟ್ಟಿದ್ದಾನೆ.
ಉತ್ತರ ಭಾರತದಲ್ಲಿ ಒಂದೊಂದು ಕಡೆ ಒಂದೊಂದು ರಾಗವು ಬಳಕೆಯಲ್ಲಿದೆ.
ಕೇದಾರ, ಗುರ್ಜರೀ, ಗುಣಕರೀ, ದೇಶಾಂಕ, ಭೈರವ, ವರಾಡಿ, ವಿಭಾಸ ರಾಗಗಳಲ್ಲಿ
ಸುಂದರವಾದ ಸರ್ಗಗಳನ್ನು ಗೇಯಗುಣ ಪ್ರಧಾನವಾಗಿ ರಚಿಸಿದ್ದಾನೆ. ಈ
ದೃಷ್ಟಿಯಿಂದಲೂ
ಶ್ರವಣಸುಖಕ್ಕೆ ಪ್ರೌಢ ನಿದರ್ಶನವಾದ
ಅತ್ಯುತ್ತಮ ಕಾವ್ಯ. ಪಾಂಡಿತ್ಯ, ರಸಿಕತೆ, ಭಕ್ತಿಗಳ ಮಧುರ ಸಂಗಮವನ್ನು
ಕಾಣಬಹುದು. ಕರ್ಣಾಟಕ ಸಂಗೀತದ ರಾಗಗಳನ್ನು ಕೊಟ್ಟಿರುವವರು ತಿರುಮಲ
ರಾಜಪಟ್ಟಣದ ರಾಮುಡು ಭಾಗವತರು
ಗೀತಗೋವಿಂದದ ಅಷ್ಟಪದಿಗಳು ಅಖಿಲ ಭಾರತದ ಪ್ರಸಿದ್ಧಿ ಪಡೆದಿವೆ.
ಸಂಗೀತ ಕಚೇರಿಗಳಲ್ಲಿ ಒಂದೆರಡು ಅಷ್ಟಪದಿಗಳನ್ನು ಹಾಡುವ ಸಂಪ್ರದಾಯವಿದೆ.
ಸಂಗೀತವು ಕರ್ಣಾಟಕ ಮತ್ತು ಹಿಂದೂಸ್ಥಾನಿ ಎಂಬ ಎರಡು ಶಾಖೆಗಳಾಗುವ
ಮುನ್ನವೇ ಈ ಕಾವ್ಯವನ್ನು ರಚಿಸಲಾಗಿತ್ತು. ಈ ಅಷ್ಟ ಪದಿಗಳು ದ್ವಿಧಾತು
ಪ್ರಬಂಧಗಳು. ಇದರಲ್ಲಿ ಉತ್ಸಾಹ ಮತ್ತು ಧ್ರುವ ಎಂಬ ಎರಡು ಭಾಗಗಳಿವೆ.
ಇವೇ ಮುಂದೆ ಪಲ್ಲವಿ ಮತ್ತು ಚರಣ ಎಂದಾದುವು. ಈ ಕಾವ್ಯದಲ್ಲಿ ದ್ವಿತೀಯಾಕ್ಷರ
ಪ್ರಾಸವಿಲ್ಲ. ಅಂತ್ಯ ಪ್ರಾಸಗಳಿವೆ. ವಾಗ್ಗೇಯಕಾರರಲ್ಲಿ ಜಯದೇವನ ಸ್ಥಾನ
ಹಿರಿದಾದುದು. ಪ್ರತಿಯೊಂದು ಗೀತೆಯ ಕೊನೆಯಲ್ಲಿ ಮಂಗಳ ಶ್ಲೋಕಗಳಿವೆ.
ಜಯದೇವನು ಈ ಕಾವ್ಯವನ್ನು ರಚಿಸಿ ಪೂರ್ತಿಗೊಳಿಸಿದ ಸ್ಥಳಕ್ಕೆ ಜಯದೇವಪುರ